- 5 ಕ್ಷೇತ್ರಗಳ ಚುನಾವಣೆಗೆ ಪ್ರಚಾರ ಸಮಿತಿ ಸಂಯೋಜಕರ ನೇಮಕ
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಸಲ ಯಾರದು ಮೇಲುಗೈ?
NAMMUR EXPRESS NEWS
ಚಿಕ್ಕಮಗಳೂರು: ರಾಜ್ಯದ ವಿಧಾನ ಸಭಾ ಚುನಾವಣೆ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 5 ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಗೆ ವಿಧಾನ ಸಭಾ ಕ್ಷೇತ್ರವಾರು ಸಂಯೋಜಕರನ್ನಾಗಿ ನೇಮಿಸಲಾಗಿದೆ.
2023ರ ವಿಧಾನಸಭೆ ಚುನಾವಣೆಗೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಸಂಯೋಜಕರಾಗಿ ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಹಾಗು ಬೆಟ್ಟಗೆರೆ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ತೆಕ್ಕೂರು ಕೆ ಎಂ ರಮೇಶ್ ಭಟ್ ಆಯ್ಕೆಯಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಕೆ. ಆರ್ ಯೋಗಿಶ್, ಕಡೂರು ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಎಂ.ಕೆ. ಮಹೇಶ್ವರಪ್ಪ, ಮೂಡಿಗೆರೆ ಕ್ಷೇತ್ರದ ಪ್ರಚಾರ ಸಮಿತಿಯ ಸಂಯೋಜಕರಾಗಿ ಡಿ.ಕೆ.ಕೇಶವ ಆಯ್ಕೆಯಾಗಿದ್ದಾರೆ.
ಶೃಂಗೇರಿ ಕ್ಷೇತ್ರ ಹೊರತುಪಡಿಸಿ ಮಿಕ್ಕ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. 2023ರ ಚುನಾವಣೆ ಮೇಲೆ ಎಲ್ಲರ ಗಮನ ಇದೆ.
ಓವೈಸಿ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಂತು!
- ಮೂರು ಪಕ್ಷಕ್ಕೂ ಸಡ್ಡು ಹೊಡೆದ ಓವೈಸಿ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ವಿಧಾನಸಭೆ ಚುನಾವಣೆಗೆ ಆಲ್ ಇಂಡಿಯಾ ಮಜ್ಜಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮೂರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನುಳಿದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುತ್ತಿದೆ.
ಆಲ್ ಇಂಡಿಯಾ ಮಜ್ಜಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ 3 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ 5 ರಂದು ಪ್ರಕಟಿಸಿದ್ದಾರೆ. ಬೆಳಗಾವಿ ಉತ್ತರದಿಂದ, ಲತೀಫ್ಘಾನ್ ಅಮೀರ್ಖಾನ್ ಪಠಾಣ್, ಹುಬ್ಬಳ್ಳಿ-ಧಾರವಾಡ ಪೂರ್ವದಿಂದ ದುರ್ಗಪ್ಪ ಕಾಶಪ್ಪ ಬಿಜವಾಡ ಮತ್ತು ಬಿಜಾಪುರ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದಿಂದ ಅಲ್ಲಾಬಕ್ ಮೆಹಬೂಬ್ ಸಾಬ್ ಸ್ಪರ್ಧಿಸಲಿದ್ದಾರೆ. ಟಿಕೆಟ್ ಘೋಷಣೆ ಬೆನ್ನಲ್ಲೆ ದುರ್ಗಪ್ಪ ಕಾಶಪ್ಪ ಬಿಜವಾಡ ಬೃಹತ್ ಬೈಕ್ ರ್ಯಾಲಿ ನಡೆಸಿದ್ದಾರೆ. ಎಐಎಂಐಎಂ ಈ ಹಿಂದೆ ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಾರ್ಪೂರೇಟ್ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.
ಈ ಬಗ್ಗೆ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮಾತನಾಡಿ, ಕರ್ನಾಟಕ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ಸ್ಪರ್ಧೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಣ್ಣ ಪೆಟ್ಟು ಕೊಡಲಿದೆ.