ಆಭರಣ ಪ್ರಿಯರಿಗೆ ಗುಡ್ ನ್ಯೂಸ್..!
– ಚಿನ್ನದ ಬೆಲೆ ಇಳಿಕೆ… ಇನ್ನು ಇಳಿಯುತ್ತಾ?
– ಬೆಳ್ಳಿ ಬೆಲೆಯಲ್ಲೂ ಕೂಡ ಭಾರೀ ಇಳಿಕೆ
NAMMUR EXPRESS NEWS
ಚಿನ್ನದ ಬೆಲೆ ಹಿಂದಿನ ಎರಡು ದಿನಕ್ಕೆ ಹೋಲಿಸಿದ್ರೆ ಇಂದು ಭಾರೀ ಇಳಿಕೆಯಾಗಿದೆ. ಹೆಚ್ಚಿನವರು ಚಿನ್ನದ ಮೇಲಿನ ಹೂಡಿಕೆ ಬೆಸ್ಟ್ ಅಂತಾರೆ. ಆದ್ರೆ ಬೆಲೆ ಏರಿಕೆಯಿಂದಾಗಿ ಇತ್ತೀಚೆಗೆ ಖರೀದಿಸೋದೆ ಬೇಡವೆಂಬಂತಾಗಿದೆ. ಆದ್ರೆ ಇಂದು ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ದೀಪಾವಳಿಗೂ ಮುನ್ನ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿತ್ತು. ಆದ್ರೆ ದೀಪಾವಳಿ ನಂತರ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದೀಗ ನಿನ್ನೆಗಿಂತಲೂ ಇಂದು ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದೆ. ಇಂದು 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು ₹82 ರೂ.ನಷ್ಟು ಕಮ್ಮಿಯಾಗಿದ್ದು, ಒಟ್ಟು ಬೆಲೆ ₹12,246 ರೂ. ಆಗಿದೆ. ನಿನ್ನೆ ₹12,562 ರೂ ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹97,968 ರೂ. ಆಗಿದ್ದು, ನಿನ್ನೆ ₹98,624 ಇತ್ತು. ಈ ಮೂಲಕ 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ಬರೋಬ್ಬರಿ ₹656 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,22,460 ರೂ. ಆಗಿದ್ದು, ನಿನ್ನೆಗಿಂತ ₹820 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,24,600 ರೂ. ಆಗಿದೆ.
24K ಚಿನಕ್ಕೆ ಹೋಲಿಸಿದ್ರೆ 22K ಚಿನ್ನದ ಬೆಲೆ ಸ್ವಲ್ಪ ಕಡಿಮೆಯೇ ಇರುತ್ತೆ. ಇಂದು 22K ಚಿನ್ನದ 1 ಗ್ರಾಂ ಬೆಲೆ 11,225 ರೂ. ಆಗಿದ್ದು, ನಿನ್ನೆ ₹11,300 ರೂ. ಇತ್ತು. ಈ ಮೂಲಕ ಒಂದೇ ದಿನ ₹75 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹89,800 ರೂ. ಆಗಿದ್ದು, ನಿನ್ನೆಗಿಂತಲೂ ಇಂದು 600 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,12,250 ರೂ ಆಗಿದ್ದು, ನಿನ್ನೆ ₹1,13,000 ರೂ ಇತ್ತು. ಇದರಲ್ಲೂ ನಿನ್ನೆಗೆ ಹೋಲಿಸಿದ್ರೆ ಇಂದು ₹750 ರೂ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ ಇಂದು ₹11,22,500 ರೂ. ಆಗಿದ್ದು, ನಿನ್ನೆ ₹11,30,000 ರೂ. ಇತ್ತು. ಒಟ್ಟು ₹7,500 ರೂ. ಇಳಿಕೆಯಾಗಿದೆ.
ಭಾರತದಲ್ಲಿ ಇಂದು ಬೆಳ್ಳಿದರದಲ್ಲೂ ಭಾರೀ ಇಳಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ರೂ. ₹151 ಆಗಿದ್ದು, ನಿನ್ನೆ 155 ರೂ. ಇತ್ತು. ಈ ಮೂಲಕ ಬೆಳ್ಳಿ ಬೆಲೆಯಲ್ಲಿ ₹4 ರೂ. ಕಡಿಮೆಯಾಗಿದೆ. ಅಲ್ಲದೇ 10 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,208 ಆಗಿದೆ. ಆದ್ರೆ ನಿನ್ನೆ ರೂ. 1,240 ಆಗಿತ್ತು. ಅದೇ ರೀತಿ 100 ಗ್ರಾಂ ಬೆಳ್ಳಿ ಬೆಲೆ ಇಂದು ರೂ. 15,100 ಆಗಿದ್ದು, 1 ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು ರೂ. 1,51,000 ಆಗಿದೆ. ಪ್ರತಿಯಾಗಿ 100 ಗ್ರಾಂನಲ್ಲಿ ₹400 ರೂ. ಮತ್ತು 1000 ಗ್ರಾಂನಲ್ಲಿ 4,000 ರೂ. ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಹೆಚ್ಚಿನವರು ಚಿನ್ನದ ಮೇಲಿನ ಹೂಡಿಕೆ ಸೇಫ್ ಅಂತಾನೇ ಹೇಳ್ತಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಹೂಡಿಕೆದಾರರಿಗೆ, ಖರೀದಿದಾರರು ಚಿನ್ನ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಆದ್ರೆ ಚಿನ್ನ ಖರೀದಿ, ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆ ಬೆಳವಣಿಗೆಗಳನ್ನು ನೋಡಿಕೊಂಡರೆ ಉತ್ತಮ.







