ಅತೀ ಹೆಚ್ಚು ಚಳಿ: ಹುಷಾರ್!
– ರಾಜ್ಯದ 15 ಜಿಲ್ಲೆಗಳಿಗೆ ಭಾರೀ ಚಳಿ
– ಮುಂದಿನ 5 ದಿನ ಭಾರೀ ಚಳಿ ಇರುವ ಸಾಧ್ಯತೆ
– ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
NAMMUR EXPRESS NEWS
ರಾಜ್ಯಾದ್ಯಂತ ಒಣಹವೆ ಇದ್ದು, ಬೆಳಗ್ಗೆ ಹಾಗೂ ಸಂಜೆಯ ಬಳಿಕ ಭಾರೀ ಚಳಿಯ ವಾತಾವರಣ ಇದೆ. ರಾಜ್ಯದ 15 ಜಿಲ್ಲೆಗಳಿಗೆ ಈ ವಾರ ಭಾರೀ ಚಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಎಲ್ಲೆಲ್ಲಿ ಭಾರೀ ಚಳಿ?
ಮುಂದಿನ 5 ದಿನ ಹೊನ್ನಾವರ, ಬೆಳಗಾವಿ, ಬೀದರ್, ಕಲಬುರ್ಗಿ, ವಿಜಯಪುರ, ಹಾವೇರಿ, ರಾಯಚೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ದಾವಣಗೆರೆ, ಚಿಂತಾಮಣಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-4 ° C ಕಡಿಮೆ ಇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ
ಬೆಂಗಳೂರು ನಗರ ಮತ್ತು ನೆರೆಹೊರೆಯ ಜಿಲ್ಲೆಗಳಿಗೆ ಮುನ್ಸೂಚನೆ
ಬೆಂಗಳೂರಲ್ಲಿ ಕಳೆದ ಎರಡು ದಿನದಿಂದ ಚಳಿ ಹೆಚ್ಚಾಗಿದ್ದು ಬೆಳಗ್ಗೆ ಹಾಗೂ ರಾತ್ರಿ ಸಮಯ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಹಗಲಿನಲ್ಲಿ ಮುಖ್ಯವಾಗಿ ಮೋಡವಿಲ್ಲದ ಆಕಾಶ ಇರುತ್ತದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಸಮಯದಲ್ಲಿ ಮಂಜು ಇದೆ, ಮುಂದಿನ 48 ಗಂಟೆಗಳ ಕಾಲ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ° C ಮತ್ತು 13 ° C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಭಾರಿ ಶೀತಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಉತ್ತರ ಭಾರತದಲ್ಲಿ ಬೀಸುತ್ತಿರುವ ಶೀತಗಾಳಿ ಪ್ರಭಾವದಿಂದ ನಗರದಲ್ಲಿ ತಾಪಮಾನ ಸಾಕಷ್ಟು ತಗ್ಗಲಿದೆ. ಜನವರಿ ತಿಂಗಳ ಸರಾಸರಿ ಕನಿಷ್ಠ ತಾಪಮಾನವು 15.8 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ವಾರದಲ್ಲಿ ಕನಿಷ್ಠ ತಾಪಮಾನ 10 ರಿಂದ 12 ಡಿ.ಸೆಲ್ಸಿಯಸ್ನಷ್ಟು ಇಳಿಕೆಯಾಗಲಿದೆ ಎಂದು ಇಲಾಖೆ ಹೇಳಿದೆ.