ಲೈಫ್ ಬ್ಯೂಟಿಫುಲ್
Every child is born as a universal human being, and as they grow up, they become less human regardless of caste, religion, clan, or tribe!
– Kuvempu
ಪ್ರತಿಯೊಂದು ಮಗುವು ಹುಟ್ಟುತ್ತಾ ವಿಶ್ವ ಮಾನವನಾಗಿ ಹುಟ್ಟುತ್ತವೆ ಬೆಳಿತಾ ಬೆಳಿತಾ ಜಾತಿ, ಧರ್ಮ, ಕುಲ-ಗೋತ್ರ ಅಂತ ಅಲ್ಪಮಾನವನನ್ನಾಗಿ ಮಾಡಿಬಿಡ್ತಿವಿ!
– ಕುವೆಂಪು

All the cruel, dark ideologies of the Middle Ages, such as the Varna Ashram and the caste system, should be incinerated in the fire of scientific vision.
ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮಿಕೃತವಾಗಬೇಕು.
-ಕುವೆಂಪು
Criticism dies. Works remain. Great.
ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ಕುವೆಂಪು

The greatest glory in living lies not in never falling, but in rising every time we fall.
ಬೀಳದೆ ಬದುಕುವುದೊಂದು ಸುಳ್ಳು ಹಾಗೂ ಆ ಸುಳ್ಳಿನಲ್ಲಿ ಸಂಭ್ರಮವಿಲ್ಲ. ಪ್ರತೀ ಬಾರಿ ಬಿದ್ದಾಗಲು ಎದ್ದು ನಿಲ್ಲುವುದರಲ್ಲಿ ಗೆಲುವಿದೆ ಮತ್ತು ಆ ಗೆಲುವು ಕೇವಲ ಗೆಲುವಾಗಿರದೆ ಒಂದು ಸಂಭ್ರಮವಾಗಿರುತ್ತದೆ.

The way to get started is to quit talking and begin doing.
ಪ್ರತಿ ಆರಂಭಗಳು ಕ್ರಿಯೆಯನ್ನು ಒಳಗೊಂಡಿರುತ್ತವೆ. ಕ್ರಿಯೆಗಳಿಲ್ಲದ ಯೋಜನೆಗಳು ಆರಂಭದಲ್ಲೇ ಮುಗಿದುಹೋಗುತ್ತವೆ. ಮಾತನ್ನು ನಿಲ್ಲಿಸಿ ಕೃತಿಯನ್ನು ಆರಂಭಿಸುವುದೇ ಏಳ್ಗೆಯ ಮೂಲ.

The future belongs to those who believe in the beauty of their dreams.
ಕನಸು ಕಾಣುವುದು ಪ್ರತಿ ಜೀವಿಯ ಮೂಲಭೂತ ಅವಶ್ಯಕತೆ. ಆ ಕನಸುಗಳಲ್ಲಿ ನಂಬಿಕೆಯಿಟ್ಟು ಸಾಕಾರಕ್ಕೆ ಶ್ರಮಿಸುವವರಿಗಷ್ಟೇ ಆ ಕನಸು ಸುಂದರ ಭವಿಷ್ಯವಾಗಿ ಮುಂದಿರುತ್ತದೆ.

Do one thing every day that scares you.
ಇದೊಂದು ಅತ್ಯಂತ ಒಳ್ಳೆಯ ಮಾತು. ನಾವು ಕೆಲವು ಸನ್ನಿವೇಶಗಳಿಗೆ ಹೆದರಿ ಹೆದರಿ ದೂರ ನಿಲ್ಲುವ ಬದಲು ನಮ್ಮನ್ನು ಹೆದರಿಸುವ ಒಂದು ಕೆಲಸವನ್ನು ನಿತ್ಯವೂ ಮಾಡಬೇಕು. ಮಾನಸಿಕ ಶಕ್ತಿ, ಬೌದ್ಧಿಕ ಬೆಳವಣಿಗೆ ಎರಡೂ ವೃದ್ಧಿ.

