- ಜಿ.ಪಂ, ತಾ.ಪಂ ಚುನಾವಣಾ ಅರ್ಜಿ ವಜಾ..!
- ಚುನಾವಣಾ ಆಯೋಗ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಳಿಸದ ಸುಪ್ರೀಂಕೋರ್ಟ್
- ಅಂತಿಮ ಮೀಸಲು, ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ
NAMMUR EXPRESS NEWS
ನವ ದೆಹಲಿ: ಜಿ.ಪಂ, ತಾ.ಪಂ ಚುನಾವಣಾ ಅರ್ಜಿ ವಜಾ ಮಾಡಿ ಸುಪ್ರೀಂ ಕೋರ್ಟ್ ಪುನರ್ ಪರಿಶೀಲನೆ ಮಾಡುವಂತೆ ಅದೇಶಿಸಿದೆ.
ಚುನಾವಣಾ ಆಯೋಗ ಸಲ್ಲಿಕೆ ಮಾಡಿದ್ದ ಅರ್ಜಿ ವಜಾಗೊಳಿಸದ ಸುಪ್ರೀಂಕೋರ್ಟ್ ನಡೆಯಿಂದ ವಿಧಾನ ಸಭಾ ಬಳಿಕವೇ ಚುನಾವಣೆ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ವಿಚಾರವಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾವಿಕ್ರಮನಾಥ್ ಹಾಗೂ ನ್ಯಾ. ಅನಿರುದ್ ಬೋಸ್ ನೇತೃತ್ವದ ಪೀಠವು ವಜಾಗೊಳಿಸಿದೆ. ರಾಜ್ಯ ಸರ್ಕಾರವು ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರವೇ ಚುನಾವಣಾ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ವರ್ಷದಿಂದ ಬಾಕಿ ಇರುವ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆದಿಲ್ಲ. ಇದಕ್ಕೆ ಕಾರಣ ಎರಡೂ ಪಂಚಾಯಿತಿಗಳಲ್ಲಿ ಕ್ಷೇತ್ರಗಳ ಮರುವಿಗಂಡಣೆ ಹಾಗೂ ಮೀಸಲು ನಿಗದಿಗೊಳಿಸುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಹೀಗಾಗಿ ಕೆಲವೆಡೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತವೆ.
ಈ ಕಾರ್ಯವನ್ನು ಪೂರ್ಣಗೊಳಿಸಲು ಹೈಕೋರ್ಟ್ನಿಂದ ರಾಜ್ಯ ಸರ್ಕಾರಕ್ಕೆ ಮತ್ತೆ 12 ವಾರ ಕಾಲಾವಕಾಶ ನೀಡಿತ್ತು. ಈ ಕಾಲಾವಕಾಶ ಪೂರ್ಣಗೊಳ್ಳುವ ಮುನ್ನವೇ ಹೈಕೋರ್ಟ್ ನ ಆದೇಶ ಪ್ರಶ್ನಿಸಿಕೊಂಡು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಅದನ್ನು ಶುಕ್ರವಾರ ವಜಾಗೊಳಿಸಿದೆ.
ಏಪ್ರಿಲ್, ಮೇ ತಿಂಗಳಲ್ಲೇ ವಿಧಾನ ಸಭಾ ಚುನಾವಣೆ
ರಾಜ್ಯದಲ್ಲಿ 2023ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡು ಹಂತದಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಸಿದ್ಧತೆ ನಡೆಯುತ್ತಿದೆ. 3 ಪಕ್ಷ ಸೇರಿ ಆಮ್ ಆದ್ಮಿ ಕೂಡ ಈ ಬಾರಿ ಕಣಕ್ಕೆ ಇಳಿಯಲಿದೆ.