ಇನ್ಮುಂದೆ ವಿದ್ಯುತ್ ಗೆ ಹಗಲು-ರಾತ್ರಿ ದರ ಬೇರೆ ಬೇರೆ!
– ಕೇಂದ್ರದಿಂದ ನಿರ್ಧಾರ: ಏನಿದು ಹೊಸ ನಿಯಮ?
– ರಾತ್ರಿ ವಿದ್ಯುತ್ ಉರಿಸಿದ್ರೆ ಬಿಲ್ ಜಾಸ್ತಿ..!
NAMMUR EXPRESS NEWS
ನವದೆಹಲಿ: ರಾಜ್ಯದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ವಿದ್ಯುತ್ ದರ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಮಾಡಲು ಹೊರಟಿದೆ.
ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ಇದರನ್ವಯ, ವಿದ್ಯುತ್ ಗೆ ಹಗಲು-ರಾತ್ರಿ ದರ ನಿಗದಿಯಾಗಲಿದೆ. ಹಗಲಿನ ವಿದ್ಯುತ್ ಶುಲ್ಕವು 20 ಪ್ರತಿಶತದವರೆಗೆ ಕಡಿಮೆಯಾಗುತ್ತದೆ. ಆದಾಗ್ಯೂ, ರಾತ್ರಿಯ ಪೀಕ್ ಅವರ್ ಗಳಲ್ಲಿ ವಿದ್ಯುತ್ ಶುಲ್ಕವನ್ನ ಶೇಕಡಾ 20ರಷ್ಟು ಹೆಚ್ಚಿಸಲಾಗುವುದು. ಈ ಸಂಬಂಧ ಕೇಂದ್ರ ವಿದ್ಯುತ್ ಸಚಿವಾಲಯ ಶುಕ್ರವಾರ ಹೊಸ ವಿದ್ಯುತ್ ನಿಯಮಗಳನ್ನ ಪ್ರಕಟಿಸಿದೆ.ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಈ ನೀತಿಯಿಂದ ಸೌರ ವಿದ್ಯುತ್ ವ್ಯವಸ್ಥೆ ಹೊಂದಿರುವ ಗ್ರಾಹಕರಿಗೆ ಅನುಕೂಲವಾಗಲಿದೆ. ಅಲ್ಲದೆ, ಹಗಲಿನಲ್ಲಿ ಬಳಸುವ ವಿದ್ಯುತ್ಗೆ ಕಡಿಮೆ ಶುಲ್ಕವಿದ್ದರೆ, ರಾತ್ರಿ ಬಳಸುವ ಲೈಟ್ಗಳು, ಫ್ಯಾನ್ಗಳು ಮತ್ತು ಎಸಿಗಳಿಗೆ ಹೆಚ್ಚಿನ ವಿದ್ಯುತ್ ಶುಲ್ಕವನ್ನ ಪಾವತಿಸಬೇಕಾಗುತ್ತದೆ.
ನವೀಕರಿಸಬಹುದಾದ ಇಂಧನ ಬಳಕೆಯನ್ನ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಈ ಹೊಸ ವ್ಯವಸ್ಥೆಯನ್ನ ಅಳವಡಿಸುವುದರಿಂದ ಗ್ರಿಡ್ನಲ್ಲಿನ ಹೊರೆ ಮತ್ತು ಪೀಕ್ ಅವರ್ನಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗುತ್ತದೆ ಎಂದು ಅದು ಹೇಳಿದೆ. ಏಪ್ರಿಲ್ 2024 ರಿಂದ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಈ ನೀತಿಯನ್ನ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ. ಒಂದು ವರ್ಷದ ನಂತರ ಕೃಷಿ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ವಿದ್ಯುತ್ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023