ಬ್ಯಾಂಕ್ ನೌಕರರಿಗೆ ಕಹಿ ಸುದ್ದಿ!
– ಮಾರ್ಚ್ 31 ರಂದು ಇಲ್ಲ ಬ್ಯಾಂಕ್ ರಜೆ!!
– ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ರಂಜಾನ್ ರಜೆ ರದ್ದು!
NAMMUR EXPRESS NEWS
ಹೊಸದಿಲ್ಲಿ: ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ ಮೂವತ್ತೊಂದರಂದು ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ವ್ಯವಹಾರ-ವಹಿವಾಟು ನಡೆಯುತ್ತದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಮಾ. 31ರಂದು ರಂಜಾನ್ ಹಬ್ಬವಿರುವುದರಿಂದ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಮಿಜೋರಾಂ, ಹಿಮಾಚಲ ಪ್ರದೇಶ ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ರಜೆ ಇರಬೇಕಿತ್ತು. ಹಣಕಾಸಿನ ರಿಪೋರ್ಟಿನಲ್ಲಿ ಯಾವುದೇ ವ್ಯತ್ಯಾಸ ಬರದಂತೆ ಕಂಟ್ರೋಲ್ ಮಾಡಲು ಆರ್ ಬಿಐ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ.
ಹಣಕಾಸು ವರ್ಷದ ಕೊನೆ ದಿನವಾಗಿರುವುದರಿಂದ ವಹಿವಾಟಿನ ಲೆಕ್ಕವನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರುವುದಿಲ್ಲ.







