ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಆಹ್ವಾನ!
– ಶಿಕ್ಷಣ ಅರ್ಹತೆ: PUC ಪಾಸ್!
– 3,500ಕ್ಕೂ ಹೆಚ್ಚು ಹುದ್ದೆಗಳು!
– ಅರ್ಜಿ ಸಲ್ಲಿಕೆ ಹೇಗೆ? ಯಾವಾಗ?
NAMMUR EXPRESS NEWS
ನವದೆಹಲಿ: ಭಾರತೀಯ ವಾಯುಪಡೆ ಸೇನೆಯು ಪ್ರತಿ ವರ್ಷ ಅಗ್ನಿಪಥ ಯೋಜನೆಯ ಅಡಿಯಲ್ಲಿ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ವರ್ಷದ ಮೊದಲ ಅಧಿಸೂಚನೆ ಪ್ರಕಟಣೆ ಮಾಡಿದೆ.
• ನೇಮಕಾತಿ ಸಂಸ್ಥೆ: ಭಾರತೀಯ ವಾಯು ಸೇನಾ
• ಖಾಲಿ ಹುದ್ದೆಗಳು : 3,500ಕ್ಕೂ ಹೆಚ್ಚು ಹುದ್ದೆಗಳು
• ಹುದ್ದೆಗಳ ಹೆಸರು : ಅಗ್ನಿವೀರ ವಾಯು
• ಅರ್ಜಿ ಸಲ್ಲಿಕೆ : ಆನ್ ಲೈನ್ ಮುಖಾಂತರ
• ಉದ್ಯೋಗ ಸ್ಥಳ : ಭಾರತದಾದ್ಯಂತ
ವಿದ್ಯಾರ್ಹತೆ ಮತ್ತು ವಯೋಮಿತಿ ವಿವರ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇ.50 ಅಂಕಗಳೊಂದಿಗೆ ಪಾಸಾಗಿರಬೇಕು. ಅದೇ ರೀತಿ ಮೂರು ವರ್ಷ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದವರು ಅಥವಾ ಎರಡು ವರ್ಷಗಳ ವೊಕೇಶನಲ್ ಮತ್ತು ನಾನ್ ವೊಕೇಶನಲ್ ಕೋರ್ಸ್ ಮುಗಿಸಿದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ 2004ರ ಜನವರಿ 2 ಮತ್ತು 2007ರ ಜುಲೈ 2ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅದೇ ರೀತಿ ಗರಿಷ್ಠ ವಯಸ್ಸು ಮತ್ತು ಅಭ್ಯರ್ಥಿಗಳ ಎತ್ತರ ನೋಡುವುದಾದರೆ, ಗರಿಷ್ಟ ವಯಸ್ಸು ಯಾವುದೇ ಕಾರಣಕ್ಕೂ 21 ವರ್ಷ ಮೀರಿರಬಾರದು ಮತ್ತು ಕನಿಷ್ಠ ಎತ್ತರ 152.5 ಸೆಂ. ಇರಬೇಕು.
ಮಾಸಿಕ ಸಂಬಳ ಮತ್ತು ಆಯ್ಕೆ ವಿಧಾನ ಹೇಗೆ?
ಅಗ್ನಿಪಥ ಯೋಜನೆಗೆ ಸಂಬಂಧಿಸಿದ ಈ ನೇಮಕಾತಿಯ ಅಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷದ ಅವಧಿಗೆ ಪ್ರತಿ ವರ್ಷದ ಮಾಸಿಕ ಸಂಬಳ
• 1 ನೇ ವರ್ಷ: 30,000 ರೂಪಾಯಿ
• 2 ನೇ ವರ್ಷ: 33,000 ರೂಪಾಯಿ
• 3 ನೇ ವರ್ಷ : 36,500 ರೂಪಾಯಿ
• 4 ನೇ ವರ್ಷ: 40,000 ರೂಪಾಯಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲನೆಯ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುತ್ತಾರೆ. ಈ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಪಾಸಾದ ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನಂತರದಲ್ಲಿ ದಾಖಲಾತಿ ಪರಿಶೀಲನೆ ಮುಖಾಂತರ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಜಿ ಶುಲ್ಕಗಳ ವಿವರ
ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 550 ರೂಪಾಯಿ ನಿಗದಿಪಡಿಸಲಾಗಿದ್ದು, ಈ ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಮತ್ತೆ ಹಿಂಪಡೆಯಲು ಸಾಧ್ಯವಿಲ್ಲ.
ನೇಮಕಾತಿಯ ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 17-01-2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-02-2024
ಸಹಾಯ ವಾಣಿ : (011) 25699606