Your time is limited, so don’t waste it living someone else’s life. Don’t be trapped by dogma – which is living with the results of other people’s thinking.
ಪ್ರತಿಯೊಬ್ಬರ ಜೀವನವೂ ಅಮೂಲ್ಯ ಮತ್ತು ಮಿತ. ಇನ್ನೊಬ್ಬರ ಅಭಿಪ್ರಾಯಗಳ ಆಧಾರದ ಮೇಲೆ ಆ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಕಾಲಹರಣ ಮಾಡಬಾರದು.

If you look at what you have in life, you’ll always have more. If you look at what you don’t have in life, you’ll never have enough.
ನಮ್ಮ ಬಳಿ ಏನಿದೆಯೋ ಅದನ್ನು ನೋಡಿದಾಗ, ನಮ್ಮ ಜೀವನದ ಅಗತ್ಯಗಳಿಗಿಂತ ಹೆಚ್ಚೇ ನಮ್ಮ ಬಳಿ ಇರುತ್ತದೆ.
ನಮ್ಮಲ್ಲಿಲ್ಲದ್ದನ್ನು ಹುಡುಕಿದಾಗ ಮಾತ್ರ ನಮ್ಮ ಬಳಿ ಇರುವುದು ಕಡಿಮೆ ಎನಿಸುತ್ತದೆ ಮತ್ತು ಅತೃಪ್ತ ಭಾವ ಕಾಡುತ್ತದೆ.

ಲೈಫ್ ಬ್ಯೂಟಿಫುಲ್
‘You learn nothing from life if you think you are right all the time’.
ನಮ್ಮನ್ನು ನಾವು ಸದಾ ‘ಸರಿ’ ಅನ್ಕೊಂಡ್ರೆ ನಮ್ಮ ಜೀವನದಿಂದ ನಾವೇನನ್ನೂ ಕಲಿಯಲು ಸಾಧ್ಯವಿಲ್ಲ.
ತಪ್ಪುಗಳು ಸಂಭವಿಸುತ್ತವೆ. ಸಂಭವಿಸಲೇಬೇಕು. ನಮ್ಮನ್ನು ಸರಿಪಡಿಸುವ ಮತ್ತು ನಮ್ಮನ್ನು ಬೆಳೆಸುವ ಸಲುವಾಗಿ!


ಲೈಫ್ ಬ್ಯೂಟಿಫುಲ್
‘A large chair does not make a king’
ದೊಡ್ಡದಾದ ಕುರ್ಚಿಗಳು ರಾಜನನ್ನು ತಯಾರು ಮಾಡುವುದಿಲ್ಲ!
ಕುಳಿತ ತಕ್ಷಣ ರಾಜ ಭಾವನೆ ಮನಸ್ಸನ್ನು ಆಳಿದರೆ ಅದು ಸತ್ಯವೂ ಅಲ್ಲ. ಯೋಗ್ಯತೆಯಿಂದಾದ ಸಂಪಾದನೆಯಷ್ಟೇ ಸತ್ಯ!

ಎಂದಿಗಾದರೂ ಒಂದನೇ ಮೆಟ್ಟಿಲ ಹತ್ತದೇ ಹತ್ತನೆಯ ಮೆಟ್ಟಿಲು ಹತ್ತಲು ಸಾಧ್ಯವೇ?!
ನಮ್ಮ ಬಯಕೆಗಳಿಗಿಂತ ಶ್ರಮದ ಬೆಲೆ ಹೆಚ್ಚೇ ಇರುತ್ತದೆ. ಶ್ರಮವೇ ಏಣಿ. ಬಯಕೆಗಳ ಸಾಕಾರಕ್ಕೆ ಆ ಏಣಿಯನ್ನು ಒಂದನೇ ಮೆಟ್ಟಿಲಿನಿಂದಲೇ ಹತ್ತಬೇಕು!

ಹಾರಬೇಕು ರೆಕ್ಕೆ ಮತ್ತು ಮನಸ ಬಿಚ್ಚಿ….
ಅಜ್ಞಾನದಿಂದ ಸುಜ್ಞಾನದ ಕಡೆಗೆ!
ಕತ್ತಲಿನಿಂದ ಬೆಳಕಿನ ಕಡೆಗೆ!
ಹತಾಶೆಗಳಿಂದ ಭರವಸೆಗಳ ಕಡೆಗೆ!
ಹುಚ್ಚು ಭ್ರಮೆಗಳಿಂದ ಕಟು ವಾಸ್ತವದ ಕಡೆಗೆ!
ಅದೇ ಯಶಸ್ಸು!!

