2025ರಲ್ಲಿ ಬಹುತೇಕ ಹಬ್ಬಗಳು ಭಾನುವಾರ!
* ಸಾರ್ವತ್ರಿಕ ಹಾಗೂ ಪರಿಮಿತ ರಜಾ ಪಟ್ಟಿ ಹೇಗಿದೆ?
* ಯಾವ ತಿಂಗಳು ಎಷ್ಟೆಷ್ಟು ರಜಾ ದಿನಗಳು?
NAMMUR EXPRESS NEWS
ಬೆಂಗಳೂರು: 2024ರ ವರ್ಷ ಕೊನೆಗೊಳ್ಳಲು ಒಂದೂವರೆ ತಿಂಗಳು ಬಾಕಿ ಇರುವಂತೆಯೇ ರಾಜ್ಯ ಸರ್ಕಾರ 2025 ರ ಸಾರ್ವತ್ರಿಕ ಹಾಗೂ ಪರಿಮಿತ ರಜಾ ಪಟ್ಟಿಯನ್ನು ನ. 14ರಂದು ಪ್ರಕಟಣೆ ಮಾಡಿದೆ. ಎಲ್ಲಾ 2ನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದೊಂದಿಗೆ ಈ ದಿನಗಳು ಕೂಡ ರಜಾದಿನವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ರಜೆ ಪಟ್ಟಿಯಲ್ಲಿ ಭಾನುವಾರದಂದು ಬರುವ ಗಣರಾಜ್ಯೋತ್ಸವ (ಜನವರಿ 26), ಯುಗಾದಿ ಹಬ್ಬ (ಮಾರ್ಚ್ 30), ಮೊಹರಂ ಕಡೇ ದಿನ (ಜುಲೈ 6) ಹಾಗೂ ಮಹಾಲಯ ಅಮವಾಸ್ಯೆ (ಸೆಪ್ಟೆಂಬರ್ 9) ಹಾಗೂ 2ನೇ ಶನಿವಾರದಂದು ಬರುವ ಕನಕದಾಸ ಜಯಂತಿ (ನವೆಂಬರ್ 8) ನಮೂದಾಗಿಲ್ಲ.
ಏಪ್ರಿಲ್ ಹಾಗೂ ಅಕ್ಟೋಬರ್ ತಿಂಗಳು ಭರ್ಜರಿ ರಜಾ ತಿಂಗಳಾಗಿದ್ದು, ಕ್ರಮವಾಗಿ 4 ಹಾಗೂ 5 ಸಾರ್ವತ್ರಿಕ ರಜೆಗಳು ಸಿಗಲಿದೆ.
ಅದರೊಂದಿಗೆ ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸರ್ಕಾರ ತಿಳಿಸಿದೆ.