ಪ್ರಯಾಗರಾಜ್ ಕುಂಭಮೇಳದಲ್ಲಿ ಭೀಕರ ಅಗ್ನಿ ದುರಂತ!
– ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್ನಲ್ಲಿ ಬೆಂಕಿ
– ಮಹಾಕುಂಭ ಮೇಳ ಸುಂದರಿ ಮೊನಾಲಿಸಾ!
– ಸದ್ಯದ ಪಾಡು ಯಾರಿಗೂ ಬೇಡ!
NAMMUR EXPRESS NEWS
ಪ್ರಯಾಗ್ರಾಜ್: ಪ್ರಯಾಗರಾಜ್ಗೆ ಆಗಮಿಸಿರುವ ಭಕ್ತರು, ಸಾಧುಗಳು, ಸಂತರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಟೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿಯ ಕೆನ್ನಾಲಿಗೆ ಹರಡಿ ಹಲವು ಟೆಂಟ್ಗಳು ನಾಶವಾಗಿವೆ. ಬೆಂಕಿಯ ಜ್ವಾಲೆಗೆ ಮಹಾಕುಂಭ ಮೇಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದೆ. ಅಹಿತಕರ ಘಟನೆ ನಡೆಯದಂತೆ ಎಲ್ಲಾ ಕಟ್ಟೆಚ್ಚರ ವಹಿಸಲಾಗಿದೆ. ಇದರ ನಡುವೆ ಬೆಂಕಿ ಕಾಣಿಸಿಕೊಂಡಿದ್ದು ಹೇಗೆ ಎನ್ನುವುದು ಬಹಿರಂಗವಾಗಿಲ್ಲ. ಆದರೆ ಮಹಾಕುಂಭ ಮೇಳ ಆರಂಭಕ್ಕೂ ಮೊದಲೇ ನೂರಾರು ಅಗ್ನಿಶಾಮಕ ದಳ ನಿಯೋಜಿಸಲಾಗಿದೆ. ಹೀಗಾಗಿ ತಕ್ಷಣವೇ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವವೇ ಅಚ್ಚರಿಪಡುವಂತೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ಆಯೋಜನೆಗೊಂಡಿದೆ. ಪ್ರತಿ ದಿನ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ.
– ಸದ್ಯದ ಪಾಡು ಯಾರಿಗೂ ಬೇಡ!
ಮಹಾಕುಂಭ ಮೇಳ ಸುಂದರಿ ಮೊನಾಲಿಸಾ!
ನವದೆಹಲಿ : ಮಹಾಕುಂಭ ಮೇಳದಲ್ಲಿ ಮಣಿ, ಸರ, ಮಾಲೆ ಮಾರಾಟ ಮಾಡುತ್ತಿರುವ ಸುಂದರಿ ಮೊನಾಲಿಸಾ ಭಾರಿ ವೈರಲ್ ಆಗಿದ್ದಾಳೆ. ಮೊನಾಲಿಸಾ ಸೌಂದರ್ಯ, ಕಣ್ಣಿಗೆ ಜನ ಮಾರು ಹೋಗಿದ್ದರು. ಆದರೆ ಭಾರಿ ಜನಪ್ರಿಯತೆ ಪಡೆದ ಮೊನಾಲಿಸಾ ಸದ್ಯದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಎಲ್ಲಿಗೂ ಹೋಗುವಂತಿಲ್ಲ. ಮನೆಯಲ್ಲಿ ಇರುವಂತಿಲ್ಲ. ಅತ್ತ ಪೋಷಕರು, ಸಹೋದರಿಯರಿಗೂ ಕಾಟ ತಾಳಲಾಗುತ್ತಿಲ್ಲ. ಮೊನಾಲಿಸಾ ಸದ್ಯದ ಪರಿಸ್ಥಿತಿಯ ವಿಡಿಯೋ ಇದೀಗ ನೈಜ ಚಿತ್ರಣ ಬಿಚ್ಚಿಡುತ್ತಿದೆ. ಮಹಾಕುಂಭ ಮೇಳಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಮಂದಿ ಮೊನಾಲಿಸಾ ಭೇಟಿಯಾಗಿ ಫೋಟೋ ಕ್ಲಿಕ್ಕಿಸಲು ಬಯಸುತ್ತಿದ್ದಾರೆ.ಮೊನಾಲಿಸಾ ಎಲ್ಲಿದ್ದರೂ ತೆರಳಿ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದಾರೆ. ಇತ್ತ ಯೂಟ್ಯೂಬರ್, ಬ್ಲಾಗರ್, ಸುದ್ದಿ ವಾಹಿನಿ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಲವಾರು ಇದೀಗ ಮೊನಾಲಿಸಾಳ ಸಂದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆ ಕವರ್ ಮಾಡಿ ಗುರುತು ಸಿಗದಂತೆ ಸಾಗಿದರೂ ಮೊನಾಲಿಸಾಳನ್ನು ಜನರು ಬಿಡುತ್ತಿಲ್ಲ. ಈ ಕುರಿತು ವಿಡಿಯೋ ವೈರಲ್ ಆಗಿದೆ. ಸಾವಿರಾರು ಮಂದಿ ಮನೆ ಹುಡುಕಿಕೊಂಡು ತೆರಳುತ್ತಿದ್ದಾರೆ. ಮನೆಗೆ ತೆರಳಿ ಕಾಟ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ. ಜನಪ್ರಿಯಳಾಗಿರುವ ಕಾರಣ ಮೊನಾಲಿಸಾ ಹಿಂದೆ ಸಾವಿರಾರು ಮಂದಿ ಫೋಟೋಗಾಗಿ ಹಿಂದೆ ಬಿದ್ದಿದ್ದಾರೆ. ಮೊನಾಲಿಸಾಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಈಕೆಯ ಕಣ್ಣು, ಸೌಂದರ್ಯಕ್ಕೆ ಜನ ಮನಸೋತಿದ್ದಾರೆ. ಆದರೆ ದೇಶಾದ್ಯಂತ ಜನಪ್ರಿಯವಾಗಿರುವ ವೈರಲ್ ಸುಂದರಿಯ ಈಗಿನ ಸ್ಥಿತಿ ಮಾತ್ರ ಯಾರಿಗೂ ಬೇಡ.