ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಿ.ಟಿ ರವಿಯಿಂದ ಅಶ್ಲೀಲ ಪದ ಬಳಕೆ: ದೂರು
– 10 ಬಾರಿ ಅಶ್ಲೀಲ ಪದ ಬಳಸಿದ್ದಾರೆಂದು ಸಭಾಪತಿಗೆ ಸಚಿವೆಯಿಂದ ದೂರು
– ಸದನದ ಆಡಿಯೋ ವೀಡಿಯೋ ಪರಿಶೀಲನೆಗೆ ಸ್ಪೀಕರ್ ಹೊರಟ್ಟಿ ಆದೇಶ
NAMMUR EXPRESS NEWS
ವಿಧಾನ ಪರಿಷತ್ ಕಲಾಪದ ವೇಳೆ ಬಿಜೆಪಿ ಸದಸ್ಯ ಸಿ.ಟಿ ರವಿ ತಮ್ಮ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಮ್ಮ ಸಹ ಸದಸ್ಯರೊಂದಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಬಿಜೆಪಿ ಕಾಂಗ್ರೇಸ್ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ದ ಅಂಬೇಡ್ಕರ್ವರಿಗೆ ನಿಂದಿಸಿದ್ದಾರೆಂದು ಆರೋಪಿಸಿ ಕಾಂಗ್ರೇಸ್ ಪ್ರತಿಭಟನೆ ನಡೆಸುತ್ತಿದ್ದಾಗ ಬಿಜೆಪಿ ಕಾಂಗ್ರೇಸ್ ಸದಸ್ಯರ ವಿರುದ್ಧ ಪ್ರತಿಭಟಿಸಿದೆ ಎನ್ನಲಾಗಿದೆ. ಈ ಸಂದರ್ಭ ಗದ್ದಲ ಏರ್ಪಟ್ಟ ಕಾರಣ ಸಭಾಪತಿಗಳು ಸದಸನವನ್ನು ಕೆಲ ಸಮಯದ ವರೆಗೆ ಮುಂದೂಡಿ ಹೊರ ನಡೆದಿದ್ದಾರೆ. ಈ ಸಮಯದಲ್ಲಿ ಎರಡೂ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಕಾಂಗ್ರೇಸ್ ಶಾಸಕಿ,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕಾಂಗ್ರೇಸ್ ಸದಸ್ಯರು ದೂರಿದ್ದಾರೆ. ದೂರಿನ್ವಯ ಸಭಾಪತಿಯಿಂದ ಸದಸದ ಆಡಿಯೋ,ವಿಡಿಯೋವನ್ನು ಪರಿಶೀಲಿಸಲು ಆದೇಶಿಸಿದ್ದಾರೆ.
ಸಿ.ಟಿ ರವಿ ಅಮಾನತಿಗೆ ಕಾಂಗ್ರೇಸ್ ಪಟ್ಟು.!
ಡಿಸಿಎಂ ಡಿಕೆಶಿ,ಪ್ರಿಯಾಂಕ್ ಖರ್ಗೆ,ಲಕ್ಷ್ಮೀ ಹೆಬ್ಬಾಳ್ಕರ್ ರವರಿಂದ ಸಭಾಪತಿ ಕಛೇರಿಯಲ್ಲಿ ಸಭೆ ನಡೆಸುತ್ತಿದ್ದು ಕೂಡಲೇ ಸಿ.ಟಿ ರವಿಯವರನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿಯಲಾಗಿದೆ. ಸಿ.ಟಿ ರವಿ ಪದ ಅಶ್ಲೀಲ ಪದ ಬಳಕೆ ಸಂದರ್ಭದಲ್ಲಿ ಸದಸನ ಕಲಾಪ ಮುಂದೂಡಲಾಗಿತ್ತು ಎನ್ನಲಾಗುತ್ತಿದ್ದು. ಆಡಿಯೋ,ವಿಡಿಯೋ ಸಾಕ್ಷ್ಯ ಇಲ್ಲದಿದ್ದರೇನಂತೆ ಪ್ರತ್ಯಕ್ಷ ಸಾಕ್ಷಿಗಳನ್ನೇ ಪರಿಗಣಿಸಿ ಕ್ರಮ ಕೈಗೊಳ್ಳಿ ಎಂದು ಕಾಂಗ್ರೇಸ್ ಪಟ್ಟುಹಿಡಿದಿದೆ.
ನಾನು ಯಾವುದೇ ಅಶ್ಲೀಲ ಪದ ಬಳಸಿಲ್ಲ..! – ಸಿ.ಟಿ ರವಿ
ಕಾಂಗ್ರೇಸ್ ಆರೋಪಕ್ಕೆ ಉತ್ತರಿಸಿದ ಸದಸ್ಯ ಸಿ.ಟಿ ರವಿ ಕಾಂಗ್ರೇಸಿಗರು ಆರೋಪಿಸಿದಂತೆ ನಾನು ಯಾವುದೇ ಅಶ್ಲೀಲ ಪದ ಬಳಕೆ ಮಾಡಿಲ್ಲ. ಸಭಾಪತಿಗಳು ಸದಸದ ಆಡಿಯೋ,ವಿಡಿಯೋವನ್ನು ಬೇಕಿದ್ದರೆ ಪರಿಶೀಲಿಸಲಿ ಸತ್ಯ ತಿಳಿಯುವುದು ಎಂದು ಪ್ರತಿಕ್ರಿಯಿಸಿದ್ದಾರೆ.