ಕೋಗಿಲೆ ಹಾಡಿದೆ ಕೇಳಿದೆಯಾ….??
ಈ ಪ್ರಕೃತಿ ಎಷ್ಟು ಚಂದ ಮತ್ತು ನಿಯಮಾನುಸಾರವಾಗಿ ನಡೆಯುವುದು ಅಂದ್ರೆ, ಸಕಲ ಜೀವಚರಗಳೂ ತಮ್ಮಷ್ಟಕ್ಕೆ ತಮ್ಮ ಕೆಲಸವನ್ನ ತಪ್ಪದೇ ಮಾಡುತ್ತವೆ. ಯಾವುದರ ಬಗ್ಗೆಯೂ ಅಸಮಾಧಾನವಿಲ್ಲ. ಮನುಷ್ಯ ಮಾತ್ರವೇ ಕರ್ತವ್ಯಲೋಪ ಮಾಡ್ತಾನೆ ಮತ್ತು ಅಸಮಾಧಾನ ಹೊಂದುತ್ತಾನೆ. ಅವನದೇ ತಪ್ಪಿಗೆ ಅವನದೇ ಮುನಿಸು.

Close the window that hurts you.
No matter how beautiful the view is!
ದೃಶ್ಯ ಅದೆಷ್ಟೇ ಸುಂದರವಾಗಿರಲಿ, ಅದರಿಂದ ನಿಮಗೆ ನೋವಾಗ್ತಿದೆ ಅಂದಾಗ ಕಿಟಕಿಯನ್ನು ಮುಚ್ಚಿಬಿಡಿ.
ಮುಂದೆ ನೂರಾರು ಅತ್ಯುತ್ತಮ ದೃಶ್ಯಗಳು ಖುಷಿಯೊಂದಿಗೆ ಮಾತ್ರವೇ ನೋಡಲು ಸಿಗಬಹುದು.
ಭರವಸೆ ಇರಲಿ.
ಯುಗದ ಕವಿ ಜಗದ ಕವಿ
ಕುವೆಂಪು ಅವರಿಗೆ ಜನ್ಮ ದಿನದಂದು ನಮನಗಳು
“ಓ ನನ್ನ ಚೇತನ ಆಗು ನೀ ಅನಿಕೇತನ”
– ಕುವೆಂಪು
– ನಮ್ಮೊಳಗಿನ ಧ್ಯಾನ, ಮೌನ, ಶಕ್ತಿ, ಪ್ರೀತಿ, ದೈರ್ಯ, ಸ್ಥೈರ್ಯ ಎಲ್ಲವೂ ಅಗಾಧ. ಅವುಗಳನ್ನು ಪೋಷಿಸಿ ವಿಸ್ತಾರಗೊಳಿಸುವುದೇ ಅನಿಕೇತನವಾಗುವುದು! ಎಲ್ಲಿಯೂ ನಿಲ್ಲದೆ, ಮಿತಿಯನ್ನೂ ಹಾಕಿಕೊಳ್ಳದೆ ಉನ್ನತಿ ಮತ್ತು ಅತ್ಮೋನ್ನತಿಯ ಕಡೆ ಸಾಗುವುದೇ ಅನಿಕೇತನವಾಗುವುದು!.

ಪ್ರಕೃತಿ ಯಾವತ್ತಿಗೂ ಚಂದ. ಅದು ಯಾರ ಅಪ್ಪಣೆಗೂ, ಯಾರ ಸಹಕಾರಕ್ಕೂ, ಯಾರ ಬೆದರಿಕೆಗೂ ಕಾಯುವುದಿಲ್ಲ. ಬಗ್ಗುವುದಿಲ್ಲ. ಆದರೆ ಪ್ರತೀಸಾರಿ ಹೊಸದಾಗಿ ಹುಟ್ಟುತ್ತದೆ. ಮತ್ತು ತನ್ನಿಂದಲೇ ಹುಟ್ಟಿಕೊಳ್ಳುತ್ತದೆ. ಹಳೆಯ ರೂಪ ಕಳಚಿ ಕಾಲಕ್ಕನುಗುಣವಾಗಿ ಹೊಸತಾಗಿ ನಿಂತಾಗಲೇ ಪ್ರಕೃತಿಗಾಗಲಿ, ಮನುಷ್ಯರಿಗೇ ಆಗಲಿ ಬೆಲೆ. ನಮ್ಮೊಳಗಿನ ಅಹಂ ಅನ್ನು ಆಗಾಗ ಕಳಚಿದರಷ್ಟೇ ಹೊಸ ಚಿಗುರು ನಮ್ಮಿಂದ ಹುಟ್ಟಲು ಸಾಧ್ಯ!

