- ಎ.13ರಿಂದ ಚುನಾವಣೆ ಪ್ರಕ್ರಿಯೆ ಶುರು
- ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಎಲ್ಲೆಡೆ ಅಲರ್ಟ್
- ದೆಹಲಿಯಲ್ಲಿ ಚುನಾವಣಾ ಆಯೋಗದಿಂದ ಘೋಷಣೆ
- ಎಲ್ಲಾ ಶಾಸಕರು, ಸಚಿವರು, ಸಿಎಂ ಎಲ್ಲರೂ ಮಾಜಿ!
NAMMUR EXPRESS NEWS
ನವ ದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಮೇ 10ಕ್ಕೆ ಚುನಾವಣೆ: ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಏ.20 ನಾಮಪತ್ರ ಸಲ್ಲಿಕೆ ಕೊನೆ ದಿನ, ಏ.21 ನಾಮಪತ್ರ ಸಲ್ಲಿಕೆಗೆ ಪರಿಶೀಲನೆ, ಏ.24 ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಲಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಮೇ 23ರೊಳಗೆ ಹೊಸ ಸರ್ಕಾರ ರಚನೆ ಆಗಬೇಕು. ಇನ್ನೂ 80 ವರ್ಷದ ನಂತರ ವಯಸ್ಸಿನವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಒಂದು ಮತಗಟ್ಟೆಗೆ 883 ಮತದಾರರು ಇರಬೇಕು. ರಾಜ್ಯದಲ್ಲಿ 5.22 ಕೋಟಿ ಮತದಾರರಿದ್ದಾರೆ.
2 ಕೋಟಿ 59 ಲಕ್ಷ ಮಹಿಳಾ ಮತದಾರರು, 2 ಕೋಟಿ 62 ಲಕ್ಷ ಪುರುಷ,4699 ತೃತೀಯ ಲಿಂಗಿಗಳು, 12.15 ಲಕ್ಷ ಯುವ ಮತದಾರರಿದ್ದಾರೆ. 18-19ರ ವಯಸ್ಸಿನ 9.17 ಲಕ್ಷ ಮತದಾರರಿದ್ದಾರೆ.
ರಾಜ್ಯದಲ್ಲಿ ಅಧಿಕಾರಿಗಳು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಕೂಡ ಸಿದ್ದವಾಗಿವೆ.