- ತೀರ್ಥಹಳ್ಳಿ ತಾಲೂಕು ಕಲ್ಲುಕೊಡಿಗೆಯಲ್ಲಿ ಕಾರ್ಯಕ್ರಮ
- ರಕ್ತದಾನ, ನೇತ್ರದಾನ, ಅರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಸಂಗೀತ ಸಂಜೆ
- ಸಿನಿಮಾ ನಟ ನಟಿಯರು, ಪ್ರಸಿದ್ಧ ಗಾಯಕರಿಂದ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ವಿಶ್ವ ಮಾನವ ಕನ್ನಡ ವೇದಿಕೆ ಹಾಗೂ ಪುನೀತ್ ಬ್ರಿಗೇಡ್, ಕಲ್ಲುಕೊಡಿಗೆ ಕುಪ್ಪಳಿ ಹಾಗೂ ಬೆಕ್ಕನೂರು ಸಮಸ್ತ ಗ್ರಾಮಸ್ಥರ ಸಹಯೋಗದಲ್ಲಿ ಮಾ.17ರಂದು ದಿನವಿಡಿ ಪುನೀತ್ ನೆನಪಿನೋತ್ಸವ-2023 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಮಾ.17, ಶುಕ್ರವಾರ ಸಮುದಾಯ ಭವನ,ಮುಸ್ಸಿನಕೊಪ್ಪ, ಕಲ್ಲುಕೊಡಿಗೆ ಆವರಣದಲ್ಲಿ ಬೆಳಿಗ್ಗೆ 8:30ಕ್ಕೆ ಪುನೀತ್ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ, ನೇತ್ರದಾನ ಶಿಬಿರ, ಉಚಿತ ಅರೋಗ್ಯ ಶಿಬಿರ ಆಯೋಜನೆ ಮಾಡಲಾಗಿದೆ. ಬೆಕ್ಕನೂರು ಗ್ರಾಮಸ್ಥರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು, ಸರ್ವರೂ ರಕ್ತದಾನ ಮಾಡಬಹುದು. ಬೆಳಿಗ್ಗೆ 8:30ಕ್ಕೆ ದೇವಂಗಿ, ಹಿರೇಕೊಡಿಗೆ ಗ್ರಾಮ ಪಂಚಾಯತ್ ಮಟ್ಟದ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜನೆ ಮಾಡಲಾಗಿದೆ.
ಸುಮಾರು 29 ಮಂದಿ ಸ್ಥಳೀಯ ಸಾಧಕರು, ಸೇವಕರಿಗೆ ಸನ್ಮಾನ ಮಾಡಲಾಗುತ್ತದೆ.
ನಾಡಿನ ಖ್ಯಾತ ಸಿನಿಮಾ ತಾರೆಯರು, ಕಲಾವಿದರು, ಗಾಯಕರರು, ಕಾಮಿಡಿ ಕಲಾವಿದರು, ನೃತ್ಯ ಕಲಾವಿದರ ಪುನೀತ್ ಸಂಗೀತ ಸಂಜೆ ಮತ್ತು ವಿಶೇಷ ಕಾರ್ಯಕ್ರಮ
“ಪುನೀತ್ ಮ್ಯೂಸಿಕ್ ನೈಟ್ಸ್” ಆಯೋಜನೆ ಮಾಡಲಾಗಿದೆ.ಶ್ರೀ ಧರ್ಮಶ್ರೀ ಯುವಕ ಸಂಘ, ಎಲ್ಲಾ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಹಾಗೂ ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘಗಳು, ಬೆಕ್ಕನೂರು ಸಮಸ್ತ ಗ್ರಾಮಸ್ಥರು, ಎಲ್ಲಾ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಹಕಾರ ಹಾಗೂ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸರ್ವರನ್ನು ಸ್ವಾಗತಿಸಲಾಗಿದೆ.