ಕೇರಳದಲ್ಲಿ ಹೆಚ್ಚಾದ ವೆಸ್ಟ್ ನೈಲ್ ಜ್ವರ.!
– ಮೈಸೂರು ಗಡಿ ಭಾಗದಲ್ಲಿ ಅಲರ್ಟ್ ಆದ ಅಧಿಕಾರಿಗಳು
NAMMUR EXPRESS NEWS
ಮೈಸೂರು: ಪಕ್ಕದ ರಾಜ್ಯ ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಳ ಬಾಗುತಿದ್ದಂತೆ ಇದೀಗ ಮೈಸೂರು ಗಡಿಭಾಗದಲ್ಲಿ ಆರೋಗ್ಯ ಅಧಿಕಾರಿಗಳು ಅಲರ್ಟ್ ಆಗಿದ್ದು ಕೇರಳದಿಂದ ಮೈಸೂರಿಗೆ ಆಗಮಿಸುವ ವಾಹನಗಳ ತಪಾಸನೆ ಹಾಗೂ ಸವಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಳವಾಗುತ್ತಿದ್ದಂತೆ ಇತ್ತ ಮೈಸೂರು ಗಡಿ ಭಾಗದಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ.
ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಕೇರಳದಿಂದ ಬರುವ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದು, ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಕೇರಳದಿಂದ ಮೈಸೂರಿಗೆ ಆಗಮಿಸುವವರ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.