ಕಲಿಕೆಯ ಮುಂದೆ ನಾವೆಲ್ಲರೂ ಹೀಗೆ ಅಚ್ಚರಿ ತುಂಬಿಕೊಂಡ ಅನಾಥ ಪಕ್ಷಿಯ ಹಾಗೆ. ಕಲಿಕೆಯ ವಿಷಯಗಳು ಮಾತ್ರ ಸುತ್ತಲಿನ ಬಯಲಿನ ಹಾಗೆ! ಅಪಾರ ಮತ್ತು ಅನಂತ. ಕೆಲವನ್ನು ಬಿಟ್ಟಾಗಲೇ ಕೆಲವು ಹುಟ್ಟುತ್ತವೆ. ಅರಿವು ಎಷ್ಟಾದರು ಇರಲಿ, ನಮ್ಮೊಳಗೊಂದು ಮುಗ್ಧತೆಯನ್ನು ಸದಾಕಾಲ ಜೋಪಾನ ಮಾಡಿಕೊಂಡರಷ್ಟೇ ಹಗುರಾಗಿ ಹಾರಲು ಸಾಧ್ಯ. ಹಾರಿದರಷ್ಟೇ ಬದುಕು ವಿಸ್ತಾರವಾಗಲು ಸಾಧ್ಯ!

ಯಾವುದೇ ಕೆಲಸಕ್ಕಾದ್ರು ನಮಗೊಂದು ಮೋಟಿವೇಷನ್ ಬೇಕಾಗುತ್ತೆ. ಆದರೆ ಪ್ರತಿ ದಿನ ನಮ್ಮನ್ನ ಯಾರೋ ಮೋಟಿವೇಟ್ ಮಾಡ್ಲಿ ಅಂತ ನಾವು ಕಾಯೋದಲ್ಲ. ಹಾಗಾಗಿ ಸೆಲ್ಫ್ ಮೋಟಿವೇಷನ್ ತುಂಬ ಮುಖ್ಯ. ನಮಗೆ ನಮ್ಮ ಕೆಲಸವನ್ನ ನಾವೇ ಆಗಾಗ ನೆನಪಿಸುವುದು ಸೆಲ್ಫ್ ಮೋಟಿವೇಷನ್ ನ ಅತ್ಯುತ್ತಮ ಮಾರ್ಗ.

ಸೈಲೆಂಟ್ ಆಗಿರ್ಬೇಕು ಅಂತ ಅನಿಸಿದಾಗ ಅಥವಾ ಕೆಲವು ಪರಿಸ್ಥಿತಿಗಳಿಗೆ ನಮ್ಮ ಸೈಲೆನ್ಸ್ ನ ಅಗತ್ಯವಿದ್ದಾಗ ಸೈಲೆಂಟಾಗಿ ಉಳಿದುಬಿಡಿ. ಮತ್ತೇನೋ ಶಬ್ಧಗಳ ಪ್ರಯೋಗ, ಪ್ರಹಾರಗಳನ್ನು ಮಧ್ಯೆ ತಂದು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಕೊಳ್ಳಬೇಡಿ. ಸೈಲೆನ್ಸ್ ಸಮ್ಮತಿಯೂ ಅಲ್ಲ. ದೌರ್ಬಲ್ಯವೂ ಅಲ್ಲ. ಪರಿಸ್ಥಿತಿಯ ನಿಯಂತ್ರಣದ ದಾರಿಯಷ್ಟೇ!

