ಕರ್ನಾಟಕದಲ್ಲಿ ಇನ್ನು 15 ದಿನ ಮಳೆ ಬಿಡಲ್ಲ!
– ಅಕ್ಟೋಬರ್ 15ರವರೆಗೆ ಮಳೆ, ಹವಾಮಾನ ಇಲಾಖೆ ಸೂಚನೆ
– ರೈತರು, ಅಡಿಕೆ ಬೆಳೆಗಾರರ ಸ್ಥಿತಿ ದೇವರೇ ಬಲ್ಲ..!
– ಈ ಬಾರಿ ವಾಡಿಕೆಗಿಂತ ಅತೀ ಹೆಚ್ಚು ಮಳೆ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ವಾಡಿಕೆಯಂತೆ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಳ್ಳಬೇಕಿದ್ದ ನೈರುತ್ಯ ಮುಂಗಾರು ಅಕ್ಟೋಬರ್ 15ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೀಗ ಮಳೆ ಜನರಬದುಕಿಗೆ ಭಾರಿ ತೊಂದರೆ ಕೊಡುತ್ತಿದೆ.
ವಾಡಿಕೆ ಪ್ರಕಾರ, ಪ್ರತಿ ವರ್ಷ ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ನೈಋುತ್ಯ ಮಾನ್ಸೂನ್ ಮುಂಗಾರು ರಾಜ್ಯದಲ್ಲಿ ಮಳೆ ಸುರಿಸುತ್ತವೆ. ಅ.1ರಿಂದ ವರ್ಷಾಂತ್ಯದವರೆಗೆ ಹಿಂಗಾರು (ಈಶಾನ್ಯ ಮಾನ್ಸೂನ್) ಮಾರುತಗಳು ಮಳೆ ಸುರಿಸುತ್ತವೆ. ಆದರೆ, ಗಾಳಿಯ ದಿಕ್ಕಿನ ಮೇರೆಗೆ ಕೆಲವು ಬಾರಿ ನೈಋುತ್ಯ ಮತ್ತು ಈಶಾನ್ಯ ಮಾನ್ಸೂನ್ನಲ್ಲಿ ವ್ಯತ್ಯಾಸವಾಗುತ್ತದೆ. ಈ ವರ್ಷ ನೈರುತ್ಯ ಮಾರುತಗಳು ಅ.15 ರವರೆಗೆ ಮುಂದುವರಿಯಲಿವೆ. ಆನಂತರ ರಾಜ್ಯಕ್ಕೆ ಈಶಾನ್ಯ ಮಾರುತಗಳು ಪ್ರವೇಶಿಸಲಿವೆ,” ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ಸೂಚನೆ
– ಹಿಂಗಾರು ಮಳೆ ಆರಂಭ ಯಾವಾಗ?
”ಈ ವರ್ಷ ಅಕ್ಟೋಬರ್ 2ನೇ ವಾರದ ಬಳಿಕ ಹಿಂಗಾರು ಮಳೆ ಆಗಮಿಸಲಿದ್ದು, ಸಾಮಾನ್ಯವಾಗಿರುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ಉತ್ತರ ಒಳನಾಡಿನ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆಯಾಗುವುದಿಲ್ಲ,” ಈ ವರ್ಷದ ವಾಡಿಕೆಗಿಂತ ಮೊದಲೇ ನೈರುತ್ಯ ಮಾನ್ಸೂನ್ ಆಗಮನವಾಯಿತು. ಮಾನ್ಸೂನ್ ಋುತುವಿನಲ್ಲಿ ರಾಜ್ಯದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 29 ರವರೆಗೆ ಸಾಮಾನ್ಯವಾಗಿ 845 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 879 ಮಿ.ಮೀ. ಮಳೆಯಾಗಿದೆ. ರಾಜ್ಯದಲ್ಲಿ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 964 ಮಿ.ಮೀ., ಆಗಿದ್ದು ಸದ್ಯ 1166 ಮಿ.ಮೀ. ಮಳೆಯಾಗಿದೆ.







