ರಾಜ್ಯ ರಾಜಕಾರಣದಲ್ಲಿ ವಿಶೇಷ ಫಲಿತಾಂಶ!
– 3 ಮಾಜಿ ಸಿಎಂಗಳಿಗೆ ಗೆಲುವು: ಹಾಲಿ ಸಂಸದರಿಗೂ ಸೋಲು
– ಮೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಬೈ ಎಲೆಕ್ಷನ್
– ಸೋತ ಹಾಗೂ ಗೆದ್ದ ರಾಜಕಾರಣಿಗಳ ಮಕ್ಕಳು ಯಾರು?
– ಕೇಂದ್ರ ಸಚಿವ, ಕರ್ನಾಟಕ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್ ಸೋಲು
ಲೋಕ ಸಭಾ ಕ್ಷೇತ್ರದ ವಿಶೇಷ ಸುದ್ದಿಗಳು ನಮ್ಮೂರ್ ಎಕ್ಸ್ ಪ್ರೆಸ್ ವೀಕ್ಷಿಸಿ…!
NAMMUR EXPRESS NEWS
ಬೆಂಗಳೂರು : ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇದೀಗ ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿ ಮೂವರು ಮಾಜಿ ಸಿಎಂಗಳು ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದಿಂದ ಕುಮಾರಸ್ವಾಮಿ, ಹಾವೇರಿಯಿಂದ ಬಸವರಾಜ್ ಬೊಮ್ಮಾಯಿ, ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದು, ಅನೇಕ ಹಾಲಿ ಸಂಸದರಿಗೂ ಕೂಡ ಸೋಲಾಗಿದೆ. ಹಾಲಿ ಸಂಸದರು ಸಚಿವರಾಗಿರುವ ಭಗವಂತ್ ಖೂಬಾ ಬೀದರ್ ನಲ್ಲಿ ಈಶ್ವರ್ ಖಂಡ್ರೆ ಸಾಗರ್ ಕಂಡ್ರೆ ವಿರುದ್ಧ ಸೋಲನ್ನ ಕಂಡಿದ್ದಾರೆ. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಸೋಲು ಕಂಡಿದ್ದಾರೆ. ಇನ್ನೂ ಮೂರು ಎಂಎಲ್ಎಗಳು ಕೂಡ ಲೋಕಸಭೆಗೆ ಶಿಫ್ಟ್ ಆಗಿದ್ದು ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಬಳ್ಳಾರಿಯ ತುಕಾರಾಂ ಬಳ್ಳಾರಿಯಲಿ ಗೆಲುವನ್ನು ಸಾಧಿಸಿದ್ದಾರೆ. ಇಲ್ಲಿ ಬೈ ಎಲೆಕ್ಷನ್ ನಡೆಯುಲಿದೆ.
ಸೋತ ಪ್ರಮುಖರು ಯಾರು ಯಾರು?
ಸೋತ ಪ್ರಮುಖರಲ್ಲಿ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರದಲ್ಲಿ ಡಾಕ್ಟರ್ ಮಂಜುನಾಥ್ ವಿರುದ್ಧ ಸೋಲನ್ನ ಕಂಡಿದ್ದಾರೆ. ಮೃಣಾಲ್ ಹೆಬ್ಬಾಳ್, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಸೋಲು ಕಂಡಿದ್ದು. ಬಳ್ಳಾರಿಯಲಿ ಶ್ರೀರಾಮುಲು ಸೋಲು ಕಂಡಿದ್ದಾರೆ. ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡಿದ್ದು, ದಾವಣಗೆರೆಯಲ್ಲಿ ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಸೋಲು ಕಂಡಿದ್ದಾರೆ. ಇನ್ನು ಕಲಬುರಗಿಯಲ್ಲಿ ಡಾ. ಉಮೇಶ್ ಜಾದವ್ ಸೋಲು ಕಂಡಿದ್ದಾರೆ. ಇನ್ನು ಮಾಜಿ ಸಚಿವರಾದ ಜಯಪ್ರಕಾಶ್ ಹೆಗಡೆ, ರಾಮಲಿಂಗಾ ಅವರ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ, ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸೋಲು ಕಂಡಿದ್ದಾರೆ.
ಗೆದ್ದ ಪ್ರಮುಖ ರಾಜಕಾರಣಿಗಳ ಮಕ್ಕಳು!
ಪ್ರಿಯಾಂಕಾ ಜಾರಕಿಹೊಳಿ ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರಿ ಚಿಕ್ಕೋಡಿಯಲ್ಲಿ ಗೆದ್ದಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಕಂಡ್ರೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಅವರ ಪುತ್ರ ಮಾಜಿ ಸಿಎಂ ಕುಮಾರಸ್ವಾಮಿಯವರು ಮಂಡ್ಯದಿಂದ ಗೆಲುವನ್ನ ಸಾಧಿಸಿದ್ದಾರೆ. ಇನ್ನೂ ಹಾಲಿ ಸಂಸದ ಮಾಜಿ ಸಚಿವ ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರು ಶಿವಮೊಗ್ಗದಿಂದ ಗೆಲುವನ್ನು ಸಾಧಿಸಿದ್ದಾರೆ. ಮಾಜಿ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಚಾಮರಾಜನಗರದಿಂದ ಗೆಲುವನ್ನ ಸಾಧಿಸಿದರೆ, ದಾವಣಗೆರೆಯಿಂದ ಹಾಲಿ ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ. ಇನ್ನೂ ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಬೆಂಗಳೂರಿನಿಂದ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಗೋವಿಂದ ಕಾರಜೋಳ ಚಿತ್ರದುರ್ಗದಿಂದ ಗೆಲುವನ್ನು ಸಾಧಿಸಿದ್ದಾರೆ.
ಸೋತ ಕರ್ನಾಟಕದ ಕೇಂದ್ರ ಸಚಿವರು!
ಕೇಂದ್ರ ಸಚಿವ, ಕರ್ನಾಟಕ ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್ ಕೇರಳದ ತಿರುವನಂತಪುರದಲ್ಲಿ ಸೋಲು ಕಂಡಿದ್ದಾರೆ. ಇವರು ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿದ್ದರು.