ದಕ್ಷಿಣ ಕನ್ನಡದಲ್ಲಿ ಮತ್ತೆ ಅರಳಿತು ಕಮಲ!
– ಬ್ರಿಜೇಶ್ ಚೌಟ ಅವರಿಗೆ 1,34,611 ಮತಗಳ ಅಂತರದಲ್ಲಿ ಗೆಲುವು
– ಕರಾವಳಿಯಲ್ಲಿ ಎಲ್ಲೆಲ್ಲೂ ವಿಜಯೋತ್ಸವ!
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡದಲ್ಲಿಯೂ ಬಿಜೆಪಿ ಗೆಲುವು ಸಾಧಿಸಿದ್ದು ಎಲ್ಲೆಡೆ ವಿಜಯೋತ್ಸವ ನಡೆಯುತ್ತಿದೆ. ದ ಕ ಜಿಲ್ಲಾ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೆಶ್ ಚೌಟ 1,34,611 ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ. 5,83,036 ಮತಗಳನ್ನು ಪಡೆದು ಭರ್ಜರಿ ಜಯ ಸಾಧಿಸಿರುವ ಇವರು ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ 448425 ಮತಗಳೊಂದಿಗೆ ಸೋಲು ಅನುಭವಿಸಿದ್ದಾರೆ. ಹೊಸ ಮುಖವಾಗಿ ಸೇನೆಯಲ್ಲಿ ಅಧಿಕಾರಿಯಾಗಿ ದೇಶ ಸೇವೆ ಸಲ್ಲಿಸಿದ್ದ ಶೈಕ್ಷಣಿಕವಾಗಿ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಕಣಕ್ಕಿಳಿಸಿದ್ದು ಇದೀಗ ಅವರು ಗೆಲುವನ್ನು ದಾಖಲಿಸಿದ್ದಾರೆ.
ಈ ಮೂಲಕ ಕರಾವಳಿಯಲ್ಲಿ ಕಮಲ ಮತ್ತೆ ತನ್ನ ಪಾರುಪತ್ಯ ಸಾಧನೆ ಮಾಡಿದೆ.
ದಕ್ಷಿಣ ಕನ್ನಡದಲ್ಲಿ ಸೋತವರು ಯಾರು?
ಕಾಂಗ್ರೆಸ್-ಪದ್ಮರಾಜ್, ರಂಜಿನಿ ಎಂ , ಉತ್ತಮ ಪ್ರಜಾಕೀಯ ಪಕ್ಷದ ಕೆ.ಇ.ಮನೋಹರ, ಕರುನಾಡ ಸೇವಕ ಪಕ್ಷದ ದುರ್ಗಾ ಪ್ರಸಾದ್, ಪಕ್ಷೇತರರಾಗಿ ದೀಪಕ್ ರಾಜೇಶ್ ಕುವೆಲ್ಲೊ, ಮೆಕ್ಸಿಂ ಪಿಂಟೊ ಹಾಗೂ ಸುಪ್ರೀತ್ ಕುಮಾರ್ ಪೂಜಾರಿ ಸೋಲು ಕಂಡಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಳೆದ ಬಾರಿ ಏನಾಗಿತ್ತು?
ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ನಳಿನ್ ಕುಮಾರ್ ಅವರು ಕಾಂಗ್ರೆಸ್ನ ಮಿಥುನ್ ರೈ ಅವರನ್ನು 2,74,621 ಮತಗಳ ಅಂತರದಿಂದ ಸೋಲಿಸಿದ್ದರು. ನಳಿನ್ ಒಟ್ಟು 7,74,285 ಮತಗಳನ್ನು ಪಡೆದಿದ್ದರೆ, ಮಿಥುನ್ ರೈ 4,99,664 ಮತ ಗಳಿಸಿದ್ದರು.
ಚುನಾವಣೆ ಫಲಿತಾಂಶ ಏನು?
ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೆಶ್ ಚೌಟ 1,34,611 ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ. 5,83,036 ಮತ ಗಳಿಕೆ, ಕಾಂಗ್ರೇಸ್ ಅಭ್ಯರ್ಥಿ ಪದ್ಮರಾಜ್ 448425 ಮತಗಳೊಂದಿಗೆ ಸೋಲು ಅನುಭವಿಸಿದ್ದಾರೆ.