ಇನ್ನೊಬ್ಬರ ತಾತ್ಸಾರ, ಅಸಡ್ಡೆ, ನಿರ್ಲಕ್ಷ್ಯ ಗಳು ಯಾವುದೇ ಸಮಯದಲ್ಲೂ ನಿಮ್ಮ ಮಾನಸಿಕ ಶಕ್ತಿಯನ್ನು ಕುಗ್ಗಿಸಬಾರದು. ಅವುಗಳನ್ನೇ ಅಸ್ತ್ರವಾಗಿಸಿಕೊಂಡು ಬದುಕುವುದ ಕಲಿಯಬೇಕು. ಅವಮಾನಗಳು ಬದುಕಿಗೆ ಪ್ರೇರಣೆಯಾದಾಗಷ್ಟೇ ನಮ್ಮಿಂದ ಒಂದೊಳ್ಳೆ ಕೆಲಸ ಸಾಧ್ಯವಾಗುತ್ತದೆ

ಲೈಫ್ ಬ್ಯೂಟಿಫುಲ್
ಬದುಕು ಸುಂದರಾ…. ನೀ ಪ್ರೀತಿಸು!
ಬದುಕು ಸುಂದರಾ…. ಆರಾಧಿಸು!
ಬದುಕು ನಿಜವಾಗಿಯೂ ಚಂದವೇ. ನಿರೀಕ್ಷೆಗಳನ್ನ ಇಟ್ಕೊಂಡಾಗ, ಅದಕ್ಕೆ ಇನ್ಯಾರನ್ನೂ ಹೊಣೆ ಮಾಡದೇ ಇದ್ದಾಗ!
ಕನಸು ಕಾಣುವಾಗ, ನಮ್ಮ ಕನಸ್ಸನ್ನ ಇನ್ನೊಬ್ಬರ ಕಣ್ಣಿಗೆ ತುಂಬದೇ ನಾವೇ ನನಸು ಮಾಡಿಕೊಂಡಾಗ.
ಬೆಳಿಗ್ಗೆ ಎದ್ದು ಯಾರಿಗೋ ಗುಡ್ಮಾರ್ನಿಂಗ್ ಹೇಳುವುದರಿಂದ ನಮ್ಮ ಮಾರ್ನಿಂಗ್ ಗುಡ್ ಆಗುವುದಿಲ್ಲ. ಮತ್ತು ನಾವದನ್ನ ಹೇಳಿದ್ರೂ ಹೇಳದೆ ಹೋದ್ರೂ ಬೆಳಗು ಮತ್ತೆ ಸಂಜೆಗಳು ಯಾರಿಗೂ ಕಾಯುವುದಿಲ್ಲ.
ಇನ್ಯಾರಿಗೋ ಇವುಗಳನ್ನು ಹೇಳುವ ಬದಲು ನಮಗೆ ನಾವೇ ಹೇಳಿಕೊಳ್ಳುವುದು ಬಹಳ ಒಳ್ಳೆಯದು. ನಮ್ ದಿನ ಚನಾಗಿದ್ರೆ ನಮ್ಮ ಸುತ್ತಲಿನ ವಾತಾವರಣವೂ ಚನಾಗಿರುತ್ತೆ.

ಜೀವನದಲ್ಲಿ ಯಾವುದನ್ನ ಯಾವಾಗ ಶುರು ಮಾಡ್ಬೇಕು ಅನ್ನೋದನ್ನ ತಿಳಿಯೋದು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯ “ಯಾವುದನ್ನ ಎಲ್ಲಿಗೆ ನಿಲ್ಲಿಸಬೇಕು” ಅನ್ನೋದನ್ನ ತಿಳ್ಕೊಂಡಿರೋದು.
ಮೊದಲನೆಯದಕ್ಕೆ ನಿಮಗೆ ಹೊರಗಡೆಯಿಂದ ಗೈಡೆನ್ಸ್ ಸಿಗಬಹುದು.
ಎರಡನೆಯದಕ್ಕೆ ನಮ್ಮ ಸ್ವತಃ ವಿವೇಚನೆಯೇ ಗೈಡೆನ್ಸ್.

