ಇತಿಹಾಸದಲ್ಲಿ ಮೊದಲ ಬಾರಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಮಂಗಳಮುಖಿ.!!
– ಶಬರಿಮಲೆ ಪ್ರವೇಶಿಸಿದ ಮಂಗಳಮುಖಿ ನಿಶಾ ಕ್ರಾಂತಿ!
– ಟ್ರಾನ್ಸ್ಜೆಂಡರ್ ಅನ್ನೋ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರದ ಅನುಮತಿ!
NAMMUR EXPRESS NEWS
ಕೇರಳ: ಶತಮಾನಗಳಿಂದಲೂ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದ ಸಂಪ್ರದಾಯ ಮುಂದುವರಿದಿತ್ತು. ಆದರೆ ಈ ಬಾರಿ ಶಬರಿಮಲೆ ದೇವಸ್ಥಾನದಲ್ಲಿ ಮಂಗಳಮುಖಿಯೊಬ್ಬರು ಭೇಟಿ ನೀಡಿದ್ದು ಸಂಚಲನ ಮೂಡಿಸಿದ್ದಾರೆ. ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಆಜನ್ಮ ಬ್ರಹ್ಮಚಾರಿ ಅಂತ ಕರೆಯಲಾಗೋ ಅಯ್ಯಪ್ಪನ ಈ ಪುಣ್ಯಕ್ಷೇತ್ರಕ್ಕೆ ಸಾಮಾನ್ಯವಾಗಿ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಎಂಟ್ರಿ ಇಲ್ಲ. ಈ ಸಂಪ್ರದಾಯವನ್ನ ಚಾಚೂ ತಪ್ಪದೇ ಶತಮಾನಗಳಿಂದ ಪಾಲಿಸಿಕೊಂಡು ಬರಲಾಗಿದೆ. ಆದರೆ ಇದೀಗ ಮೊದಲ ಬಾರಿಗೆ ತೃತೀಯಲಿಂಗಿ ಜೋಗಿನಿ ನಿಶಾ ಡಿಸೆಂಬರ್ 31 ರಂದು ಶಬರಿಮಲೆಗೆ ಬಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅಂದ ಹಾಗೆ ಅವರು ಟ್ರಾನ್ಸ್ಜೆಂಡರ್ ಅನ್ನೋ ಗುರುತಿನ ಪತ್ರದ ಆಧಾರದ ಮೇಲೆ ಕೇರಳ ಸರ್ಕಾರ ಅವರಿಗೆ ಭೇಟಿ ನೀಡೋಕೆ ಅವಕಾಶ ನೀಡಿತ್ತು.
ತೃತೀಯಲಿಂಗಿ ನಿಶಾ ಕ್ರಾಂತಿ ಮಾತನಾಡಿ, ಶಬರಿಮಲೆ ಬೆಟ್ಟದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ನೀಡಿದ ಕೇರಳ ಸರ್ಕಾರಕ್ಕೆ ಧನ್ಯವಾದ. ಅನೇಕ ತೃತೀಯಲಿಂಗಿಗಳು ಅಯ್ಯಪ್ಪ ಮಾಲೆ ಧರಿಸಿ ಭಗವಂತನ ದರ್ಶನ ಪಡೆಯಲು ಬಯಸುತ್ತಾರೆ. ತೃತೀಯಲಿಂಗಿಯಾಗಿ ದರ್ಶನ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಅಯ್ಯಪ್ಪನ ದರ್ಶನಕ್ಕೆಂದು ಶಬರಿಮಲೆ ಬೆಟ್ಟವನ್ನು ಹತ್ತಿದ ನಂತರ ಎಲ್ಲರಂತೆ ತಾನೂ ಹುಟ್ಟಿ ಧನ್ಯಳಾಗಿದ್ದೇನೆ ಎಂದು ನಿಶಾ ಕ್ರಾಂತಿ ಹೇಳಿದ್ದಾರೆ. ಶಬರಿಮಲೆಯು ಕೇರಳ ರಾಜ್ಯದ ಶಬರಿಮಲೆ ಬೆಟ್ಟಗಳಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಬಯಸಿದ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಭಕ್ತರು ಅಯ್ಯಪ್ಪ ದೀಕ್ಷಾ ಮಾಲೆಗಳನ್ನು ಧರಿಸುತ್ತಾರೆ ಮತ್ತು ಸಂಕ್ರಾಂತಿಯ ಸಮಯದಲ್ಲಿ ಶಬರಿಮಲೆಯಲ್ಲಿ ಅಯ್ಯಪ್ಪನನ್ನು ಭೇಟಿ ಮಾಡುತ್ತಾರೆ.