ತೀರ್ಥಹಳ್ಳಿಯಲ್ಲಿ ಮೊದಲ ದಿನದ ಮಲ್ನಾಡೋತ್ಸವ ಯಶಸ್ವಿ..!!
– ಮಲ್ನಾಡೋತ್ಸವದಲ್ಲಿ ಶಾಸಕ ಆರಗ ಜ್ಞಾನೇಂದ್ರ ಭಾಗಿ
– ಸಂಗೀತ ಕಾರ್ಯಕ್ರಮ ಜನರ ಗಮನ ಸೆಳೆಯಿತು

NAMMUR EXPRESS NEWS
ತೀರ್ಥಹಳ್ಳಿ : ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ 10 ನೇ ವರ್ಷದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ ಮಲ್ನಾಡೋತ್ಸವ – 2025 ಮೊದಲ ದಿನ ಯಶಸ್ವಿಗೊಂಡಿತು.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಹಾಗೂ ಪಟ್ಟಣ ಪಂಚಾಯಿತಿ ಆವರಣದಲ್ಲಿ ಸುಮಾರು 70 ಹೆಚ್ಚು ವಿವಿಧ ಮಳಿಗೆಗಳು ಇಡೀ ತಾಲೂಕಿನ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕೃಷಿ ಮೇಳ, ಆರೋಗ್ಯ ಮೇಳ, ಆಹಾರ ಮೇಳ, ಶೈಕ್ಷಣಿಕ ಮೇಳ ಹಾಗೂ ಕಲಾ ಮೇಳಗಳು ಅದ್ದೂರಿಯಾಗಿ ಉದ್ಘಾಟನೆಗೊಂಡಿದ್ದು, ಮಲೆನಾಡಿನ ಬಹುತೇಕ ಗಣ್ಯರು ಆಗಮಿಸಿ ಉದ್ಘಾಟನೆ ಮಾಡಿದ್ದರು. ಮಲೆನಾಡಿನ ಬಹುತೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕೂಡ ನೆರವೇರಿತು. ಸಾವಿರಾರು ಜನರು ಈ ಮಲ್ನಾಡೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿದ್ದರು ದಿಯಾ ಹೆಗಡೆ ಮತ್ತು ಸಾಧ್ವಿನಿ ಕೊಪ್ಪ ಮತ್ತು ಸರಿಗಮಪ ಕಲಾವಿದರ ಕಾರ್ಯಕ್ರಮ ಗಮನ ಕಳೆಯಿತು. ಮೊದಲ ದಿನದ ಮಲ್ನಾಡೋತ್ಸವ ಕಾರ್ಯಕ್ರಮ ಯಶಸ್ವಿಗೊಂಡಿತು.

ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ
– 50ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗಿ
– 500ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಭಾಗಿ

NAMMUR EXPRESS NEWS
ತೀರ್ಥಹಳ್ಳಿಯಲ್ಲಿ ಮೊದಲ ಬಾರಿಗೆ ಬೃಹತ್ ಉದ್ಯೋಗ ಮೇಳ ನಡೆಯುತ್ತಿದ್ದು. 50ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿವೆ. 500ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗಿಯಾಗಿದ್ದಾರೆ. ಉದ್ಯೋಗ ಮೇಳ ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ನಡೆಯಲಿದ್ದು, ಉದ್ಯೋಗ ಆಕಾಂಕ್ಷಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಬೆಂಗಳೂರಿನ ಪ್ರತಿಷ್ಠಿತ ಹಾಗೂ ಮಲೆನಾಡಿನ ಕಂಪನಿಗಳು ಭಾಗವಹಿಸಿದೆ. ತೀರ್ಥಹಳ್ಳಿಯಲ್ಲಿ ಬೃಹತ್ ಎಕ್ಸ್ಪೋ ನಡೆಯುತ್ತಿದ್ದು ಆಹಾರ, ಕೃಷಿ ಉಪಕರಣಗಳ ಹಾಗೂ ಕೃಷಿ ತಂತ್ರಜ್ಞಾನಗಳು,ಬಟ್ಟೆ, ಫ್ಯಾಷನ್, ಆಹಾರ ಮಳಿಗೆಗಳು ಸಾವಿರಾರು ಜನರೆಲ್ಲ ಕೈಬೀಸಿ ಸೆಳೆಯುತ್ತಿದೆ. ಮೇ 10 ಮೊದಲ ದಿನ ಸುಮಾರು 3000ಕ್ಕೂ ಹೆಚ್ಚು ಜನ ಭೇಟಿ ನೀಡಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಲೆನಾಡಿನ ಸಮಸ್ತ ಜನತೆ ತೀರ್ಥಹಳ್ಳಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಮೇ 11 ಸಂಜೆ 6 ಗಂಟೆಗೆ ಬಿಡುವನೇ ಬ್ರಹ್ಮಲಿಂಗ ವಿಶೇಷ ಧಾರ್ಮಿಕ ನೃತ್ಯ ರೂಪಕ ಕಾರ್ಯಕ್ರಮ ಹಾಗೂ ಡ್ಯಾನ್ಸ್ ಎಕ್ಸ್ಪ್ರೆಸ್, ಕಾಮಿಡಿ ಕಾರ್ಯಕ್ರಮಗಳು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಿಯಾಲಿಟಿ ಶೋ ತಾರೆಗಳು ಸೇರಿದಂತೆ ಪ್ರಸಿದ್ಧ ನಟ ನಟಿಯರು ಭಾಗಿಯಾಗಲಿದ್ದಾರೆ.

