- ತೀರ್ಥಹಳ್ಳಿ, ಸಾಗರದಲ್ಲೇ ಪೈಪೋಟಿ ಹೆಚ್ಚು
- ಪಕ್ಷಕ್ಕೆ ಅರ್ಜಿ ಸಲ್ಲಿಸಲು 5 ದಿನ ಅವಧಿ ವಿಸ್ತರಣೆ
NAMMUR EXPRESS NEWS
ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ನಿಗದಿ ಮಾಡಿದ್ದ ದಿನಾಂಕದಿಂದ ಐದು ದಿನ ಅರ್ಜಿ ಸಲ್ಲಿಸಲು ಅವಧಿಯನ್ನ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ನ.21 ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಸೊರಬ, ಮತ್ತು ಭದ್ರಾವತಿಯಲ್ಲಿ ತಲಾ ಒಬ್ಬರು ಅರ್ಜಿಸಲ್ಲಿಸಿದ್ದಾರೆ. ತೀರ್ಥಹಳ್ಳಿ ಮತ್ತು ಸಾಗರ ವಿಧಾನ ಸಭಾ ಕ್ಷೇತ್ರದಿಂದ ಆರ್.ಎಂ.ಮಂಜುನಾಥ್ ಗೌಡ, ಕಿಮ್ಮನೆ ರತ್ನಾಕರ್, ಕಡ್ತುರ್ ದಿನೇಶ್ ಅರ್ಜಿ ಸಲ್ಲಿಸಿದ್ದಾರೆ.
ಸಾಗರದಿಂದ ಬೇಳೂರು ಗೋಪಾಲಕೃಷ್ಣ, ರಾಜನಂದಿನಿ, ಕಾಗೋಡು ತಿಮ್ಮಪ್ಪ, ಕಲಗೋಡು ರತ್ನಾಕರ್, ಬಿ.ಆರ್ ಜಯಂತ್ ಅರ್ಜಿ ಸಲ್ಲಿಸಿದ್ದಾರೆ.
ಶಿಕಾರಿಪುರದಲ್ಲಿ ದರ್ಶನ್ ಉಳ್ಳಿ, ಕವುಲೆ ಗಂಗಾಧರ್, ನಿರ್ಮಲಾ ಪಾಟೀಲ್, ರಾಘವೇಂದ್ರ ನಾಯ್ಕ್, ಪಿಒ ಪುಷ್ಪ ಶಿವಕುಮಾರ್, ನಾಗರಾಜ್ ಗೌಡ, ಗೋಣಿ ಮಲ್ಲೇಶ್ ಹಾಗೂ ಮಹಾಲಿಂಗಪ್ಪ ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಹೆಚ್ ಸಿ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮರಿಯಪ್ಪ, ವೈಹೆಚ್ ನಾಗರಾಜ್, ಲೇಔಟ್ ಇಮ್ಮಿಯಾಜ್ ಖಾನ್, ಶಿಮ್ ಜೋಸೆಫ್, ವಕೀಲ ನರಸಿಂಹ ಮೂರ್ತಿ (ಬಾಬಣ್ಣ), ಎಸ್ ಪಿ ದಿನೇಶ್, ಲಗನ್ ಸತ್ಯನಾರಾಯಣ್ ಅರ್ಜಿ ಸಲ್ಲಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಿಂದ ಆರ್ ಸಿ ನಾಯ್ಕ್ , ಪಲ್ಲವಿ, ರವಿಕುಮಾರ್, ಬಲ್ಲೇವ್ ಕೃಷ್ಣ, ಕೃಷ್ಣ, ಶ್ರೀನಿವಾಸ್ ಕರಿಯಣ್ಣ ಅನಿತಾಕುಮಾರಿ, ದಿ.ಬಸವಣ್ಣಪ್ಪರ ಮಗ ದಿನೇಶ್, ಶಂಕರ್, ನಾರಾಯಣ ಸ್ವಾಮಿ ಅರ್ಜಿ ಸಲ್ಲಿಸಿದ್ದಾರೆ.