ರಾಜ್ಯದಲ್ಲಿ ತಾಲಿಬಾನ್ ಮಾದರಿ ಸರ್ಕಾರ!
– ಕಾಂಗ್ರೆಸ್ ವಿರುದ್ಧ ಮಂಗಳೂರಿನಲ್ಲಿ ಆರ್. ಅಶೋಕ್ ಕಿಡಿ
– ಸಿಎಂ ಸಿದ್ದರಾಮಯ್ಯ ಮೈಮೇಲೆ ಟಿಪ್ಪು ಬಂದಂತೆ ವರ್ತನೆ!
– ಚೂರಿ ಇರಿತಕ್ಕೆ ಒಳಗಾದ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರದಿಸಿದ ಬಿಜೆಪಿ ನಾಯಕರು
NAMMUR EXPRESS NEWS
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಾಲಿಬಾನ್ ಮಾದರಿಯ ಆಡಳಿತ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯನವರು ಟಿಪ್ಪು ಮೈಮೇಲೆ ಬಂದಂತೆ ವರ್ತಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದ ವಿಜಯೋತ್ಸವದ ವೇಳೆ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ಚೂರಿ ಇರಿತಕ್ಕೆ ಒಳಗಾಗಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಶೋಕ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಈ ಇಬ್ಬರು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾತನಾಡಿದ ಅವರು, ಬಂಟ್ವಾಳ ತಾಲೂಕಿ ಬೊಳಿಯಾರ್ನಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿದ್ದ ಬಿಜೆಪಿ ಕಾರ್ಯಕರ್ತರನ್ನು ಡ್ರ್ಯಾಗನ್ನಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ. ದೇಶದಲ್ಲಿ ಎಲ್ಲಿಯೂ ದೇಶಕ್ಕೆ ಜೈ ಅಂದಲ್ಲಿ ಸನ್ಮಾನ ಮಾಡ್ತಾರೆ. ಆದರೆ ಕರ್ನಾಟಕದಲ್ಲಿ ಹಾಗೂ ಮಂಗಳೂರು- ಉಡುಪಿ ಭಾಗದಲ್ಲಿ ಭಾರತ್ ಮಾತಾ ಕಿ ಜೈ ಅಂದಲ್ಲಿ ಡ್ರಾಗನ್ ಹಾಕುವ ಕೃತ್ಯಗಳಾಗುತ್ತಿದ್ದು, ರಾಜ್ಯದಲ್ಲಿ ತಾಲಿಬಾನ್ ಸರಕಾರ ಇದೆ. ಈ ಸರಕಾರವನ್ನು ಪ್ರಶ್ನಿಸಲು ಹೇಳೋರೂ ಕೇಳೋರು ಯಾರು ಇಲ್ಲದಾಗಿದೆ ಎಂದರು.
ಕಾರ್ಯಕರ್ತರು ಭಾರತ್ ಮಾತಾ ಕೀ ಬಿಟ್ಟು ಬೇರೇನೂ ಘೋಷಣೆ ಹಾಕಿಲ್ಲ. ಒಂದುವೇಳೆ ಬೇರೆ ಘೋಷಣೆ ಹಾಕಿದ್ದರೆ ಅದಕ್ಕೆ ಪೊಲೀಸರು ದಾಖಲೆಯನ್ನು ನೀಡಲಿ ಎಂದರು.
ಮಾರಣಾಂತಿಕ ಹಲ್ಲೆ ಡ್ರಾಗನ್, ಚೂರಿ ಹಿಡಿದುಕೊಂಡು ನಡೆಸಿರುವುದು ಗಮನಿಸಿದರೆ, ಇದೊಂದು ಪೂರ್ವಯೋಜಿತ ಕೃತ್ಯ. ತಕ್ಷಣಕ್ಕೆ ಡ್ರಾಗನ್ ಚೂರಿ ಎಲ್ಲಿಂದ ಬರುತ್ತದೆ? ಭಾರತ್ ಮಾತಾ ಕಿ ಜೈ ಅನ್ನುವ ಘೋಷಣೆ ವೀಡಿಯೋ ಗಮನಿಸಿದ್ದೇನೆ. ಮಸೀದಿ ಮುಂದೆ ಭಾರತ್ ಮಾತಾ ಕಿ ಜೈ ಅಂದಿದ್ದಾರೆ. ಹಿಂದಿನ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಬೆಂಗಳೂರು ಶಿವಾಜಿನಗರ ಕೊಲೆಗಳಾಯಿತು. ಅಲ್ಲದೆ ಇಡೀ ರಾಜ್ಯದಲ್ಲೇ 30-40 ಕೊಲೆಗಳೇ ನಡೆದಿದೆ. ಇದೀಗ ಮತ್ತೆ ಕರ್ನಾಟಕ ಕೊಲೆಗಳ ರಾಜ್ಯ ಆಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯು ತನ್ನ ಕಾರ್ಯಕರ್ತರ ಮೇಲಾಗಿರುವ ಈ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದೆ. ನಾಳೆ ಬೆಂಗಳೂರಿನ್ಲಲಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಆ ಮೂಲಕ ವಿಧಾನಸಭೆಯಲ್ಲಿ ಹೋರಾಟ ಸೇರಿದಂತೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ಗಾಯಾಳುಗಳಿಗೆ ಜಿಲ್ಲಾಡಳಿತ ಚಿಕಿತ್ಸೆಯ ವೆಚ್ಚ ನೀಡಬೇಕು. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಾಕಲಾದ ಕೇಸನ್ನು ವಾಪಾಸ್ ಪಡೆಯಬೇಕು. ಪಕ್ಷದಿಂದಲೂ ನೆರವು ನೀಡಲಾಗುವುದು. ಬಿಜೆಪಿ ಕಾರ್ಯಕರ್ತರು ಹೆದರಬೇಕಾಗಿಲ್ಲ. ಅವರ ಜತೆ ಪಕ್ಷ ನಿಲ್ಲುತ್ತದೆ. ರಾಜ್ಯ ಕಾಂಗ್ರೆಸ್ನ ಸಾಧನೆ ಕಳೆದ ಒಂದು ವರ್ಷದಲ್ಲಿ ಶೂನ್ಯ. ಇದು ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಅಶೋಕ್ ಹೇಳಿದ್ದಾರೆ.