- ಎಫ್ ಎಂ, ರೇಡಿಯೋ ಸಿಟಿಯಲ್ಲಿ ವಿಶೇಷ ಸಂದರ್ಶನ
– ರಾಜಕೀಯ ಜೀವನ, ಬೆಳೆದು ಬಂದ ದಾರಿ ಬಗ್ಗೆ ಚರ್ಚೆ
NAMMUR EXPRESS NEWS
ಬೆಂಗಳೂರು: ಎಫ್ ಎಂ, ರೇಡಿಯೋ ಸಿಟಿ ಮಾಧ್ಯಮ ವಾಹಿನಿಯ ‘ನೋ ಪೊಲಿಟಿಕ್ಸ್ ಪ್ಲೀಸ್’ ಎಂಬ ವಿನೂತನ ಸಂವಾದ ಕಾರ್ಯಕ್ರಮದಲ್ಲಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಂದರ್ಶನ ನೀಡಿದರು.
ತಮ್ಮ ರಾಜಕೀಯ ಜೀವನ, ಬೆಳೆದು ಬಂದ ದಾರಿ, ಶೈಕ್ಷಣಿಕ ಜೀವನ, ಇತ್ಯಾದಿ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದೇನೆ. ಖ್ಯಾತ ನಿರೂಪಕಿ ನೇತ್ರಾ ಸಂದರ್ಶನ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಂದರ್ಶನ ಪ್ರಸಾರವಾಗಲಿದೆ.
ಅಡಿಕೆ ಬೆಳೆಗಾರರಿಗೆ ನ್ಯಾಯ ಕೊಟ್ಟಿದ್ದು ನಾವು: ಆರಗ
ಅಡಿಕೆ ಬೆಳೆಗಳಿಗೆ ಬಂದಿರುವ ಮಾರಕ ರೋಗಗಳಿಗೆ ತೀರ್ಥಹಳ್ಳಿ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಈ ಬಾರಿಯ ಬಜೆಟ್ ನಲ್ಲಿ 10 ಕೋಟಿ ರೂಪಾಯಿಗಳ ಅನುದಾನ ಒದಗಿಸಲಾಗಿದೆ. ವಿಜ್ಞಾನಿಗಳು ಎಲೆ ಚುಕ್ಕಿ ರೋಗ ಮತ್ತು ಬೇರೆ ಬೇರೆ ರೋಗಗಳಿಗೆ ಪರ್ಯಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಅಡಿಕೆ ಬೆಳೆಗಾರರ ಕುರಿತಾದ ಸಮಗ್ರ ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತ ಸಮಾವೇಶ ನಡೆಯಲಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಬಳಿ ನಿಯೋಗ ಹೋಗಿ ಅಡಿಕೆ ಉತ್ಪನ್ನದ ವೆಚ್ಚ ಹೆಚ್ಚು ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ ಅದನ್ನು ಸರ್ಕಾರ ಅಂಗೀಕಾರ ಮಾಡಿ 251 ರೂಪಾಯಿ ಇದ್ದ ಉತ್ಪಾದನೆ ವೆಚ್ಚವನ್ನು 351 ರೂಪಾಯಿಗೆ ಹೆಚ್ಚಳವನ್ನು ಮಾಡಿದ್ದಾರೆ, ಅಲ್ಲದೆ ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಡಿಕೆ ಬೆಳೆಗಾರರ ವಿರುದ್ಧ ಅಡಿಕೆ ಆರೋಗ್ಯಕ್ಕೆ ಹಾನಿಕಾರ ಎಂದು ಸುಪ್ರೀಂ ಕೋರ್ಟಿಗೆ ಸ್ಟೇಟ್ಮೆಂಟ್ ಕೊಟ್ಟಿದ್ದರಿಂದ ಅದರ ಆದರದ ಮೇಲೆ ಕೇಸ್ ನಡೆಯುತ್ತಿದ್ದು,ಆದರೆ ನಮ್ಮ ಬಿಜೆಪಿ ಸರ್ಕಾರ ರಾಜ್ಯದ ಟಾಸ್ಕ್ ಪೋರ್ಸ್ ವತಿಯಿಂದ ವಿಶೇಷವಾಗಿ ಸಂಶೋಧನೆಯನ್ನ ಮಾಡಿಸಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಅದು ಆರೋಗ್ಯಕ್ಕೆ ಪೂರಕವಾಗಿದ್ದು ಎಂಬುವ ಸಂಶೋಧನ ವರದಿಯು ಬಂದಿದ್ದು ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.