ಶಿವಮೊಗ್ಗ ಜಿಲ್ಲೆಯಲ್ಲಿ 3,500ಕ್ಕೂ ಅಧಿಕ ಮೂರ್ತಿ ಪ್ರತಿಷ್ಠಾಪನೆ!
– ಮಲೆನಾಡಲ್ಲಿ ಎಲ್ಲೆಲ್ಲೂ ಗಣೇಶ ಹಬ್ಬದ ಸಂಭ್ರಮ ಸಡಗರ
– ಭದ್ರಾವತಿ ಗಣೇಶ ವಿಸರ್ಜನೆ ವೇಳೆ ಗಲಾಟೆ: 30ಕ್ಕೂ ಹೆಚ್ಚು ಜನರು ವಶಕ್ಕೆ
– ಹಬ್ಬದ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ಸರಣಿ ಮನೆಗಳ್ಳತನ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾದ್ಯಂತ ಗಣೇಶೋತ್ಸವವನ್ನು ಭಕ್ತರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.
ಮೊದಲೆರಡು ದಿನ 480ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಜಿಲ್ಲೆಯಲ್ಲಿ ಈ ಬಾರಿ ಸ್ಥಳೀಯಾಡಳಿತದ ಅನುಮತಿ ಮೇರೆಗೆ ಸಾರ್ವಜನಿಕವಾಗಿ 3,500ಕ್ಕೂ ಅಧಿಕ ವಿಘ್ನ ನಿವಾರಕನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನ ಸೆ. 07ರಂದು ವಿಜೃಂಭಣೆಯ ರಾಜಬೀದಿ ಉತ್ಸವದೊಂದಿಗೆ 420ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಸೆ. 08ರಂದು 62 ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮೂರನೇ ದಿನ ಸೆ. 9ರಂದು 1,101 ಮೂರ್ತಿಗಳು ವಿಸರ್ಜನೆಗೊಳ್ಳಲಿವೆ.
ವಿವಿಧೆಡೆ ಪ್ರತಿಷ್ಠಾಪಿಸಿರುವ ವೈವಿಧ್ಯ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆದವು. ಅನೇಕ ವೃತ್ತಗಳ್ಲಿ ೇರ ಬಂಟಿಂಗ್ಸ್ಗಳು ರಾರಾಜಿಸುತ್ತಿವೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ಮೇಲೆ ನಿಗಾವಹಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಗೊಂದಲ, ವಾಗ್ವಾದಕ್ಕೆ ಅವಕಾಶ ನೀಡದಂತೆ ಸಮಿತಿ ಪ್ರಮುಖರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಪರಿಶೀಲನೆಗಾಗಿ ಗಸ್ತು ತಿರುಗುತ್ತಿದ್ದಾರೆ.
ಗಲ್ಲಿಗಲ್ಲಿಗಳಲ್ಲೂ ಗಣೇಶನ ಆರಾಧನೆ ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ. ಕೆಲವೆಡೆ ಗಣೇಶ ಉತ್ಸವ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಗಣೇಶ ಮೂರ್ತಿಗಳು ಈಗ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುತ್ತಿವೆ. ಅನೇಕರು ಕುಟುಂಬ ಸಮೇತರಾಗಿ ತೆರಳಿ ಗಣಪತಿ ವೈಭವವನ್ನು ಕಣ್ಣುಂಬಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಮಳೆಯ ಸಿಂಚನದೊಂದಿಗೆ ಹಬ್ಬ ಕಳೆಗಟ್ಟಿತ್ತು.
ಎಲ್ಲಾ ತಾಲೂಕಲ್ಲಿ ಹಬ್ಬದ ಸಂಭ್ರಮ
ತೀರ್ಥಹಳ್ಳಿ, ಹೊಸನಗರ, ಸಾಗರ, ಶಿಕಾರಿಪುರ, ಭದ್ರಾವತಿ, ಸೊರಬ, ಶಿವಮೊಗ್ಗ ನಗರ, ಗ್ರಾಮಾಂತರ ತಾಲೂಕು ಸೇರಿ ಎಲ್ಲೆಡೆ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ.
