ಶಿವಮೊಗ್ಗಕ್ಕೆ ಕೀರ್ತಿ ತಂದ ನಮ್ರತ..!
* ಓದಿನ ಜತೆಗೆ ಭರತ ನಾಟ್ಯದಲ್ಲಿ ಪಾಂಡಿಚೇರಿಯಲ್ಲಿ ದಾಖಲೆ
* ಎಕ್ಸಲೆಂಟ್ ವಿದ್ಯಾರ್ಥಿನಿಯಿಂದ ಗಿನ್ನಿಸ್ ವರ್ಡ್ ರೆಕಾರ್ಡ್, ಯುನಿಕ್ಯು ವರ್ಡ್ ರೆಕಾರ್ಡ್
NAMMUR EXPRESS NEWS
ಶಿವಮೊಗ್ಗ/ ತೀರ್ಥಹಳ್ಳಿ: ಎಕ್ಸಲೆಂಟ್ ಎಜುಕೇಶನ್ ಅಕಾಡೆಮಿ ತೀರ್ಥಹಳ್ಳಿ, ಇವರ ಆಡಳಿತ ಇರುವ ಮಂದಾರ ಜ್ಞಾನದಾಯಿನಿ ಪದವಿ ಪೂರ್ವ ಕಾಲೇಜು ಶಿವಮೊಗ್ಗ ಇಲ್ಲಿ ವ್ಯಾಸಂಗ ಮಾಡುತ್ತಿರುವ ನಮ್ರತ ಗಿನ್ನಿಸ್ ವರ್ಡ್ ರೆಕಾರ್ಡ್ ಹಾಗೂ ಯುನಿಕ್ಯು ವರ್ಡ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.
ನಮ್ರತ ಸುಮಾರು 11 ವರ್ಷಗಳಿಂದ ಶಿಕ್ಷಣದ ಜೊತೆಗೆ ವಿದ್ವಾನ್ ಕೇಶವ ಶರ್ಮ ಬಳಿ ಭರತ ನಾಟ್ಯವನ್ನು ಕಲಿತು ಅಭ್ಯಾಸ ಮಾಡುತ್ತಿದ್ದಾರೆ. ಜೂನೀಯರ್ ಮತ್ತು ಸೀನಿಯರ್ ಪರೀಕ್ಷೆಗಳನ್ನು ಪೂರ್ಣಗೊಳಿಸಿ 2022-23 ರಲ್ಲಿ ಪಾಂಡಿಚೇರಿಯಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನಿಸ್ ವರ್ಡ್ ರೆಕಾರ್ಡ್ ಹಾಗೂ ಯುನಿಕ್ಯು ವರ್ಡ್ ರೆಕಾರ್ಡ್ ಮಾಡಿ ಕಾಲೇಜು ಹಾಗೂ ಶಿವಮೊಗ್ಗಕ್ಕೆ ಕೀರ್ತಿ ತಂದಿರುತ್ತಾರೆ.
ನಮ್ರತರವರ ಸಾಧನೆಗೆ ಎಕ್ಸಲೆಂಟ್ ಎಜುಕೇಶನ್ ಅಕಾಡೆಮಿ (ರಿ) ತೀರ್ಥಹಳ್ಳಿಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಇವರ ಗುರುಗಳಾದ ಕೇಶವ ಶರ್ಮ ಇವರಿಗೂ ಎಕ್ಸಲೆಂಟ್ ಎಜುಕೇಶನ್ ಅಕಾಡೆಮಿ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.