ತೀರ್ಥಹಳ್ಳಿಯಲ್ಲಿ ಮಲ್ನಾಡೋತ್ಸವ: ಇಂದು ಸಂಜೆ ಡ್ಯಾನ್ಸ್
– ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಅದ್ದೂರಿ ಕಾರ್ಯಕ್ರಮ
ರಂಗು ಶುರು!
– ಬಟ್ಟೆ, ಆಹಾರ, ಫ್ಯಾಷನ್, ಕೃಷಿ ಮಳೆಗಳ ವಿಶೇಷ ಆಕರ್ಷಣೆ

NAMMUR EXPRESS NEWS
ತೀರ್ಥಹಳ್ಳಿ : ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ 10 ನೇ ವರ್ಷದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿರುವ ಮಲ್ನಾಡೋತ್ಸವ – 2025ರಲ್ಲಿ ಇಂದು ಸಂಜೆ ಡಾನ್ಸ್ ಎಕ್ಸ್ ಪ್ರೆಸ್ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಪ್ರಸಿದ್ಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.
ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ ಹಾಗೂ ಪಟ್ಟಣ ಪಂಚಾಯಿತಿ ಆವರಣದಲ್ಲಿ ಸುಮಾರು 70 ಹೆಚ್ಚು ವಿವಿಧ ಮಳಿಗೆಗಳು ಜನರನ್ನು ಆಕರ್ಷಣೆ ಮಾಡಿವೆ. ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 60ಕ್ಕೂ ಹೆಚ್ಚು ಕೃಷಿ, ಆಹಾರ, ಫ್ಯಾಶನ್ ಹಾಗೂ ಆಟೋ, ರಿಯಲ್ ಎಸ್ಟೇಟ್ ಮುಂತಾದ ಮಳಿಗೆಗಳು ಬಂದಿದ್ದು, ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನ ಸಮಸ್ತ ಜನರನ್ನು ಆಯೋಜಕರು ಸ್ವಾಗತಿಸಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇ 11ರ ಸಂಜೆ 6ರಿಂದ ರಾತ್ರಿವರೆಗೆ ರಾಜ್ಯದ ಪ್ರಸಿದ್ಧ ನೃತ್ಯ ಕಲಾವಿದರಿಂದ ಡಾನ್ಸ್ ಎಕ್ಸ್ಪ್ರೆಸ್ ನಡೆಯಲಿದೆ.

ಕೃಷಿ ಸಂವಾದ, ರೈತ ಸಾಧಕರಿಗೆ ಹಾಗೂ ಕೃಷಿ ಸ್ಟಾರ್ಟ್ ಅಪ್ ಗೌರವ
– ಮಲೆನಾಡಿನ ನೂರಕ್ಕೂ ಹೆಚ್ಚು ಕಲಾವಿದರು, ಗಾಯಕರ ಸಮಾಗಮ
– ಬೆಳಿಗ್ಗೆ 10ರಿಂದ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ಆಹಾರ, ಕೃಷಿ, ಫ್ಯಾಷನ್ ಮೇಳ: ಇಂದು ಮಲೆನಾಡೋತ್ಸವಕ್ಕೆ ತೆರೆ
– ಖ್ಯಾತ ಗಾಯಕರ ಸಾಂಗ್, ಕುಳ್ಳಪ್ಪು ತಂಡದ ಕಾಮಿಡಿ, ರಿಯಾಲಿಟಿ ಶೋ ಕಲಾವಿದರ ಶೋ

