ಒಂದೇ ಕುಟುಂಬದ ನಾಲ್ವರ ಸಾವು
– ಮೈಸೂರಲ್ಲಿ ನೆಡೆದ ದುರಂತ ಘಟನೆ
NAMMUR EXPRESS NEWS
ಮೈಸೂರು: ನಗರದ ಯರಗನಹಳ್ಳಿಯಲ್ಲಿ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು, ಮೇ 21ರ ರಾತ್ರಿ ಮಲಗಿದ್ದಲ್ಲೇ ನಿಗೂಢವಾಗಿ ಅಸುನೀಗಿರುವ ಘಟನೆ ನಡೆದಿದೆ. ಪತಿ, ಪತ್ನಿ, ಇಬ್ಬರು ಮಕ್ಕಳು ಮಲಗಿದ್ದಲ್ಲಿಯೇ ಅಸುನೀಗಿದ್ದು, ಮೃತರನ್ನು ಕುಮಾರಸ್ವಾಮಿ (45), ಪತ್ನಿ ಮಂಜುಳ (39) ಮಕ್ಕಳಾದ ಅರ್ಚನಾ (19), ಸ್ವಾತಿ (17) ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅನಿಲ ಸೋರಿಕೆಯೇ ಇವರ ಸಾವಿಗೆ ಕಾರಣವಾಗಿರಬೇಹದುು ಎಂದು ಹೇಳಲಾಗಿದೆ.