- ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾಯಕತ್ವ
- ಪ್ರಧಾನಿ ಮೋದಿ ಅವರಿಂದ ಬಣ್ಣನೆ: ಮೋದಿ ನೋಡಲು ಜನವೋ ಜನ
- ವಿಮಾನ ನಿಲ್ದಾಣ ಹೆಸರು ಘೋಷಣೆ ಮಾಡಲೇ ಇಲ್ಲ!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ನೋಡಲು ಜನ ಸಾಗರವೇ ಆಗಮಿಸಿದ್ದು, ವಿಮಾನ ನಿಲ್ದಾಣ ಪ್ರವಾಸಿ ತಾಣದಂತಾಗಿತ್ತು.
ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡು ಬಂತು. ಶಿವಮೊಗ್ಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಿಮಾನ ನಿಲ್ದಾಣ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಜನರು ಕಾರ್ಯಕ್ರಮಕ್ಕೂ ತೆರಳಲಾಗದೆ, ಹಿಂದಕ್ಕೆ ಮರಳಲಾಗದೆ ಪರದಾಡಿದರು. ಬಿರು ಬಿಸಿಲಿನಲ್ಲಿ ಪರದಾಡುತ್ತ ನೀರು, ತಿಂಡಿಗಾಗಿ ಪರಿತಪಿಸಬೇಕಾಯಿತು.
ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಯಿಂದ ಲಕ್ಷಾಂತರ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಆದರೆ ಸಂಚಾರ ದಟ್ಟಣೆಯಿಂದಾಗಿ ಕಾರ್ಯಕ್ರಮದ ಸ್ಥಳಕ್ಕೆ ತಲುಪಲಾಗದೆ ಸಂಕಷ್ಟಕ್ಕೀಡಾದರು.:ಜನರನ್ನು ಕರೆತರಲು ದೊಡ್ಡ ಸಂಖ್ಯೆಯಲ್ಲಿ ವಾಹನದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಕೆಎಸ್ ಆರ್ ಟಿ ಸಿ ಬಸ್ಸುಗಳು, ಖಾಸಗಿ ಬಸ್ಸುಗಳು, ಟಿಟಿ ವಾಹನಗಳು, ಕಾರು ಸೇರಿದಂತೆ ಹಲವು ವಾಹನಗಳ ವ್ಯವಸ್ಥೆಯಾಗಿತ್ತು. ಹಳ್ಳಿ ಹಳ್ಳಿಯಿಂದಲು ಜನರನ್ನು ಕರೆಯಿಸಲಾಗಿತ್ತು.
ಕೆಲವು ಕಡೆ ಬಿಜೆಪಿ ಕಾರ್ಯಕರ್ತರು ಬಸ್ಸಿನಲ್ಲಿದ್ದವರಿಗೆ ನೀರು, ತಿಂಡಿ ಪೂರೈಕೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ, ವಿಮಾನ ನಿಲ್ದಾಣ ಉದ್ಘಾಟನೆ ಮಾಡಿ, ಭಾಷಣ ಆರಂಭಿಸಿದರೂ ಹಲವರು ಕಾರ್ಯಕ್ರಮ ಸ್ಥಳಕ್ಕೆ ತಲುಪಲಾಗದೆ ಪರದಾಡಿದರು.
ವಿಮಾನ ನಿಲ್ದಾಣ ಮಲೆನಾಡಿನ ಅಭಿವೃದ್ಧಿಯ ಸಂಕೇತ
ಇದೊಂದು ಕೇವಲ ವಿಮಾನ ನಿಲ್ದಾಣವಲ್ಲ. ಮಲೆನಾಡಿನ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಅಭಿವೃದ್ಧಿ ಮತ್ತಷ್ಟು ವೇಗ ಪಡೆದು ಆಗಸದೆತ್ತರಕ್ಕೆ ಏರುವ ಶುಭ ಸೂಚನೆ. ಶಿವಮೊಗ್ಗದ ಜನ ಹಾಗೂ ಶಿಕಾರಿಪುರದ ಜನರು ನನ್ನನ್ನು ಶಾಸಕನನ್ನಾಗಿ ಮಾಡಿ ನಾಡಿನ ಜನರ ಸೇವೆಗೆ ಅವಕಾಶ ಕೊಟ್ಟಿದ್ದಾರೆ. ಮೋದಿಯವರ ಆಶೀರ್ವಾದದಿಂದ ಸಂಸತ್ ಸದಸ್ಯ, ವಿಧಾನ ಪರಿಷತ್ ಸದಸ್ಯ, ಮುಖ್ಯಮಂತ್ರಿಯಾಗಿ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಋಣಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಾವುಕರಾಗಿ ನುಡಿದರು.