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರ ಆವರಣದಲ್ಲಿ ಅದ್ದೂರಿ ಮಲ್ನಾಡೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಸೋಮವಾರ ಬೆಳಿಗ್ಗೆ 10:30ಕ್ಕೆ ಕೃಷಿ ಸಂವಾದ, ರೈತ ಸಾಧಕರಿಗೆ ಹಾಗೂ ಕೃಷಿ ಸ್ಟಾರ್ಟ್ ಅಪ್ ಗೌರವ, ಮಲೆನಾಡ ಕಲಾವಿದರ ಸಂಗಮ, ಬಟ್ಟೆ, ಆಹಾರ, ಫ್ಯಾಷನ್, ಕೃಷಿ ಮಳೆಗಳ ವಿಶೇಷ ಆಕರ್ಷಣೆ ನಡೆಯಲಿದೆ.
ಕೃಷಿ ಸಂವಾದ, ರೈತ ಸಾಧಕರಿಗೆ ಹಾಗೂ ಕೃಷಿ ಸ್ಟಾರ್ಟ್ ಅಪ್ ಗೌರವ ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಕೃಷಿ ಅಧಿಕಾರಿಗಳು, ತಂತ್ರಜ್ಞರು ಭಾಗಿಯಾಗಲಿದ್ದಾರೆ. ತೀರ್ಥಹಳ್ಳಿ ರೈತ ಸಂಘದ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಕಳೆದ 2 ದಿನಗಳಿಂದ ನಡೆಯಲಿರುವ ಆಹಾರ, ಕೃಷಿ, ಫ್ಯಾಷನ್ ಮೇಳ, ಇಂದು ರಾತ್ರಿ ತೆರೆ ಕಾಣಲಿದೆ. ಸಂಜೆ 5ರಿಂದ ಖ್ಯಾತ ಗಾಯಕರ ಸಾಂಗ್, ಕುಳ್ಳಪ್ಪು ತಂಡದ ಕಾಮಿಡಿ, ರಿಯಾಲಿಟಿ ಶೋ ಕಲಾವಿದರ ಶೋ ನಡೆಯಲಿದೆ.

ತೀರ್ಥಹಳ್ಳಿಯಲ್ಲಿ ಇಂದು ಕುಳ್ಳಪ್ಪು ತಂಡದ ಕಾಮಿಡಿ ಶೋ!
– ರಿಯಾಲಿಟಿ ಶೋ ಕಲಾವಿದರ ಸಂಗೀತ, ಕಾಮಿಡಿ ಕಾರ್ಯಕ್ರಮ
– ಬಟ್ಟೆ, ಆಹಾರ, ವಿಶೇಷ ಮಕ್ಕಳ ಆಟಿಕೆಗಳ ಮಳಿಗೆ
– ಬನ್ನಿ.. ಮನೋರಂಜನೆಯ ಕಾರ್ಯಕ್ರಮಕ್ಕೆ ಸುಸ್ವಾಗತ

NAMMUR EXPRESS NEWS
ತೀರ್ಥಹಳ್ಳಿ: ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸಂಸ್ಥೆಯ ದಶಮಾನೋತ್ಸವ ಸಂಭ್ರಮ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನೂರಾರು ಮಳಿಗೆಗಳ ಪ್ರದರ್ಶನ ತೀರ್ಥಹಳ್ಳಿ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ನಡೆಯುತ್ತಿದೆ. ವಿವಿಧ ಬಗೆಯ ಆಹಾರ ಸ್ಟಾಲ್, ವಿಶೇಷ ಖಾದ್ಯ, ಆಟಿಕೆ, ಬಟ್ಟೆ, ಫ್ಯಾಷನ್ ವಸ್ತುಗಳ ಪ್ರದರ್ಶನ, ಗುಡಿ ಕೈಗಾರಿಕೆ, ಮಲೆನಾಡ ಉತ್ಪನ್ನಗಳ ಪ್ರದರ್ಶನ, ಚಿತ್ರ ಕಲೆ, ಕಾರ್ಟೂನ್, ಫೋಟೋಗ್ರಫಿ ಪ್ರದರ್ಶನ, ಸೀರೆ ಬಟ್ಟೆಗಳು ಲಭ್ಯ ಇದೆ.
ಮೇ 12, ಬೆಳಿಗ್ಗೆ 10ಕ್ಕೆ ಕೃಷಿ ಸಂವಾದ ನಡೆದಿದ್ದು ಕಾಮಿಡಿ ಶೋ ನಡೆಯಲಿದೆ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಾತ್ರರಾದ ಪ್ರಸಿದ್ಧ ಮೂರು ಮುತ್ತು ತಂಡದ ಕಾಮಿಡಿ ಶೋ ಹಾಗೂ
ಪ್ರಸಿದ್ಧ ಕಲಾವಿದರ ಕಾಮಿಡಿ ಶೋ, ಸಂಗೀತ ವೈಭವ ನಡೆಯಲಿದೆ.