Mind set has more power than anything else in the world
ಎಲ್ಲದಕ್ಕೂ ಮೊದಲು ನಮ್ಮ ಮನಸ್ಸನ್ನ ತಯಾರು ಮಾಡ್ಬೇಕು. ಮನಸ್ಸು ಒಮ್ಮೆ ತಯಾರಾದ್ರೆ ಯಾವ ಕೆಲಸವಾದ್ರೂ ಅದು ಆಗಿಯೇ ಆಗುತ್ತೆ. ನಾವು ಮೊದಲು ಮನಸ್ಸನ್ನ ಸಿದ್ಧ ಪಡಿಸಿಕೊಳ್ಳುವುದೇ ನಮ್ಮ ಮುಂದಿನ ಎಲ್ಲ ಕೆಲಸಗಳ ಮೊದಲ ಹೆಜ್ಜೆ. ಉಳಿದವೆಲ್ಲ ನಂತರದವು.

Decisions help us start but discipline help us finish
ನಿರ್ಧಾರ ತೆಗೆದುಕೊಳ್ಳುವುದೇ ಒಂದು ಕಷ್ಟ. ಆದರೂ ಹಾಗೋ ಹೀಗೋ ಒಂದೇನೋ ನಿರ್ಧಾರ ತೆಗೆದುಕೊಳ್ಳಬಹುದು. ಇದೇನೂ ದೊಡ್ಡ ವಿಷಯವಲ್ಲ. ನಮ್ಮ ವೀಕ್ನೆಸ್ ಇರುವುದೇ ಇವುಗಳನ್ನು ಪಾಲಿಸುವುದರಲ್ಲಿ. ನಿರ್ಧಾರದಿಂದ ಆರಂಭವಾಗುವ ಎಲ್ಲವನ್ನೂ ದಡ ಮುಟ್ಟಿಸಲು ಶಿಸ್ತು ಅತೀ ಅತೀ ಮುಖ್ಯವಾಗುತ್ತದೆ. ಶಿಸ್ತಿಲ್ಲದೆ ಹೋದರೆ ಶುರುವಾದ ಯಾವುದೂ ಸೂಕ್ತ ಅಂತ್ಯ ಕಾಣುವುದಿಲ್ಲ.

If you want to shine like a sun, first burn like a sun – Abdul Kalam
ನಮಗೆಲ್ಲಾ ಕಷ್ಟಗಳೇ ಬರದೆ ಸುಖ ಬೇಕು!?.
ನಾವು ಸೂರ್ಯನ ಹಾಗೆ ಹೊಳಿಬೇಕು. ಪ್ರಕಾಶಮಾನವಾಗಿ ಕಾಣ್ಬೇಕು. ನಮ್ಮಿಂದ ಒಂದು ಬೆಳಕು ಸೃಷ್ಟಿಯಾಗ್ಬೇಕು…..
ಎಲ್ಲವೂ ಸರಿ. ಆದ್ರೆ ಸೂರ್ಯ ಅಷ್ಟು ಹೊಳಿತೀದಾನೆ ಅಂದ್ರೆ ಅವನು ತುಂಬ ಬೆಂಕಿಯಲ್ಲಿ ಬೆಂದಿರ್ಬೇಕಲ್ಲ?!
ನಾವೂ ಹಾಗೆ. ಅವನ ಹಾಗೆ ಹೊಳಿಬೇಕು ಅಂದ್ರೆ ಅವನ ಹಾಗೆ ಬೇಯಬೇಕಾಗಿರುತ್ತೆ

