- ಕಾಂಗ್ರೆಸ್ಗೆ ಬಹುಮತ, ಜೆಡಿಎಸ್ ಅಷ್ಟಕಷ್ಟೇ
- ಕಾಂಗ್ರೆಸ್ ಪಕ್ಷಕ್ಕೆ 116 -122 ಸ್ಥಾನ ಬರುತ್ತೆ ಎಂದ ಸಮೀಕ್ಷೆ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಲೋಕ್ಪೋಲ್ ಎಂಬ ಹೆಸರಿನಲ್ಲಿ ಸಂಸ್ಥೆಯೊಂದು ಮಾಡಿದ ಸಮೀಕ್ಷೆ ಜೆಡಿಎಸ್ ಮತ್ತು ಬಿಜೆಪಿಯ ನಿದ್ದೆಗೆಡಿಸಿದ್ದರೆ ಕಾಗ್ರೆಸ್ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಲೋಕ್ಪೋಲ್ ಸಮೀಕ್ಷೆ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸರಳ ಬಹುಮತ ಬರಲಿದೆ. ಕಾಂಗ್ರೆಸ್ 116 ರಿಂದ 122 ಸ್ಥಾನಗಳು ಪಡೆಯಬಹುದು ಎಂದು ಅಂದಾಜಿಸಲಾಗಿದ್ದು, ಈ ಸಮೀಕ್ಷೆಯನ್ನು ಆಧರಿಸಿಯೇ ಕಾಂಗ್ರೆಸ್ ಚುನಾವಣಾ
ತಂತ್ರಗಾರಿಕೆಯನ್ನ ರೂಪಿಸುತ್ತಿದೆ.
ಆಡಳಿತರೂಢ ಬಿಜೆಪಿ 140ಕ್ಕೂ ಸ್ಥಾನಗಳನ್ನ ಗೆಲ್ಲುವ ವಿಶ್ವಾಸದಲ್ಲಿದ್ದರೂ ಸಮೀಕ್ಷೆಯ ಪ್ರಕಾರ ಸಿಗುವುದು ಬರೀ 77 ರಿಂದ 83 ಸ್ಥಾನ. ಜೆಡಿಎಸ್ಗೆ 21 ರಿಂದ 27 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. 1 ರಿಂದ 4 ಪಕ್ಷೇತರರು ಗೆಲುವು ಸಾಧಿಸಬಹುದು ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಶೇಕಡಾವಾರು ಮತ: ಬಿಜೆಪಿಗೆ ಶೇ ಶೇ.33 ರಿಂದ 36ರಷ್ಟು ಮತಗಳು, ಕಾಂಗ್ರೆಸ್ಗೆ ಶೇ.39 ರಿಂದ 42 ಮತ ಸಿಗಬಹುದು. ಜೆಡಿಎಸ್ ಶೇ. 15 ರಿಂದ 18ರಷ್ಟು ಮತ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಈ ಬಾರಿ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ನಿರಾಸೆ ಉಂಟಾಗಲಿದೆ. ಲೋಕ್ಪೋಲ್ ಸಮೀಕ್ಷೆ ಪ್ರಕಾರ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ 10 ರಿಂದ 13 ಸ್ಥಾನ, ಕಾಂಗ್ರೆಸ್ಗೆ 21-24 ಹಾಗೂ ಜೆಡಿಎಸ್ಗೆ 14- 17 ಸ್ಥಾನಗಳು ಸಿಗಬಹುದು. ಕರಾವಳಿ ಭಾಗದಲ್ಲಿ ಬಿಜೆಪಿಗೆ 14 ರಿಂದ 17, ಕಾಂಗ್ರೆಸ್ಗೆ 7 ರಿಂದ 10 ಹಾಗೂ ಜೆಡಿಎಸ್ಗೆ 1 ಸ್ಥಾನ ದೊರಕಬಹುದು ಎನ್ನಲಾಗಿದೆ. ಬಿಜೆಪಿಗೆ ಬೆಂಗಳೂರು ವ್ಯಾಪ್ತಿಯಲ್ಲೂ ಕಹಿ ಸುದ್ದಿ ಇದೆ. ಬೆಂಗಳೂರಿನಲ್ಲಿ ಬಿಜೆಪಿಗೆ 11 ರಿಂದ 14, ಕಾಂಗ್ರೆಸ್ಗೆ 19 ರಿಂದ 23 ಹಾಗೂ ಜೆಡಿಎಸ್ಗೆ 1ರಿಂದ 4 ಸ್ಥಾನಗಳು ಸಿಗಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ 9ರಿಂದ 13, ಕಾಂಗ್ರೆಸ್ 24 ರಿಂದ 27 ಹಾಗೂ ಜೆಡಿಎಸ್ 2 ಸ್ಥಾನ ಗೆಲ್ಲಬಹುದು. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ 27ರಿಂದ 30, ಕಾಂಗ್ರೆಸ್ 19 ರಿಂದ 22 ಹಾಗೂ ಜೆಡಿಎಸ್ಗೆ 1 ಸ್ಥಾನ ಗೆಲ್ಲಬಹುದು ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ 10 ರಿಂದ 13, ಕಾಂಗ್ರೆಸ್ಗೆ 7ರಿಂದ 10 ಹಾಗೂ ಜೆಡಿಎಸ್ಗೆ 1 ಸ್ಥಾನ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ತಂತ್ರಗಾರಿಕೆಯನ್ನ ರೂಪಿಸುತ್ತಿದೆ.