ಮಲೆನಾಡಿನ ಹೆಮ್ಮೆಯ ಕಾರ್ಯಕ್ರಮಕ್ಕೆ ನೀವೂ ಬನ್ನಿ ನಿಮ್ಮ ಸ್ನೇಹಿತರನ್ನು ಕರೆ ತನ್ನಿ…ಎಲ್ಲಾ ಸ್ನೇಹಿತರಿಗೆ ಶೇರ್ ಮಾಡಿ…

ಮಲ್ನಾಡೋತ್ಸವ -2025 ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳು

10 ವರ್ಷದ ಸೇವೆಗೆ ಹಾದಿಯ ಜತೆ ಮುಂದೆ ಮತ್ತಷ್ಟು ಸೇವೆಯೊಂದಿಗೆ…

ನಿಮ್ಮ ಸಲಹೆ ಸಹಕಾರ ಹೀಗೆ ಇರಲಿ..

ರಾಜ್ಯದ ಪ್ರಸಿದ್ಧ ಮಾಧ್ಯಮ ಸಂಸ್ಥೆ ನಮ್ಮೂರ್ ಎಕ್ಸ್ ಪ್ರೆಸ್ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಮಲ್ನಾಡೋತ್ಸವ -2025 ಕಾರ್ಯಕ್ರಮದಲ್ಲಿ ಸುಮಾರು ಆರರಿಂದ ಏಳು ಸಾವಿರ ಮಂದಿ ಮೂರು ದಿನಗಳ ಕಾಲ ಭಾಗಿಯಾದರು. ಈ ಕಾರ್ಯಕ್ರಮ ಮಲೆನಾಡು ಮಾತ್ರವಲ್ಲದೆ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಯಿತು.
ಮಲೆನಾಡಿನ ಖ್ಯಾತ ರಾಜಕೀಯ, ಧಾರ್ಮಿಕ, ಸಾಹಿತ್ಯ, ಕಲೆ, ಕೃಷಿ, ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕೃಷಿ ಹಾಗೂ ಶೈಕ್ಷಣಿಕ ಸಮ್ಮೇಳನ, ಆಹಾರ ಮೇಳ, ಆರ್ಟ್ ಎಕ್ಸ್ಪೋ, ಉದ್ಯೋಗ ಹಾಗೂ ಕೌಶಲ್ಯ ಮೇಳ, ಸ್ಟಾರ್ಟ್ ಅಪ್ ಹಾಗೂ ಮಹಿಳಾ ಉದ್ಯಮಿಗಳ ಸಮಾವೇಶ, ಮ್ಯೂಸಿಕ್ ನೈಟ್ಸ್, ಡ್ಯಾನ್ಸ್ ಎಕ್ಸ್ಪ್ರೆಸ್, ಕಾಮಿಡಿ ಶೋ, ಮಕ್ಕಳ ಸ್ಪರ್ಧೆ ಸೇರಿ ಅನೇಕ ಕಾರ್ಯಕ್ರಮಗಳು ಪ್ರತಿ ದಿನ 4 ವೇದಿಕೆಯಲ್ಲಿ ನಡೆದವು. ಮಲೆನಾಡಿನ ನೂರಾರು ಗಣ್ಯರು ಭಾಗಿಯಾದರು.
ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಅನೇಕ ಸಂಘಟನೆಗಳು ಸಂಘ ಸಂಸ್ಥೆಗಳು, ಪದಾಧಿಕಾರಿಗಳು, ಎಲ್ಲಾ ಕ್ಷೇತ್ರದ ಪ್ರಮುಖರು, ಸಮಸ್ತ ಜನತೆ ಭಾಗಿಯಾದರು.

ಸುಮಾರು 30 ಲಕ್ಷ ವೆಚ್ಚದಲ್ಲಿ ನಡೆದ ಈ ಕಾರ್ಯಕ್ರಮ ನಿಮ್ಮ ಸಹಕಾರದಿಂದ ನಡೆದಿದೆ. 10 ವರ್ಷ ರಾತ್ರಿ ಹಗಲು ಸೇವೆ ಮೂಲಕ ಜನರ ಮನ ಗೆದ್ದಿರುವ ಸಂಸ್ಥೆ ನಿಮ್ಮ ತನು ಮನ ಧನ ಸಹಕಾರದ ನಿರೀಕ್ಷೆಯಲ್ಲಿದೆ.

ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಧನ್ಯವಾದಗಳು

ಜನರ ಜತೆ ಸದಾ ನಮ್ಮೂರ್ ಎಕ್ಸ್ ಪ್ರೆಸ್ ಇರಲಿದೆ.

ಸಂಪಾದಕರು


This content is protected