ಮಲ್ನಾಡ್ ಟಾಪ್ ನ್ಯೂಸ್
* ಶಿವಮೊಗ್ಗ:ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
* ಕಳಸ: ರಸ್ತೆ ಇಲ್ಲದೆ ಗೋಣಿ ಚೀಲದಲ್ಲಿ ಶವ ಸಾಗಾಟ!
* ಚಿಕ್ಕಮಗಳೂರು: ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗ ಗುರು!
NAMMUR EXPRESS NEWS
ಶಿವಮೊಗ್ಗ: ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳೆಸಿದ್ದ,ನಂತರ ಮದುವೆಯಾಗುವುದಾಗಿ ನಂಬಿಸಿ ಉಪನ್ಯಾಸಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ತಿಳಿದು ಬಂದಿದೆ.
ವಿದ್ಯಾರ್ಥಿನಿಯನ್ನು ಪುಸಲಾಯಿಸಿದ ಉಪನ್ಯಾಸಕನೊಬ್ಬ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರದ ಖಾಸಗಿ ಕಾಲೇಜಿನ ಉಪನ್ಯಾಸಕನಾಗಿರುವ ಪುನೀತ್ ಬಂಧಿತ ಆರೋಪಿಯಾಗಿದ್ದಾನೆ.ಸದ್ಯ ಅತ್ಯಾಚಾರ ಕುರಿತು ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಉಪನ್ಯಾಸಕ ಪುನೀತ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಕಳಸ: ರಸ್ತೆ ಇಲ್ಲದೆ ಗೋಣಿ ಚೀಲದಲ್ಲಿ ಶವ ಸಾಗಾಟ!
ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಎಸ್.ಕೆ ಮೇಗಲ್ ಗ್ರಾಮದಲ್ಲಿ ಆಸ್ಪ್ರಗೆ ಹೋಗಿ ಜೀವ ಉಳಿಸಿಕೊಳ್ಳಲು ಹೋದರೆ ಜೋಳಿಗೆ ಹೊತ್ತು ಗ್ರಾಮಸ್ಥರೇ ಸಾಗಿಸುವ ಸ್ಥಿತಿ ಎದುರಾಗಿದೆ.
ಕಳೆದ ವಾರದ ಹಿಂದೆ ಬೆನ್ನು ಮೂಳೆ ಮುರಿದುಕೊಂಡಿದ್ದ ಎಸ್.ಕೆ ಮೇಗಲ್ ಗ್ರಾಮದ ಯುವಕ ಅವಿನಾಶ್ (30)ನ್ನು ಆಸ್ಪತ್ರೆಗೆ ಹೊತ್ತುಕೊಂಡೆ ಗ್ರಾಮದಿಂದ ಮುಖ್ಯ ರಸ್ತೆಗೆ ಗ್ರಾಮಸ್ಥರು ಸಾಗಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಸಮರ್ಪಕ ರಸ್ತೆ ಇಲ್ಲದೆ ಕಟ್ಟಿಗೆಗೆ ಶವ ಕಟ್ಟಿ ಗ್ರಾಮಕ್ಕೆ ಸಾಗಿಸಿದ್ದಾರೆ.
ಅವಿನಾಶ್ ಎಂಬ ಯುವಕ ಅನಾರೋಗ್ಯ ದಿಂದ ಬಳಲಿದಾಗ ಆತನನ್ನು ಬೆನ್ನ ಮೇಲೆ ಹೊತ್ತು ಕಾಲು ಸಂಕ ದಾಟಿ ಕಾಲ್ನಡಿಗೆಯಲ್ಲಿ ತೆರಳಿ ಆಸ್ಪತ್ರೆಗೆ ಸೇರಿಸಲಾಗಿದೆ.
ಅಂಬುಲೈನ್ಸ್ ಬಂದರೂ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಊರಿನಿಂದ 3 ಕಿ.ಮೀ. ದೂರದಲ್ಲಿ ನಿಲ್ಲಬೇಕಾಗಿದೆ. ಹೀಗಾಗಿ ಜೋಳಿಗೆಯಲ್ಲಿ ಕಾಲು ಸಂಕ ದಾಟಬೇಕು.. ರಸ್ತೆ ಮಾಡಿಸಿಕೊಡಿ ಎಂದು ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಸಮರ್ಪಕ ರಸ್ತೆ ವ್ಯವಸ್ಥೆ ಮಾಡಿಕೊಡಬೇಕಾಗಿದೆ.
* ಚಿಕ್ಕಮಗಳೂರುನಲ್ಲಿ ಯೋಗ ಗುರುವಿಂದ ಅತ್ಯಾಚಾರ
ಚಿಕ್ಕಮಗಳೂರು: ಮಲ್ಲೇನಹಳ್ಳಿ ಗ್ರಾಮದ ಆಶ್ರಮವೊಂದರಲ್ಲಿ ಪಂಜಾಬ್ ಮೂಲದ ನವನೀತಾ ಕೌರ್ ಎಂಬ ಎನ್ ಆರ್ ಐ ವೈದ್ಯೆಯ ಮೇಲೆ ಯೋಗ ಗುರು ಪ್ರದೀಪ್ ಅತ್ಯಾಚಾರ ಎಸಗಿದ್ದಾನೆ ಎಂಬ ದೂರು ದಾಖಲಾಗಿದೆ.
ಅಮೇರಿಕಾದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತ ಅಲ್ಲಿನ ಪೌರತ್ವ ಪಡೆದಿದ್ದ ನವನೀತಾ, ಕಳೆದ ಮೂರು ತಿಂಗಳ ಹಿಂದೆ ಕೇವಲ ಆಶ್ರಮಕ್ಕೆ ಯೋಗ, ಧ್ಯಾನಕ್ಕಾಗಿ ಬಂದಿದ್ದರು. ವಿದೇಶಿ ಮಹಿಳೆಯರಿಗೆ ಯೋಗ, ಧ್ಯಾನ ಕಲಿಸುತ್ತಿದ್ದ ಪ್ರದೀಪ್ ಇದೀಗ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ್ದು, ಯೋಗ ಗುರುವಿನ ನೀಚ ಕೃತ್ಯ ಬೆಳಕಿಗೆ ಬಂದಿದೆ.
ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೈದ್ಯೆ ಪ್ರದೀಪ್ ವಿರುದ್ಧ ದೂರು ದಾಖಲಿಸಿದ್ದು, ಯೋಗ ಗುರುವಿನ ವಿರುದ್ಧ ಟ್ಿಟರ್ ನಲ್ಲಿ ಎನ್.ಆರ್.ಐ ವೈದ್ಯೆ ಪಸ್ಟ್ ಮಾಡಿದ್ದಾರೆ. ಇದೀಗ ಪೊಲೀಸರು ಅರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.