ಭದ್ರಾವತಿ ಗಣೇಶ ವಿಸರ್ಜನೆ ವೇಳೆ ಗಲಾಟೆ: 30ಕ್ಕೂ ಹೆಚ್ಚು ಜನರು ವಶಕ್ಕೆ
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಅರಬಿಳಚಿ ಕ್ಯಾಂಪ್ನಲ್ಲಿ ಗಣಪತಿ ವಿಸರ್ಜನೆ ವೇಳೆ ಡೊಳ್ಳು ಭಾರಿಸುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಂಬಂಧಿಸಿದಂತೆ 30ಕ್ಕೂ ಹೆಚ್ಚು ಜನರ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎರಡು ಪ್ರಕರಣಗಳು ದಾಖಲಾಗಿವೆ.
ಗಣಪತಿ ವಿಸರ್ಜನೆ ವೇಳೆ ಡೊಳ್ಳು ಭಾರಿಸುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಎರಡು ಗುಂಪುಗಳ ಗಲಾಟೆ ವಿರುದ್ಧ ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮುಂಜಾಗ್ರತೆಗೆ ಅರಬಿಳಚಿ ಕ್ಯಾಂಪ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಎರಡು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಮೂರ್ತಿಗಳ ವಿಸರ್ಜನಾ ಮೆರವಣಿಗೆಯಂದು ಕಳ್ಳರ ಹಾವಳಿ!
ಶಿವಮೊಗ್ಗ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಮೂರು ದಿನ ರಜೆ ಸಿಕ್ಕ ಕಾರಣಕ್ಕೆ ಮನೆಗಳಿಗೆ ಬೀಗ ಹಾಕಿ ಸ್ವಂತ ಊರುಗಳಿಗೆ ತೆರಳಿದ್ದ ಕೆಲ ಸರ್ಕಾರಿ ನೌಕರರಿಗೆ ಕಳ್ಳರು ಶಾಕ್ ನೀಡಿದ್ದಾರೆ. ನಗರದ ಬಸವನಗುಡಿಯ ಪಿಡಬ್ಲ್ಯುಡಿ ಕ್ವಾರ್ಟಸ್ ನಲ್ಲಿ ಒಂದೇ ದಿನ ಐದಾರು ಮನೆಗಳಿಗೆ ನುಗ್ಗಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಸರಣಿ ಮನೆಗಳ್ಳತನಕ್ಕೆ ಶಿವಮೊಗ್ಗದ ಜನತೆ ಭಯಗೊಂಡಿದ್ದಾರೆ.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಮುರಳೀಧರ್, ಜಿಲ್ಲಾಧಿಕಾರಿ ಆಪ್ತ ಸಹಾಯಕ ದೀಪಕ್, ಅಪರ ಜಿಲ್ಲಾಧಿಕಾರಿ ಆಪ್ತ ಸಹಾಯಕಿ ಸಂಧ್ಯಾ,ವಾಣಿಜ್ಯ ತೆರಿಗೆ ಇಲಾಖೆ ಸ್ಟೆನೋಗ್ರಾಫರ್ ನಂದಿನಿ ನ್ಯಾಯಾಧೀಶರ ಕಾರು ಚಾಲಕ ಪ್ರಕಾಶ್ ಎಂಬುವರ ಮನೆಯಲ್ಲಿ
ಕಳ್ಳತನವಾಗಿದೆ. ವಾರ್ತಾ ಇಲಾಖೆ ಸಹಾಯಕಿ ಭಾಗ್ಯಾ ಅವರ ಮನೆಯಲ್ಲೂ ಕಳ್ಳತನ ಯತ್ನ ನಡೆದಿದೆ.
ಸೆ. 07ರಂದು ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಇದ್ದ ಕಾರಣ ಬೀಟ್ ಪೊಲೀಸರು ಕೂಡ ಅತ್ತ ಸುಳಿದಿಲ್ಲ. ಇದನ್ನು ಅರಿತ ಕಳ್ಳರು ಬೆಳಗಿನ ಜಾವ 2ರಿಂದ 3 ಗಂಟೆ ಅವಧಿಯಲ್ಲಿ ಮನೆಗಳ ಬಾಗಿಲು ಮುರಿದು ಒಳನುಗ್ಗಿದ್ದು ನಗರದ ಹೃದಯ ಭಾಗದಲ್ಲಿರುವ ಪಿಡಬ್ಲ್ಯುಡಿ ಕ್ವಾರ್ಟಸ್ನ ಮುಖ್ಯ ರಸ್ತೆ ಪಕ್ಕದ ಮನೆಗಳೇ ಕಳ್ಳರ ಟಾರ್ಗೆಟ್ ಆಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.