ಏರಲಿದೆ ಮೊಬೈಲ್ ಕರೆ ದರ!
– ಎಲೆಕ್ಷನ್ ಮುಗಿದ ಬಳಿಕ ಶೇ.20ರಷ್ಟು ಹೆಚ್ಚಳ
– ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್
NAMMUR EXPRESS NEWS
ಹೊಸದಿಲ್ಲಿ: ಭಾರತೀಯ ಟೆಲಿಕಾಂ ಕಂಪನಿಗಳು ಮೇನಲ್ಲಿ ಮೊಬೈಲ್ ಕರೆ/ಡೇಟಾ ಪ್ಯಾಕ್ ದರವನ್ನು ಶೇ.20ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಟ್ರೋಕರೇಜ್ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯುರಿಟೀಸ್ ವರದಿಯಲ್ಲಿ ಹೇಳಲಾಗಿದೆ. “ಕಳೆದ 2 ವರ್ಷಗಳ ಬಳಿಕ ದರ ಹೆಚ್ಚಳಕ್ಕೆ ಟೆಲಿಕಾಂ ಕಂಪನಿಗಳು ಮುಂದಾಗಿವೆ. ಟೆಲಿಕಾಂ ಉದ್ಯಮಕ್ಕೆ ಈ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಅದರಲ್ಲೂ ವೊಡಾಫೋನ್ ಐಡಿಯಾಕ್ಕೆ ಇದರ ಅಗತ್ಯ ಹೆಚ್ಚಿದೆ. ಏರ್ಟೆಲ್, ಜಿಯೊ ಸೇರಿದಂತೆ ಇತರ ಟೆಲಿಕಾಂ ಕಂಪನಿಗಳಿಗೆ ದರ ಹೆಚ್ಚಳದಿಂದ ಅನುಕೂಲವಾಗಲಿದೆ,” ಎಂದು ವರದಿಯಲ್ಲಿ ಹೇಳಲಾಗಿದೆ. ಮೇ ಅಥವಾ ನಂತರ ಭಾರತದ ಟೆಲಿಕಾಂ ಕಂಪನಿಗಳು ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಏಜೆನ್ಸಿಯೊಂದು ವರದಿ ಮಾಡಿದೆ.
ಎರಡು ವರ್ಷದ ಬಳಿಕ ಶೇ. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದರ ಹೆಚ್ಚಳ ಕಾಣಲಿದ್ದೇವೆ. ಸಾರ್ವತ್ರಿಕ ಚುನಾವಣೆಗಳ ಬಳಿಕ ಇದು ನಡೆಯಬಹುದು. ಟೆಲಿಕಾಂ ಉದ್ಯಮದ ಆರೋಗ್ಯಕ್ಕೆ ಈ ಬೆಲೆ ಹೆಚ್ಚಳ ಬಹಳ ಅವಶ್ಯ ಇದೆ. ಅದರಲ್ಲೂ ವೊಡಾಫೋನ್ ಐಡಿಯಾಗೆ ಇದು ಬೇಕಾಗಿದೆ,ಎಂದು ಟ್ರೋಕರೇಜ್ ಸಂಸ್ಥೆಯಾದ ಬ್ಯಾಂಕ್ ಆಫ್ ಅಮೆರಿಕಾ ಸೆಕ್ಯೂರಿಟೀಸ್ನ ಅನಾಲಿಸ್ಟ್ವೊಬ್ಬರು ಹೇಳಿದ್ದಾಗಿ ತಿಳಿದುಬಂದಿದೆ. 2021ರ ಡಿಸೆಂಬರ್ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ಗಣನೀಯವಾಗಿ ದರಗಳನ್ನು ಹೆಚ್ಚಿಸಿದ್ದವು. ಅಲ್ಲಿಂದೀಚೆಗೆ ಡಾಟಾ ದರಗಳಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. ಇದೇ ವೇಳೆ, ಟೆಲಿಕಾಂ ಸೇವೆಗಳ ದರ ಹೆಚ್ಚಳದಿಂದ ಭಾರ್ತಿ ಏರ್ಟೆಲ್ ಸಂಸ್ಥೆಗೆ ಹೆಚ್ಚು ಅನುಕೂಲವಾಗಬಹುದು.
ಏರ್ಟೆಲ್ನಲ್ಲಿ ಹೈ ಎಂಡ್ ಯೂಸರ್ಗಳ ಸಂಖ್ಯೆ ಹೆಚ್ಚಿರುವುದರಿಂದ ಅದಕ್ಕೆ ಬೆಲೆ ಏರಿಕೆಯ ಲಾಭ ಹೆಚ್ಚು ಆಗಬಹುದು ಎಂದು ಅಭಿಪ್ರಾಯಪಟ್ಟಿರುವ ಟ್ರೋಕರೇಜ್ ಸಂಸ್ಥೆ, ಇದೇ ಕಾರಣಕ್ಕೆ ಏರ್ಟೆಲ್ಗೆ ತಾನು ಅಂಡರ್ ರ್ಫಾರ್ಮಿಂಗ್ ಎಂದು ನೀಡಿದ್ದ ರೇಟಿಂಗ್ ಅನ್ನು ನ್ಯೂಟ್ರಲ್ಗೆ ಬದಲಾಯಿಸಿದೆ. 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟ್ರನಲ್ಲಿ ಭಾರತದ ಟೆಲಿಕಾಂ ಕಂಪನಿಗಳು ಹೆಚ್ಚು ಆದಾಯ ಪಡೆದಿರುವ ಸಾಧ್ಯತೆ ಇದೆ. ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯವನ್ನು (ಎಆರ್ಪಿಯು) ಎಲ್ಲಾ ಟೆಲಿಕಾಂ ಕಂಪನಿಗಳು ಕಾಣಲಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್, ಮೇ ತಿಂಗಳ ನಂತರ ಶೇ. 20ರಷ್ಟು ದರ ಹೆಚ್ಚಾದರೆ ಟೆಲಿಕಾಂ ಕಂಪನಿಗಳ ಆರೋಗ್ಯ ಗಣನೀಯವಾಗಿ ಸುಧಾರಿಸುವ ಸಾಧ್ಯತೆ ಇದೆ. ಕುತೂಹಲದ ಸಂಗತಿ ಎಂದರೆ ಭಾರತದಲ್ಲಿರುವ ಟೆಲಿಕಾಂ ದರಗಳು ಜಾಗತಿಕ ಸರಾಸರಿಗೆ ಹೋಲಿಸಿದರೆ ಬಹಳ ಕಡಿಮೆ ಇದೆ. ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಬಳಿಕ ದರಗಳು ಬಹಳಷ್ಟು ಇಳಿಕೆಯಾಗಿದ್ದವು. ಈಗ ಒಮ್ಮತದಿಂದ ಎಲ್ಲಾ ಕಂಪನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ.