ಮಾನವೀಯತೆಯ ರಾಜಕುಮಾರ
ಪುನೀತ್ ಎಂದೆಂದಿಗೂ ಅಮರ…!
ಪುನೀತ್ ರಾಜ್ ಕುಮಾರ್ 4ನೇ ವರ್ಷದ ಪುಣ್ಯ ಸ್ಮರಣೆ
ಸಹಾಯ… ಸೇವೆ… ಮಾನವೀಯತೆಗಾಗಿ ಬದುಕು ಮೀಸಲಿಟ್ಟ ರಿಯಲ್ ಹೀರೋಗೆ ನಮನ
ಕನ್ನಡದ ರಿಯಲ್ ಹೀರೋ, ಮಾನವೀಯತೆಯ ಮತ್ತೊಂದು ಮುಖ, ಲಕ್ಷ ಲಕ್ಷ ಜನರಿಗೆ ಸಹಕಾರ ಮಾಡಿದ್ದ ನಟ ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) 4ನೇ ವರ್ಷ. ಅವರ ಪುಣ್ಯ ಸ್ಮರಣೆ ರಾಜ್ಯದ ಮೂಲೆ ಮೂಲೆಯಲ್ಲಿ ನಡೆಯುತ್ತಿದೆ. 46 ವರ್ಷ ವಯಸ್ಸು ಆಗಿದ್ದ ಪುನೀತ್ ಅವರು ಹೃದಯಾಘಾತದಿಂದ ಮೃತರಾಗಿದ್ದು, ಅವರ ಸೇವೆ ಇಡೀ ರಾಜ್ಯ, ದೇಶಕ್ಕೆ ಮಾದರಿ ಆಗಿತ್ತು.
ಪುನೀತ್ ಸಾವಿನ ನಂತರ ಅಂದಿನಿಂದ ಇಂದಿನವರೆಗೆ ಅವರ ಅಭಿಮಾನಿಗಳು, ಸಂಘ ಸಂಸ್ಥೆಗಳು ಸಾವಿರಾರು ರಕ್ತದಾನ, ನೇತ್ರದಾನ ಶಿಬಿರ ಮಾಡಿವೆ. ಸಾವಿರಾರು ದೇಹ ದಾನ ನಡೆದಿದೆ.
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿದ ಬಳಿಕ ಅವರು ಮಾಡಿದ ಒಳ್ಳೆಯ ಕೆಲಸಗಳ ವಿಷಯಗಳು ಗೊತ್ತಾದವು. ಸಾಮಾನ್ಯವಾಗಿ ಪುನೀತ್ ಅವರು ಎಲ್ಲಿಯೂ ತಾವು ಮಾಡಿದ್ದನ್ನು ಹೇಳಿಕೊಳ್ಳುತ್ತಿರಲಿಲ್ಲ. ಇದಕ್ಕೆ ಅವರ ಕುಟುಂಬದವರು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ. ಅವರ ನೆನಪು ಇಡೀ ಕನ್ನಡಿಗರಿಗೆ ಮರೆಯಲಾಗದ ದಿನವಾಗಿದೆ. ಅವರ ಹೆಸರಲ್ಲಿ ಅಥವಾ ನಿಮ್ಮ ತಂದೆ, ತಾಯಂದಿರ, ಪ್ರೀತಿ ಪಾತ್ರರ ನೆನಪಲ್ಲಿ ಕಷ್ಟದಲ್ಲಿರುವವರ ಬದುಕಿಗೆ ಸಣ್ಣ ಸಹಾಯ ಮಾಡಿ. ಅದು ನಿಮ್ಮ ಬದುಕನ್ನು ಸಾರ್ಥಕಗೊಳಿಸುತ್ತದೆ.
ಪುನೀತ್ ಅವರ ನೆನಪು ಅಮರ… ಅವರ ಸೇವೆ ಮುಂದುವರಿಸೋಣ
ಪುನೀತ್ ಮತ್ತೆ ಹುಟ್ಟಿ ಬನ್ನಿ…!








