- ಮಾ.16 ರಂದು ಬಿಜೆಪಿ ಪ್ರನಾಳಿಕೆಗಾಗಿ ಜನಾಭಿಪ್ರಾಯದ ಸಂಗ್ರಹದ ಅಭಿಯಾನಕ್ಕೆ ಚಾಲನೆ
- ಪ್ರತಿ ಕ್ಷೇತ್ರದಲ್ಲೂ ನಡೆಯಲಿದೆ ಕಾರ್ಯಕ್ರಮ
- ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಡಾ. ಧನಂಜಯ ಸರ್ಜಿ
NAMMUR EXPRESS NEWS
ಶಿವಮೊಗ್ಗ: ಮಾ.16 ರಿಂದ ಬಿಜೆಪಿ ಪ್ರನಾಳಿಕೆಗಾಗಿ ಜನಾಬಿಪ್ರಾಯ ಸಂಗ್ರಹ ಅಭಿಯಾನ ಆರಂಭವಾಗಲಿದ್ದು ಅಂದು ರಾಯಲ್ ಆರ್ಕಿಡ್ ನಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಲಿದ್ದಾರೆ ಎಂದು ಪ್ರನಾಳಿಕೆ ಸಮಿತಿಯ ಜಿಲ್ಲಾಧ್ಯಕ್ಷ ವೈದ್ಯಡಾ.ಧನಂಜಯ್ ಸರ್ಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. 273 ಬೂತ್ ಗಳಿಗೂ ಜನರನ್ನ ಸಂಪರ್ಕಿಸಿ ಸರ್ಕಾರದ ಮಾಹಿತಿ ತಿಳಿಸಲಾಗುವುದು. 2016 ರ ನಂತರ 100 ಕೋಟಿ ಮನೆಗಳು ನಿರ್ಮಾಣವಾಗಿದೆ. ಜಲಜೀವನ್ ಮಿಷನ್, ನಗರದಲ್ಲಿ ವ್ಯವಸ್ಥೆಗಳಿವೆ. ವಿದ್ಯುತ್ ಚ್ಛಕ್ತಿ ಇಲ್ಲದ ಮನೆಗಳಿಗೆ ವಿದ್ಯುತ್ ಪೂರೈಕೆ ಇವುಗಳನ್ನ ಮಾಹಿತಿ ನೀಡಲಾಗುವುದು ಎಂದರು.
ವ್ಯಾಕ್ಸಿನೇಷನ್ ಹಂಚಿಕೆ, ಆಪರೇಷನ್ ಗಂಗಾ, ಹೈವೆ ಕಾಮಗಾರಿ, 3500 ಕೋಟಿ ಹಣ ಹೈವೆಗೆ ಹರಿದು ಬರುತ್ತಿದೆ ಈ ಹಿಂದೆ 800 ಕೋಟಿ ಹರಿದು ಬರುತ್ತಿತ್ತು. 59 ಲಕ್ಷ ಜನ ರೈತರಿಗೆ 6000 ಕಿಸಾನ್ ಸಮ್ಮಸನ್ ಯೋಜನೆ ತಲುಪಿಸಲಾಗುತ್ತಿದೆ. ಡಬ್ಬಲ್ ಇಂಜಿನ್ ಸರ್ಕಾರದಿಂದ ಅನುಕೂಲವಾಗಿದೆ. ಇದನ್ನ ಜನರೊಂದಿಗೆ ಚರ್ಚಿಸುವ ಕೆಲಸ ಮಾಡಲಾಗುವುದು ಎಂದರು.
ಶಿವಮೊಗ್ಗದ ವಿಮಾನನಿಲ್ದಾಣ, ರೈಲ್ವೆ ಅಭಿವೃದ್ಧಿ, ಬಿಜೆಪಿಯೇ ಭರವಸೆ ಎಂಬ ಘೋಷಣೆ ಅಡಿ ಸರ್ಕಾರ ಅಭಿವೃದ್ಧಿ ಕೆಲಸ ಮಾಡ್ತಾ ಇದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅಭಿಯಾನ ಮಾಡಲಾಗುತ್ತಿದೆ. ದೇವಸ್ಥಾನ, ಕೃಷಿ ಮಾರ್ಕೆಟ್ ಮೊದಲಾದ ಕಡೆ ಜನ ಸೇರುವ ಜಾಗದಲ್ಲಿ ಜನರೊಂದಿಗೆ ಚರ್ಚೆ ಮಾಡಲಾಗುತ್ತಿದೆ.