ಶಿವಮೊಗ್ಗ ಬಳಿಯ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವವೇ ಮೆಚ್ಚುವಂತೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರಕವಿ ಕುವೆಂಪು ಅವರು ತಿಳಿಸಿದ ವಿಶ್ವ ಮಾನವ ತತ್ವಕ್ಕೆ ಉದಾಹರಣೆಯಾಗಿದೆ. ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎಂಬ ಕವಿವಾಣಿಯಂತೆ ಈ ನಾಡಿನ ಅಭಿವೃದ್ಧಿ ಕನಸಿನೊಂದಿಗೆ 70ರ ದಶಕದಲ್ಲಿ ಸಾರ್ವಜನಿಕ ಬದುಕು ಪ್ರವೇಶಿಸಿದ ನನ್ನ ಬದುಕಿನಲ್ಲಿ ಈ ದಿನ ಬಹಳ ವೈಶಿಷ್ಟ್ಯಪೂರ್ಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನೇರವಾಗಿ ವಿಮಾನದಲ್ಲಿ ಬಂದಿಳಿದು ವಿಮಾನ ನಿಲ್ದಾಣವನ್ನು ಉದ್ಘಾಟಿಸಿರುವುದು ಜಿಲ್ಲೆಯ ಜನರ ಪಾಲಿಗೆ ಸಾರ್ಥಕದ ದಿನವಾಗಿದೆ ಎಂದು ಹೇಳಿದರು.
ಸಂಸದ ರಾಘವೇಂದ್ರ ಅವರ ವಿಶೇಷ ಪ್ರಯತ್ನದಿಂದ ವಿಮಾನ ನಿಲ್ದಾಣ ಆಗಿದೆ. ಮೋದಿಯವರ ಒತ್ತಾಸೆ ಮೇರೆಗೆ ಶಿವಮೊಗ್ಗ ಲೋಕಸಭೆಗೆ ಸ್ಪರ್ಧಿಸಿದಾಗ ಬೃಹತ್ ಅಂತರದಲ್ಲಿ ಜಯಗಳಿಸುವಂತೆ ಮಾಡಿ ಸೇವೆಗೆ ಅವಕಾಶ ಲಭಿಸಿತ್ತು. ನಾನು ಅಧಿಕಾರದಲ್ಲಿದ್ದದ್ದು ಕೇವಲ 7 ವರ್ಷ ಮಾತ್ರ. ಈ ಅವಧಿಯಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂದು ಕೆಲಸ ಮಾಡಿದ್ದೇನೆ. ಅದಕ್ಕೆ ಮೋದಿಯವರ ಆಶೀರ್ವಾದ ಕಾರಣ ಎಂದರು.
ಫೆ. 27 ಕ್ಕೆ ಪ್ರಧಾನಿ ಮೋದಿ ವಿಮಾನ ಮೊದಲಿಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುವ ಮೂಲಕ ಉದ್ಘಾಟನೆ ಆಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಿ.ವೈ.ರಾಘವೇಂದ್ರ ಇತರರು ಇದ್ದರು.
ಶಿವಮೊಗ್ಗ ವಿಮಾನ ನಿಲ್ದಾಣ ಮಲೆನಾಡಿಗೆ ಪ್ರದೇಶಕ್ಕೆ ಯಡಿಯೂರಪ್ಪ ಅವರ ಒಂದು ಕಾಣಿಕೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಕನಸು ನನಸಾಗುತ್ತಿದೆ. ಮಲೆನಾಡಿನ ಅಭಿವೃದ್ಧಿಗೆ ಯಡಿಯೂರಪ್ಪ ಬಹಳ ಶ್ರಮಿಸಿದ್ದಾರೆ. ಮೋದಿ ಯವರ ಕಾಲದಲ್ಲಿ ಅತಿಹಚ್ಚು ವಿಮಾನ ನಿಲ್ದಾಣ ಸ್ಥಾಪನೆಯಾಗಿವೆ ಎಂದರು. ಬಿಎಸ್ ವೈ ಹುಟ್ಟು ಹಬ್ಬದಂದೇ ಉದ್ಘಾಟನೆ ಆಗ್ತಾ ಇರೋದು ಧೈವ ಇಚ್ಚೆ. ಅವರ ಜನ್ಮ ದಿನದಂದೇ ವಿಮಾನ ನಿಲ್ದಾಣ ಉದ್ಘಾಟನೆ ಆಗ್ತಾ ಇರೋದು ಸಂತೋಷ ಇಮ್ಮಡಿಗೊಳಿಸಿದೆ. ಯಡಿಯೂರಪ್ಪ ಇದು ದೊಡ್ಡ ಕಾಣಿಕೆ ಎಂದರು.
ಹೆಸರು ಘೋಷಣೆ ಮಾಡಲೇ ಇಲ್ಲ!
ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ ಪ್ರಧಾನಿ ಯಡಿಯೂರಪ್ಪರ ಹೋರಾಟವನ್ನು ಮೆಲಕು ಹಾಕಿದರು. ಆದರೆ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು ಘೋಷಣೆ ಮಾಡದೆ ಮೋದಿಯವರು ತಮ್ಮ ಭಾಷಣವನ್ನು ಮುಗಿಸಿದರು.
ಪ್ರಧಾನಿಯವರ ಭಾಷಣದಲ್ಲಿ ವಿಮಾನ ನಿಲ್ದಾಣದ ಹೆಸರು ಘೋಷಣೆಯಾಗಲಿಲ್ಲ. ಹದಿನಾಲ್ಕು ವರ್ಷಗಳ ಶಿವಮೊಗ್ಗ ಜನತೆಯ ಕನಸು ನನಸಾಯಿತು. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು. ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದ ಮೋದಿಯವರಿಗೆ ನೆರದ ಜನತೆ ಮೋದಿ ಘೋಷಣೆ ಕೂಗಿದರು.ಕರ್ನಾಟಕದ ಎಲ್ಲಾ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು, ಸಿರಿಗನ್ನಡಂ ಗೆಲ್ಲೆ.. ಸಿರಿ ಗನ್ನಡಂ ಬಾಳೆ ಎಂದ ಮೋದಿಯವರು ಜೈಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಭಾಷಣ ಆರಂಭಿಸಿದರು. ಒಂದು ಭಾರತ ಶ್ರೇಷ್ಠ ಭಾರತ ಎಂದು ಸಾರಿ ಹೇಳಿದ ರಾಷ್ಟ್ರಕವಿ ಕುವೆಂಪು ನೆಲಕ್ಕೆ ನಮನಿಸುವುದಾಗಿ ಹೇಳಿದರು. ಈ ದಿನ ಕರ್ನಾಟಕಕ್ಕೆ ಬಂದು ವಿಮಾನ ನಿಲ್ದಾಣ ಮತ್ತು ಸಾವಿರಾರು ಕೋಟಿ ರೂಪಾರಿಯ ಬೃಹತ್ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವ ಸೌಭಾಗ್ಯ ದೊರೆತಿದೆ ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪರ ಹುಟ್ಟಿದ ದಿನ. ನಾನು ಅವರಿಗೆ ಆಭಾರಿಯಾಗಿದ್ದೇನೆ. ಹೋರಾಟದ ಬದುಕಿನ ಮೂಲಕ ಬಡವರು ರೈತರ ಕಲ್ಯಾಣಕ್ಕಾಗಿ ಸಮರ್ಪಣೆ ಮಾಡಿದ್ದಾರೆ. ಯಡಿಯೂರಪ್ಪರ ಜೀವನ ಎಲ್ಲರಿಗೂ ಪ್ರೇರಣೆಯಾಗಿದೆ. ನಾವು ನೀವುಗಳೆಲ್ಲರೂ ಮೊಬೈಲ್ ಲೈಟ್ ಟಾರ್ಚ್ ಹಾಕುವ ಮೂಲಕ ಅವರಿಗೆ ಅಭಿನಂಧನೆ ಸಲ್ಲಿಸೋಣ ಎಂದು ಮೋದಿಯವರು ಕರೆ ನೀಡಿದರು. ನೆರದ ಜನತೆ ಟಾರ್ಟ್ ಆನ್ ಮಾಡಿ ಬಿ.ಎಸ್.ವೈ ಗೆ ಅಭಿನಂದನೆ ಸಲ್ಲಿಸಿದರು. ನಂತರ ಪ್ರಧಾನಿಯವರು ದೇಶದ ಅಭಿವೃದ್ಧಿಯ ಬಗ್ಗೆ ಜನತೆಯ ಗಮನ ಸೆಳೆದರು. ಆದರೆ ಭಾಷಣದ ಕೊನೆವರೆಗೂ ಎಲ್ಲಿಯಾದ್ರೂ, ವಿಮಾನ ನಿಲ್ದಾಣಕ್ಕೆ ಪ್ರಧಾನಿಗಳು ಹೆಸರು ಘೋಷಣೆ ಮಾಡಲಿಲ್ಲ.
ಬಿಎಸ್ ವೈ ಅವರಿಗೆ ಕೆಮ್ಮು. ಶುರುವಾದ್ರೂ ಬಿ.ಎಸ್.ವೈ ಭಾಷಣ ಮುಂದುವರೆಸಿದ್ರು. ಇದನ್ನು ಗಮನಿಸಿದ ಮೋದಿಯವರು ತಮ್ಮ ಅಂಗರಕ್ಷಕನಿಗೆ ನೀರು ಕೊಡುವಂತೆ ಹೇಳಿದಾಗ, ಅಂಗರಕ್ಷಕರು ನೀರು ನೀಡಿದರು. ನಂತರ ಬಿ.ಎಸ್.ವೈ ಸುಗಮವಾಗಿ ಭಾಷಣ ಮುಗಿಸಿದರು.