The best view comes after the hardest climb
ಅತ್ಯಂತ ಕಷ್ಟಪಟ್ಟು ಗುಡ್ಡವನ್ನು ಹತ್ತಿದ ಮೇಲೆಯೇ ಅತ್ಯುತ್ತಮ ದೃಶ್ಯವೊಂದು ನೋಡಲು ಸಿಗುತ್ತದೆ.
ತ್ರಾಸದಾಯಕ ದಾರಿಯೇ ಸೌಂದರ್ಯವನ್ನು ಮುಂದಿಡುತ್ತದೆ. ನಿಂತಲ್ಲೇ ಕಾಣಸಿಗುವ ಸುಲಭ ಸಂಗತಿಗಳಲ್ಲೇ ಜೀವನ ಮುಗಿಸಿಕೊಂಡರೆ ಅದೊಂದು ಕಲಿಕೆಯೇ ಇಲ್ಲದ ನಷ್ಟವೇ ಸರಿ!
Things that break your heart are the same things that open your eyes
ಅತೀ ನೋವಿನ ಸಂಗತಿಗಳೇ ನಮ್ಮ ಕಣ್ತೆರೆಸುವ ವಿಚಾರಗಳೂ ಆಗಿರುತ್ತವೆ.
ಹೃದಯಕ್ಕೆ ನೋವಾಯ್ತಾ? ಆಗಲೇಬೇಕು. ಅದಾಗದ ಹೊರತು ತಿಳುವಳಿಕೆಯೂ ಬರುವುದಿಲ್ಲ. ಹೀಗೆ ಸಿಕ್ಕ ಅರಿವು ಬಹಳ ಬೆಲೆಯುಳ್ಳದ್ದು ಮತ್ತು ನೋವಾಗದ ಹೊರತು ಸಿಗದ್ದು. ಹಾಗಾಗಿ ನೋವಿನೊಂದಿಗೆ ಸಿಗುವ ಪಾಠವನ್ನು ನಿರ್ಲಕ್ಷಿಸಬಾರದು.

There are no shortcuts to any place worth going.
ಯೋಗ್ಯವಾದ ಸ್ಥಳಕ್ಕೆ ತಲುಪಲು ಚಿಕ್ಕ ಪುಟ್ಟ ಅಡ್ಡದಾರಿಗಳಿರುವುದಿಲ್ಲ. ಇರುವುದೊಂದೇ ರಾಜಮಾರ್ಗ!
ಕಠಿಣವಾದರೂ ಕ್ಷೇಮ ಮತ್ತು ಯಶಸ್ವೀ ದಾರಿಯಿದು.
ಸುಲಭದಂತೆ ಕಾಣಿಸುವ ಅಥವಾ ಸುಲಭದಲ್ಲಿ ಲಭಿಸುವ ಯಾವುವೂ ಯೋಗ್ಯವಾಗಿರುವುದಿಲ್ಲ ಮತ್ತು ಶಾಶ್ವತವಾದವೂ ಅಲ್ಲ. ಅಡ್ಡದಾರಿಗೆ ಆಯಸ್ಸಿಲ್ಲ, ಶ್ರೇಯಸ್ಸಿಲ್ಲ, ಯಶಸ್ಸು ಒಂದೊಮ್ಮೆ ಸಿಕ್ಕಂತೆ ಅನಿಸಿದರೂ ಅದು ನಿಜವೂ ಅಲ್ಲ. ಶ್ರೇಷ್ಠವೂ ಅಲ್ಲ. ಆಯ್ಕೆ ಮಾಡಿಕೊಳ್ಳುವ ದಾರಿ ತ್ರಾಸದಾಯಕವಾಗಿದ್ದರೂ ಶುದ್ಧವಾಗಿದ್ದಲ್ಲಿ ಯಶಸ್ಸು ಖಂಡಿತ!.

You cannot change your future. But you can change your habits. And surely your habits will change your future.
-APJ Abdul kalam
ನೀವು ನಿಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬಹುದು. ಈ ಹವ್ಯಾಸಗಳು ಖಂಡಿತವಾಗಿಯೂ ನಿಮ್ಮ ಭವಿಷ್ಯ ಬದಲಾಯಿಸುತ್ತವೆ.
ಹೌದು. ನಮ್ಮ ಬದುಕಿನ ಪದ್ಧತಿಯೇ ಒಂದು ಹವ್ಯಾಸ. ಈ ಪದ್ಧತಿಗಳು ಸರಿಯಾಗಿದ್ದಲ್ಲಿ ಭವಿಷ್ಯವೂ ಸರಿಯಾಗಿರುತ್ತದೆ. ಉತ್ತಮ ಹವ್ಯಾಸಗಳು ಆರೋಗ್ಯಕರ ಜೀವನಕ್ಕೆ ಅವಶ್ಯಕ. ಅವೇ ನಿಮ್ಮನ್ನು ಗೆಲ್ಲಿಸುತ್ತವೆ. ಒಳ್ಳೆಯ ಹವ್ಯಾಸ, ಒಳ್ಳೆಯವರ ಸಹವಾಸ ಒಳ್ಳೆಯದನ್ನೇ ಮಾಡುತ್ತದೆ.








