ಚಿಕ್ಕಮಗಳೂರು ಕಾಫಿಗೆ ಮೋದಿ ಫಿದಾ..!
* ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ರಾಜ್ಯದ ಕಾಫಿ ಉಲ್ಲೇಖ
* ಬೆಂಗಳೂರಿನ ಯುವ ಪರಿಸರವಾದಿಯ ಕಾರ್ಯಕ್ಕೆ ಶ್ಲಾಘನೆ
NAMMMUR EXPRESS NEWS
ನವ ದೆಹಲಿ: ಪ್ರತಿ ತಿಂಗಳು ಪ್ರಧಾನಿ ನರೇಂದ್ರ ಮೋದಿ ನಡೆಸುವ ತಮ್ಮ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನ 127 ನೇ ಸಂಚಿಕೆಯಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯ ಮನ್ ಕಿ ಬಾತ್ನಲ್ಲಿ ಚಿಕ್ಕಮಗಳೂರು ಕಾಫಿ ಬಗ್ಗೆ ಶ್ಲಾಘಿಸಿರುವ ಮೋದಿ, ಬೆಂಗಳೂರಿನ ಯುವ ಪರಿಸರವಾದಿಯ ಕೆಲಸವನ್ನೂ ಶ್ಲಾಘಿಸಿದ್ದಾರೆ. ವಾರಾಂತ್ಯದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಪ್ರಾರಂಭವಾದ ಬೆಂಗಳೂರಿನ ಯುವ ಪರಿಸರವಾದಿ ಕೆಲಸವು ಈಗ ಕೆರೆಗಳ ಪುನರುಜ್ಜೀವನದವರೆಗೆ ಬಂದು ನಿಂತಿದೆ ಎಂದು ಹೇಳಿದ್ದಾರೆ.
* ಕರ್ನಾಟಕದ ಕಾಫಿಗೆ ಪ್ರಧಾನಿ ಮೋದಿ ಮೆಚ್ಚುಗೆ
ಮನ್ ಕೀ ಬಾತ್ನಲ್ಲಿ ಭಾರತೀಯ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿರುವ ಬಗ್ಗೆ ಮೋದಿ ಪ್ರಸ್ಥಾಪಿಸಿದ್ದಾರೆ. ಇದೇ ವೇಳೆ ಕರ್ನಾಟಕ ಕಾಫಿಗೆ ಮೋದಿ ಫಿದಾ ಆಗಿದ್ದು, ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯುವ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಗುಣಗಾನ ಮಾಡಿದ್ದಾರೆ.
ಕರ್ನಾಟಕವಲ್ಲದೆ, ತಮಿಳುನಾಡು ಮತ್ತು ಕೇರಳ ಸೇರಿದಂತೆ ರಾಜ್ಯಗಳಲ್ಲಿ ಬೆಳೆಯುವ ವೈವಿಧ್ಯಮಯ ಕಾಫಿಯಿಂದಾಗಿ ಭಾರತೀಯ ಕಾಫಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಹೇಳಿದ್ದಾರೆ. ಈಶಾನ್ಯವು ಕಾಫಿ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದು ವಿಶ್ವಾದ್ಯಂತ ಭಾರತದ ಕಾಫಿಯ ಗುರುತನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಪ್ರಶಂಸಿದ್ದಾರೆ.







