ರಾಜ್ಯದಲ್ಲಿ 2 ಹೊಸ ರಾಜಕೀಯ ಪಕ್ಷ!?
– ಯತ್ನಾಳ್ ನಡುವೆ ಮತ್ತೊಂದು ಪಕ್ಷ ಘೋಷಿಸಿದ ನಟ ಚೇತನ್
– ಏನಿದು ಹೊಸ ಪಕ್ಷ.. ಯಾವಾಗ ಶುರು?
NAMMUR EXPRESS NEWS
ಶಿವಮೊಗ್ಗ : ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷದ ಉದಯಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದ ನಟ ಚೇತನ್ ಅಹಿಂಸಾ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಈ ಸಂಬಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಶಿವಮೊಗ್ಗದಲ್ಲಿ 166ನೇ ‘ಸಮಾನತೆಯ ಸಭೆ’ಯನ್ನು ನಡೆಸಲಾಗಿದೆ. ಹೋರಾಟ ಮತ್ತು ಚಳವಳಿಗಳ ಶಿವಮೊಗ್ಗ ತವರೂರಾಗಿದ್ದು, ಇಲ್ಲಿನ ವಿಚಾರವಂತರೊಂದಿಗೆ ಕರ್ನಾಟಕದ ಭವಿಷ್ಯ ಮತ್ತು ಅಭಿವೃದ್ಧಿಯ ಕುರಿತು ಚರ್ಚಿಸಲಾಗಿದೆ. ಸಂವಿಧಾನಾತ್ಮಕ ತತ್ವಗಳ ಆಧಾರದಲ್ಲಿ ಸಮಾಜವನ್ನು ಹೇಗೆ ನಿರ್ಮಿಸಬಹುದು ಎಂಬುದರ ಬಗ್ಗೆ ಗಂಭೀರವಾಗಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಜಕೀಯ ಪಕ್ಷ ರಚನೆ ಮಾಡುವ ಚಿಂತನೆಯಿದ್ದರೂ ಸಹ ಖುದ್ದು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ತಮಗೆ ಶಾಸಕ, ಸಂಸದರಾಗುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬೆಂಗಳೂರು, ಮಂಡ್ಯ ಮತ್ತು ಕೋಲಾರದಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿಯಿಂದ ಹೊರ ಬಂದಿರುವ ಯತ್ನಾಳ್ ಹೊಸ ಪಕ್ಷ ಘೋಷಣೆ ನಡುವೆ ರಾಜ್ಯದಲ್ಲಿ ಇದೀಗ ಮತ್ತೊಂದು ಹೊಸ ಪಕ್ಷ ಘೋಷಣೆ ಆಗಿದೆ.







