ಮೋದಿ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕ!
– ಅಮೇರಿಕಾ ಪ್ರವಾಸದಲ್ಲಿರುವ ಮೋದಿ ಹೆಸರು ಟಾಪ್
– ಜಾಗತಿಕ ನಾಯಕರಲ್ಲಿ ಭಾರತಕ್ಕೆ ಅಗ್ರ ಸ್ಥಾನ
– ಏನಿದು ಸಮೀಕ್ಷೆ… ಇಲ್ಲಿದೆ ಡೀಟೇಲ್ಸ್
NAMMUR EXPRESS NEWS
ನವದೆಹಲಿ: ಜಾಗತಿಕ ಜನಪ್ರಿಯ ನಾಯಕರಲ್ಲಿ ಪ್ರಧಾನಿ ನರೇಂದ್ರ ಮತ್ತೊಮ್ಮೆ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಕಳೆದ 9 ವರ್ಷದಲ್ಲಿ ಹಲವು ಸಮೀಕ್ಷೆಗಳಲ್ಲಿ ಮೋದಿ ಅವರ ವರ್ಚಸ್ಸು ಹೆಸರು ಮಾಡಿತ್ತು. ಇದೀಗ ಮತ್ತೆ ವಿಶ್ವದ ನಂ.1 ಜನಪ್ರಿಯ ನಾಯಕರ ಪಟ್ಟಿಯಲ್ಲೇ ಮುಂದುವರೆದಿದ್ದಾರೆ.
ಈ ಬಗ್ಗೆ ಮಾರ್ನಿಂಗ್ ಕನ್ಸಲ್ಟ್ ಎನ್ನುವಂತ ಸಂಸ್ಥೆಯೊಂದು ಸಮೀಕ್ಷೆ ನಡೆಸಿದೆ. ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಶೇ.76ರಷ್ಟು ಅನುಮೋದನೆಯ ರೇಟಿಂಗ್ ಪಡೆದಿರುವಂತ ಪ್ರಧಾನಿ ಮೋದಿಯವರು ನಂ.1 ಜನಪ್ರಿಯ ಜಾಗತಿಕ ನಾಯಕರಾಗಿ ಮತ್ತೊಮ್ಮೆ ಮೊದಲ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಅಮೇರಿಕಾ ಮೂಲಕ ಈ ಸಂಸ್ಥೆ ಪ್ರತಿ ತಿಂಗಳು ಸಮೀಕ್ಷೆ ನಡೆಸುತ್ತದೆ. ಅದೇ ರೀತಿ ಜೂನ್ ತಿಂಗಳಿನಲ್ಲಿ ಸಮೀಕ್ಷೆ ನಡೆಸಿತ್ತು. ಅದರಲ್ಲಿ ಪ್ರಧಾನಿ ಮೋದಿ ಜನಪ್ರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನೂ ಶೇ.59ರಷ್ಟು ರೇಟಿಂಗ್ ಪಡೆದುಕೊಂಡಿರುವಂತ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯೂನುಯೆಲ್ ಲೋಪೆಜ್ ಓಬ್ರಡಾರ್ 2ನೇ ಸ್ಥಾನದಲ್ಲಿದ್ದರೇ, ಶೇ.53ರಷ್ಟು ರೇಟಿಂಗ್ ಪಡೆದುಕೊಂಡಿರುವಂತ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರು 3ನೇ ಸ್ಥಾನದಲ್ಲಿದ್ದಾರೆ.
ಈ ನಂತ್ರದಲ್ಲಿ ಶೇ.40ರಷ್ಟು ರೇಟಿಂಗ್ ಪಡೆದ ಅಮೇರಿಕಾ ಅಧ್ಯಕ್ಷ ಜೋ ಬೈಡನ್ 6ನೇ ಸ್ಥಾನ, ಶೇ.32ರಷ್ಟು ರೇಟಿಂಗ್ ಪಡೆದಿರುವಂತ ಬ್ರಿಟನ್ ಪ್ರಧಾನಿ ರಿಷಿ ಸುನಕ್ 9ನೇ ಸ್ಥಾನದವನ್ನು ಗಳಿಸಿದ್ದಾರೆ.
ಮೋದಿ ಅವರು ಅಮೇರಿಕ ಪ್ರವಾಸದಲ್ಲಿದ್ದು ಭಾರತ ಮತ್ತು ಅಮೇರಿಕ ನಡುವೆ ಹಲವು ಒಪ್ಪಂದಗಳು ನಡೆಯುತ್ತಿವೆ. ಇನ್ನು ಭಾರತದಲ್ಲಿ ಲೋಕ ಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023