11 ವಿಧಾನ ಪರಿಷತ್ ಸದಸ್ಯರ ಭಾಗ್ಯ!
– ಸಿಟಿ ರವಿ, ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಸ್ಥಾನ
– 7 ಮಂದಿ ಕಾಂಗ್ರೆಸ್, 3 ಮಂದಿ ಬಿಜೆಪಿ, 1 ಜೆಡಿಎಸ್ ಆಯ್ಕೆ
NAMMUR EXPRESS NEWS
ಬೆಂಗಳೂರು: ವಿಧಾನ ಸಭೆಯಿಂದ ಪರಿಷತ್ಗೆ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ 11 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅಧಿಕೃತ ಆದೇಶ ಹೊರಬಿದ್ದಿದೆ.
ಕಾಂಗ್ರೆಸ್ ಏಳು ಮತ್ತು ಬಿಜೆಪಿ 3 ಹಾಗೂ ಜೆಡಿಎಸ್ನಿಂದ ಒಂದು ಸ್ಥಾನಕ್ಕೆ ಆಯ್ಕೆ ನಡೆದಿದ್ದು, ಪದವೀದರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಇಸಂಜೆಯಷ್ಟರಲ್ಲಿ ಹೊರಬೀಳಲಿದೆ.
ಈಗ 11 ಸದಸ್ಯರು ಮಾತ್ರ ಅವಿರೋಧ ಆಯ್ಕೆಯಾಗಿದ್ದು, ಆ ಪಟ್ಟಿಯನ್ನು ಎಂ.ಕೆ.ವಿಶಾಲಾಕ್ಷಿ ದೃಢೀಕರಿಸಿ ಆದೇಶ ಹೊರಡಿಸಿದ್ದಾರೆ.
ಯಾವ ಪಕ್ಷದಿಂದ ಯಾರು ಯಾರು ಆಯ್ಕೆ?
ಕಾಂಗ್ರೆಸ್ ನಿಂದ ಐವಾನ್ ಡಿಸೋಜಾ, ಕೆ.ಗೋವಿಂದರಾಜು, ಜಗದೇವ್ ಗುತ್ತೇದಾರ್, ಬಲ್ಕಿಶ್ ಬಾನು, ಎನ್.ಎಸ್ ಬೋಸರಾಜು, ಡಾ. ಯತೀಂದ್ರ, ಎ ವಸಂತ್ ಕುಮಾರ್ ಆಯ್ಕೆಯಾಗಿದ್ದರು.
ಬಿಜೆಪಿಯಿಂದ ಸಿ.ಟಿ.ರವಿ, ಮುಳೆ ಮಾರುತಿ ರಾವ್, ಎನ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
ಜೆಡಿಎಸ್ನಿಂದ ನಾಲ್ಕು ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ಎನ್.ಜವರಾಯಿಗೌಡ ಅವರನ್ನು ಆಯ್ಕೆ ಮಾಡಲಾಗಿದೆ.








