- ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ
- ವಿಶ್ರಾಂತಿಗೆ ಸೂಚಿಸಿದ ವೈದ್ಯರು
NAMMUR EXPRESS NEWS
ಉಡುಪಿ: ಹಿರಿಯ ಬಿಜೆಪಿ ನಾಯಕ, ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದು, ತುರ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರ ಸಲಹೆಯಂತೆ 4-5 ದಿನಗಳ ಕಾಲ ಸಾರ್ವಜನಿಕ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾವುದೇ ಕೆಲಸಗಳಿಗಾಗಿ ಆಪ್ತ ಸಹಾಯಕರನ್ನು ಮತ್ತು ದೂರವಾಣಿ ಮೂಲಕ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಸರಳ ನಾಯಕರಾಗಿ, ಹಿಂದುಳಿದ ವರ್ಗದ ನಾಯಕರಾಗಿ ಶ್ರೀನಿವಾಸ್ ಪೂಜಾರಿ ಅವರ ಆರೋಗ್ಯ ಸುಧಾರಣೆ ಆಗಲಿ ಎಂಬ ಹಾರೈಕೆ ಜನರಿಂದ ವ್ಯಕ್ತವಾಗುತ್ತಿದೆ.