ಅಕ್ಕಿಯ ಬೆಲೆ ಹೆಚ್ಚಳ: ಜನರಿಗೆ ಊಟವೂ ಭಾರ?!
– 15 ವರ್ಷದಲ್ಲೇ ಅಕ್ಕಿ ಬೆಲೆ ಹೆಚ್ಚಳ: ಏಕೆ ಹೆಚ್ಚಳ
– ದೇಶಿಯ ಅಕ್ಕಿಗೂ ಡಿಮ್ಯಾಂಡ್ ಡಿಮ್ಯಾಂಡ್!
NAMMUR EXPRESS NEWS
ಬೆಂಗಳೂರು/ಮಂಗಳೂರು: ರಾಜ್ಯದಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗಿರುವುದು ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ.
ಕೆಂಪು ಅಕ್ಕಿ, ಬಾಸುಮತಿ ಅಕ್ಕಿ, ಕುಚ್ಚಲಕ್ಕಿ ಸೇರಿದಂತೆ ಎಲ್ಲಾ ಮಾದರಿ ಅಕ್ಕಿಯ ಬೆಲೆ ಹೆಚ್ಚಾಗಿದೆ. ಅಕ್ಕಿಗೆ ಡಿಮ್ಯಾಂಡ್ ಹೆಚ್ಚಲು ಅಕ್ಕಿ ಬೆಳೆ ಬೆಳೆಯುವ ಸಂಖ್ಯೆ ಕಡಿಮೆಯಾಗಿರುವುದೇ ಕಾರಣ ಎನ್ನಲಾಗಿದೆ. ರಾಜ್ಯ, ದೇಶ ಮಾತ್ರವಲ್ಲದೇ, ವಿಶ್ವದ ಪ್ರಮುಖ ದೇಶಗಳಲ್ಲಿಯೂ ಅಕ್ಕಿಯ ದರ ಭಾರಿ ಏರಿಕೆ ಕಂಡಿದೆ. ಎಲ್ಲಾ ಕಡೆ ಅಕ್ಕಿ ಅಭಾವ ಸೃಷ್ಟಿಯಾಗಿದೆ. ಆಗಸ್ಟ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಶೇಕಡ 9.8ರಷ್ಟು ಏರಿಕೆ ಕಂಡಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ -ಸರಾಸರಿ ಆಹಾರದರ ಸೂಚ್ಯಂಕ ತಿಳಿಸಿದೆ. ಈ ದರ ಕಳೆದ 15 ವರ್ಷಗಳಲ್ಲೇ ಗರಿಷ್ಠವಾಗಿದೆ.
ಕರೋನಾ ನಂತರ ಜಾಗತಿಕವಾಗಿ ಅಕ್ಕಿ ಬಳಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಅಕ್ಕಿಗೆ ಬೇಡಿಕೆ ಹೆಚ್ಚಿದ್ದು, ಭಾರತದಿಂದ ಅಕ್ಕಿ ರಫ್ತು ಮೇಲೆ ನಿರ್ಬಂಧ ಹೇರಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಪೂರೈಕೆಯಲ್ಲಿ ವ್ಯತ್ಯವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಭತ್ತ ಬೆಳೆಯುವವರ ಸಂಖ್ಯೆ ಕಡಿಮೆ
ದೇಶದಲ್ಲಿಯೇ ಮಳೆ ಕೊರತೆ ಇದೆ. ರಾಜ್ಯದಲ್ಲಿ ಶೇಕಡ 50ರಷ್ಟು ಭತ್ತ ಬೆಳೆ ಕಡಿಮೆಯಾಗಬಹುದು. ಹೆಚ್ಚಿನ ಮಳೆಯಲಿ ಶೇಕಡ 25 ರಿಂದ 30 ರಷ್ಟು ಹೆಚ್ಚುವರಿ ಬೆಳೆಯಾಗಬಹುದು. ಇಲ್ಲದಿದ್ದರೆ ಮುಂದಿನ ವರ್ಷ ಅಕ್ಕಿ ಕೊರತೆ ಎದುರಾಗಲಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭತ್ತ ಬೆಳೆಯುವ ರೈತರು ಅಡಿಕೆ ಮೊರೆ ಹೋಗಿದ್ದಾರೆ. ಇನ್ನು ಇತರೆ ಭಾಗದಲ್ಲೂ ಭತ್ತ ಬೆಳೆಯುವ ವರ ಸಂಖ್ಯೆ ಕಡಿಮೆ ಆಗಿರುವುದು ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ಭತ್ತದ ಬೆಲೆ ಹೆಚ್ಚಳ: ಊಟ ದುಬಾರಿ!
ಎರಡು ತಿಂಗಳ ಹಿಂದೆ ಇದ್ದ ಅಕ್ಕಿದರ ಈಗ 10 ರಿಂದ 20 ರೂ.ವರೆಗೆ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ದರಕ್ಕೆ ಶೇಕಡ 10ರಷ್ಟು ಸೇರಿಸಿ ಮಾರಾಟ ಮಾಡಲಾಗುತ್ತದೆ. ಕೆಂಪು ಅಕ್ಕಿ ಮತ್ತು ಕುಚ್ಚಲಕ್ಕಿ ದರವೂ ಹೆಚ್ಚಾಗಿದೆ.