ಗೋಪಾಲ್ ಯಡಗೆರೆ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ
– ಫೆ. 21,22ರಂದು ನರಸಿಂಹರಾಜಪುರ 10ನೇ ಕನ್ನಡ ಸಾಹಿತ್ಯ ಸಮ್ಮೇಳನ
– ಪತ್ರಿಕರ್ತ, ಸಾಹಿತಿಯಾಗಿ ಮಲೆನಾಡಿಗೆ ಕೊಡುಗೆ ನೀಡಿರುವ ಗೋಪಾಲ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನರಸಿಂಹರಾಜಪುರ: ನರಸಿಂಹರಾಜಪುರ ತಾಲ್ಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 21ರ ಶನಿವಾರ ಹಾಗೂ 22ರ ಭಾನುವಾರದಂದು ಬೆಳ್ಳೂರಿನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಡಮಾಡುವ ‘ಸಾಹಿತ್ಯ ಸಿರಿ’ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಗೋಪಾಲ್ ಎಸ್. ಯಡೆಗೆರೆ ಅವರು ಭಾಜನರಾಗಿದ್ದಾರೆ.
ಗೋಪಾಲ್ ಎಸ್. ಯಡಗೆರೆ ಅವರು ಮೂಲತಃ ನರಸಿಂಹರಾಜಪುರ ತಾಲ್ಲೂಕಿನ ಯಡಗೆರೆಯವರಾಗಿದ್ದು, 1988 ರಲ್ಲಿ ಪತ್ರಿಕೋದ್ಯಮ ಕ್ಷೇತ್ರವನ್ನು ಪ್ರವೇಶಿಸಿ, ಉದಯವಾಣಿಯ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಶಿವಮೊಗ್ಗದ ಕನ್ನಡ ಪ್ರಭ ಪತ್ರಿಕೆಯ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2021ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ಸದಸ್ಯರನ್ನಾಗಿ ನೇಮಕ ಮಾಡಿತ್ತು. ಈಗಾಗಲೇ ಗೋಪಾಲ್ ಎಸ್ ಅವರ ನಾನಾಗದ ನಾನು ಎನ್ನುವ ಕವನಸಂಕಲನ ಮತ್ತು ಸೋಲನ್ನು ಸೋಲಿಸು ಹಾಗೂ ಮಿಸ್ಸಿಂಗ್ ಕಾಲ್ ಎನ್ನುವ ಕೃತಿಗಳನ್ನು ರಚಿಸಿದ್ದಾರೆ. ಗೋಪಾಲ್ ಎಸ್ ಅವರ ಲೇಖನಗಳು ಉದಯವಾಣಿ, ಕನ್ನಡ ಪ್ರಭ, ತರಂಗ,ತುಷಾರಗಳಲ್ಲಿ ಪ್ರಕಟಗೊಂಡಿವೆ. ಮಲೆನಾಡಿನ ಹಿರಿಯ ಪತ್ರಕರ್ತರಾಗಿದ್ದಾರೆ.








