ಎಚ್ಚರಕ್ಕೆ! ನಿಮ್ಮ ಹೆಸರಲ್ಲೂ ನಕಲಿ ಸಿಮ್!
– ದೇಶಾದ್ಯಂತ 55 ಲಕ್ಷ, ರಾಜ್ಯದಲ್ಲಿ 25 ಸಾವಿರ ಸಂಪರ್ಕ ಕಡಿತ!
– ಹೊಸ ನಿಯಮವೇನು? ಸಿಮ್ ಪರಿಶೀಲನೆ ಹೇಗೆ?
NAMMUR EXPRESS NEWS
ನವದೆಹಲಿ: ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಹೀಗೆ ಪ್ರತಿಯೊಂದು ವೈಯಕ್ತಿಕ ದಾಖಲೆಯನ್ನೂ ನಕಲಿಯಾಗಿ ಸೃಷ್ಟಿಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇಂಥ ದಾಖಲೆಗಳನ್ನೇ ಕೊಟ್ಟು ‘ಸಿಮ್ ಕಾರ್ಡ್’ ಖರೀದಿಸುವ ದಂಧೆಯೂ ಹೆಚ್ಚಾಗುತ್ತಾ ಇದೆ. ಯಾರದ್ದೋ ಹೆಸರಲ್ಲಿ ಇನ್ಯಾರೋ ದಾಖಲೆ ಸಲ್ಲಿಸಿ ಖರೀದಿಸುವ ಸಿಮ್ ಕಾರ್ಡ್ ಗಳನ್ನು ಅಪರಾಧ ಕೃತ್ಯಕ್ಕೆ ಬಳಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಮಧ್ಯೆ ಜ.1ರಿಂದ ಅನುಷ್ಠಾನಕ್ಕೆ ಬಂದಿರುವ 2023ರ ದೂರಸಂಪರ್ಕ ಕಾಯ್ದೆಯಿಂದ ನಕಲಿ ಸಿಮ್ ಕಾರ್ಡ್ ದಂಧೆಗೆ ಕಡಿವಾಣ ಬೀಳುವ ಆಶಾಭಾವನೆ ವ್ಯಕ್ತವಾಗಿದೆ.
ಸೈಬರ್ ಕ್ರೖೆಂ, ಆರ್ಥಿಕ ಅಪರಾಧ, ಬ್ಯಾಂಕ್ಗಳಿಗೆ ವಂಚನೆ, ಭಯೋತ್ಪಾದನಾ ಚಟುವಟಿಕೆ ಹೀಗೆ ಪ್ರತಿಯೊಂದಕ್ಕೂ ನಕಲಿ ಸಿಮ್ಳನ್ನೇ ಬಳಸಿರುವುದು ಪೊಲೀಸ ತನಿಖೆಯಲ್ಲಿ ದೃಢಪಟ್ಟಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ದೇಶಾದ್ಯಂತ ಪೋರ್ಜರಿ ದಾಖಲೆ ಕೊಟ್ಟು ಖರೀದಿಸಿದ್ದ ಬರೋಬ್ಬರಿ 55.52 ಲಕ್ಷ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ (ಎನ್ಸಿಸಿಆರ್ಪಿ) ತನಿಖಾ ಸಂಸ್ಥೆಗಳು ಮಾಡಿದ ವರದಿ ಆಧರಿಸಿ ಸೈಬರ್ ಕ್ರೖೆಂ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿರುವ 2.78 ಲಕ್ಷ ಸಿಮ್ ಕಾರ್ಡ್ಗಳ ಸಂಪರ್ಕವನ್ನು ರದ್ದುಗೊಳಿಸಲಾಗಿದೆ.
ಹೊಸ ನಿಯಮವೇನು?
• 2024 ಜ.1 ರಿಂದ ಹೊಸ ದೂರಸಂಪರ್ಕ ಕಾಯ್ದೆ ಜಾರಿಯಾಗಿದ್ದು, ಸಿಮ್ ಕಾರ್ಡ್ ಖರೀದಿ ನಿಯಮ ಬಿಗಿ ಮಾಡಲಾಗಿದೆ.
- ಸಿಮ್ ಕಾರ್ಡ್ ಡೀಲರ್ಗಳು ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ಸ್ಗೆ ಒಳಗಾಗುವುದು ಕಡ್ಡಾಯವಾಗಿದೆ.
- ನೋಂದಣಿ ಮಾಡಿಸದೆ ಸಿಮ್ ಕಾರ್ಡ್ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಮಾರಾಟ ಮಾಡಿದರೆ ಡೀಲರ್ಗಳೇ ಹೊಣೆಗಾರರು.
• ನಿಯಮ ಪಾಲಿಸದ ಡೀಲರ್ಗಳಿಗೆ 10 ಲಕ್ಷ ರೂ. ದಂಡ ವಿಧಿಸಲು ಅವಕಾಶ.
*ಸೈಬರ್ ಕ್ರೈಂ, ಆರ್ಥಿಕ ಅಪರಾಧ, ಭಯೋತ್ಪಾದಕ ಕೃತ್ಯಕ್ಕೆ ಬಳಕೆ.
*ಡಿಜಿಟಲ್ ಅಕ್ರಮಕ್ಕೆ 2.78 ಲಕ್ಷ ಸಿಮ್ ಬಳಕೆ ಆಗಿರುವುದು ದೃಢ.
* ಜ.1ರಿಂದ ಜಾರಿಯಾದ ಹೊಸ ಕಾಯ್ದೆಯಿಂದ ಅಕ್ರಮಕ್ಕೆ ಕಡಿವಾಣ ನಿರೀಕ್ಷೆ.
ಸಿಮ್ ಪರಿಶೀಲನೆ ಹೇಗೆ?
• ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕನ್ಪ್ಯೂಮರ್ ಪ್ರೊಟೆಕ್ಷನ್ ವೆಬ್ಸೈಟ್ಗೆ ಭೇಟಿ ನೀಡಿ.
• ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಅಲ್ಲಿರುವ ಕ್ಯಾಪ್ಟಾ ನಮೂದಿಸಿ, ಓಕೆ ಕೊಟ್ಟರೆ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ.
• ಒಟಿಪಿ ನಮೂದಿಸಿದ ಕೂಡಲೇ ಲಾಗಿನ್ ಆಗುತ್ತದೆ. ನಿಮ್ಮ ಹೆಸರಿನ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬುದು ಸಂಖ್ಯೆಸಹಿತ ಕಾಣಿಸುತ್ತದೆ.
• ಸಂಖ್ಯೆ ಎದುರಿಗೆ ನಾಟ್ ಮೈ ನಂಬರ್, ನಾಟ್ ರಿಕ್ವೆರ್, ರಿಕ್ಷೆರ್ ಎಂದು 3 ಆಯ್ಕೆಗಳು ಬರುತ್ತವೆ.
• ನೀವು ಖರೀದಿಸದ ನಂಬರ್ ಬಂದರೆ ನಾಟ್ ಮೈ ನಂಬರ್ ಅಥವಾ ನಾಟ್ ರಿಕ್ವೆರ್ ಆಯ್ಕೆ ಮಾಡಿ ರಿಪೋರ್ಟ್ ಮಾಡಬಹುದು.