- ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಪಡೆದ ಕಲಾವಿದೆ
- ತೀರ್ಥಹಳ್ಳಿ ಹಿರಿಮೆಗೆ ಮತ್ತೊಂದು ಗರಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ನೃತ್ಯ ಶಿಕ್ಷಕಿ ಹರ್ಷಿತ ಎಸ್ ಅವರಿಗೆ ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಲಭಿಸಿದೆ.
ಕರ್ನಾಟಕ ಮಹಿಳಾ ರತ್ನ ಅವಾರ್ಡ್ ಪಡೆದ ಕಲಾವಿದೆ
ತೀರ್ಥಹಳ್ಳಿ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದ್ದಾರೆ.
ತೀರ್ಥಹಳ್ಳಿ ಬಾಳೆಬೈಲಿನ ಸಂತೋಷ್ ಅವರ ಪುತ್ರಿ ಹರ್ಷಿತ ಎಸ್ ರವರಿಗೆ ಮಾರ್ಚ್ 12ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕರ್ನಾಟಕ ಮಹಿಳಾ ರತ್ನ ಅವಾರ್ಡನ್ನು ಕೊಟ್ಟು ಗೌರವಿಸಲಾಗಿದೆ.
ಮಾರ್ಚ್ 26ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಗೋಲ್ಡನ್ ಅಚೀವ್ಮೆಂಟ್ ಅವಾರ್ಡ್ ಗೆ ಇವರು ಭಾಜನರಾಗಿದ್ದಾರೆ.
75ನೇ ಅಮೃತ ಮಹೋತ್ಸವ ಬೆಂಗಳೂರಿನಲ್ಲಿ ಸೌಹಾರ್ದ ಅಕಾಡೆಮಿ ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಪ್ರಥಮ ಸ್ಥಾನ ಕೂಡ ಪಡೆದಿದ್ದರು. ಬೆಂಗಳೂರು ಎಲೈಟ್ ಸ್ಟಾರ್ ಫ್ಯಾಷನ್ ಶೋ ದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೊಸನಗರ ಲಿಟಲ್ ಪ್ರಿನ್ಸೆಸ್ ಫ್ಯಾಷನ್ ಶೋನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೈಸೂರು ದಸರಾ ಸಮಿತಿ ಮೈಸೂರು ನೃತ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು 25,000 ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ವೈಎಸ್ ಇಂಟರ್ನ್ಯಾಷನಲ್ ಫ್ಯಾಶನ್ ವೀಕ್ ಸೌತ್ ಇಂಡಿಯಾ 2022- 23 ಕಿಡ್ಸ್ ಮಿಸ್ ಇಂಡಿಯಾ ದಲ್ಲಿ ಪ್ರಥಮ ಸ್ಥಾನ. ಮತ್ತು ಬೆಂಗಳೂರು ಸೌಹಾರ್ದ ಅಕಾಡೆಮಿ 22-02- 2022 ರಲ್ಲಿ ನಡೆದ ಅಮ್ಮ ಮಗಳು ನೃತ್ಯದಲ್ಲಿ ಮೊದಲ ಸ್ಥಾನ. 3-3-2022ರಲ್ಲಿ ಬೆಂಗಳೂರಿನಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಅದ್ಭುತವಾದ ಕೋರಿಯೋಗ್ರಾಫಿ ಮೂಲಕ ಹೆಸರು ಮಾಡಿರುವ ಹರ್ಷಿತಾರವರಿಗೆ ಅಭಿನಂದನೆಗಳು.
ಅಭಿನಂದನೆ ಸಲ್ಲಿಸುವವರು
ಸಮಸ್ತ ತೀರ್ಥಹಳ್ಳಿ ಜನತೆ