ಮಲೆನಾಡ ಹುಡುಗರ ಲಾಸ್ಟ್ ಇನ್ ಕಿರುಚಿತ್ರ ಸಕ್ಸಸ್!
– ಸುಧನ್ವ ಗಡಿಕಲ್ ನಿರ್ದೇಶನದ ಶಾರ್ಟ್ ಮೂವಿ
– ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಸಹಭಾಗಿತ್ವ
ಕೊಪ್ಪ/ ತೀರ್ಥಹಳ್ಳಿ: ಲಾಸ್ಟ್ ಇನ್ (Lost In) ಕನ್ನಡ ಕಿರುಚಿತ್ರ ರಾಜ್ಯೋತ್ಸವದಂದು “SG Days” YouTube Channelನಲ್ಲಿ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಮೊಬೈಲ್ ಹಾಗೂ ಸಾಮಾಜಿಕ ಜಾಲ ತಾಣ ಬಳಕೆ ಹೇಗೆ ಯುವ ಜನರ ಬದುಕು, ಕ್ರಿಯಾಶೀಲತೆಯನ್ನು ಹಾಗೂ ಮಾನಸಿಕ ಸ್ವಾಸ್ತ್ಯ ಹಾಳು ಮಾಡುತ್ತಿದೆ ಎಂಬ ಕಥೆ ಉಳ್ಳ ಈ ಕಿರುಚಿತ್ರ ಒಳ್ಳೆ ಸಂದೇಶ ನೀಡಿದ್ದು, ಸಿನಿ ಆಸಕ್ತರ ಗಮನ ಸೆಳೆದಿದೆ.
ಸುಧನ್ವ ಗಡಿಕಲ್ ನಟಿಸಿ, ನಿರ್ದೇಶಕರಾಗಿರುವ ಈ ಕಿರು ಚಿತ್ರದಲ್ಲಿ ಸಚಿನ್ ಉತ್ತಮೇಶ್ವರ, ಪ್ರದೀಪ್ ಕತ್ತಲಗಿರಿ, ಅಥರ್ವ ಪ್ರದೀಪ್, ರಿಧಿತ್ ಜಿ. ಆರ್ ನಟಿಸಿದ್ದಾರೆ.
ಲಾಸ್ಟ್ ಇನ್ ಕನ್ನಡ ಕಿರುಚಿತ್ರವು ಪ್ರಸ್ತುತ ಸಮಯದ ಹೆಚ್ಚಾಗಿ ಕಂಡುಬರುತ್ತಿರುವ ಒಂದು ವ್ಯಸನದ ಬಗ್ಗೆ ಜಾಗೃತಿ ಮೂಡಿಸಲು ಮಾಡಿರುವಂತ ಕಿರು ಚಿತ್ರ ಇದಾಗಿದೆ. ಮಲೆನಾಡಿನ ಕ್ರಿಯಾಶೀಲ ಹಾಗೂ ಹೊಸಬರ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹಿಸಲು ಕೋರಲಾಗಿದೆ.
ಸುಧನ್ವ ಗಡಿಕಲ್ ಈಗಾಗಲೇ ತಮ್ಮ ಎಸ್ ಜಿ ಡೇಸ್ ಎಂಬ ಇನ್ಸ್ಟಾಗ್ರಾಮ್ ಹಾಗೂ ಯೂ ಟ್ಯೂಬ್ ಚಾನಲ್ ಮೂಲಕ ಮಲೆನಾಡ ಸಂಪ್ರದಾಯ, ಆಚರಣೆ, ಪದ್ಧತಿ, ಪ್ರವಾಸದ ಬಗ್ಗೆ ಜಾಗೃತಿ ವಿಡಿಯೋ ಮಾಡುತ್ತಿದ್ದಾರೆ.ಕೊಪ್ಪ ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಎಂ. ಕಾಂ ಓದುತ್ತಿರುವ ಸುಧನ್ವ ಹೊಸ ಭರವಸೆ ಮೂಡಿಸಿದ್ದಾರೆ.
ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಸಹಭಾಗಿತ್ವ
ಮಲೆನಾಡ ಯಾವುದೇ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಸಹಭಾಗಿತ್ವ ನೀಡಲಿದೆ. ಈ ಮೂಲಕ ಕಲೆ, ಕಲಾವಿದರು, ಕ್ರಿಯಾಶೀಲ ಸಾಧಕರ ಸಾಧನೆ ಪಯಣಕ್ಕೆ 10 ವರ್ಷ ಸಂಭ್ರಮದಲ್ಲಿರುವ ರಾಜ್ಯದ ನಂ.1 ಕ್ರಿಯಾಶೀಲ ಮಾಧ್ಯಮ ಸಂಸ್ಥೆ ಕೈಜೋಡಿಸಲಿದೆ.
ಸಹಭಾಗಿತ್ವ ಸಂಪರ್ಕಕ್ಕಾಗಿ: 9480505800( ವಾಟ್ಸಾಪ್ )








