ಜಪಾನಲ್ಲಿ ಆರಗ, ಹುಲಿ ಕಾರ್ತಿಕ್ ಅವರಿಗೆ ಗೌರವ
– ಗ್ಲೋಬಲ್ ಅಚೀವರ್ಸ್ ಅವಾರ್ಡ್ ಸ್ವೀಕರಿಸಿದ ಸಾಧಕರು
– ಡಾ.ಆರತಿ ಕೃಷ್ಣ, ವಿಶ್ವೇಶ್ವರ ಭಟ್, ಶ್ರೀಗಳಿಂದ ಪ್ರಶಸ್ತಿ
– ಕನ್ನಡ ಜಾಗೃತಿ ಮೂಡಿಸಿದ ಕನ್ನಡ ಮನಸುಗಳು
– ರಾಕೇಶ್ ಅಡಿಗ ನಟನೆಯ ಮರ್ಯಾದೆ ಪ್ರಶ್ನೆ ಸಿನಿಮಾಕ್ಕೆ ಪ್ರೇಕ್ಷಕ ಫಿದಾ
NAMMUR EXPRESS NEWS
ತೀರ್ಥಹಳ್ಳಿ: ವಿಶ್ವವಾಣಿ ಪತ್ರಿಕೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ವಿಶ್ವದ ನಾನಾ ಭಾಗಗಳ ಸಾಧಕರನ್ನು ಗುರುತಿಸಿ ಅಂತರಾಷ್ಟ್ರೀಯ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಅನ್ನು ಜಪಾನ್ ಅಲ್ಲಿ ಪ್ರಧಾನ ಮಾಡಿದ್ದು, ಹೋರಾಟಗಾರ, ಚಿಂತಕ, ರಾಜಕೀಯ ಜೀವನದಲ್ಲಿ ಎತ್ತರಕ್ಕೆ ಏರಿರುವ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಈ ಸಾಲಿನ ಗೌರವ ಲಭಿಸಿದೆ. ಜಪಾನ್ ದೇಶದ ಟೋಕಿಯೋದಲ್ಲಿ ನವಂಬರ್ 22ರಂದು ನಡೆದ ಕಾರ್ಯಕ್ರಮದಲ್ಲಿ ಆರಗ ಜ್ಞಾನೇಂದ್ರ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ತೀರ್ಥಹಳ್ಳಿ ಮೂಲದ ಕಲಾವಿದ ಹುಲಿ ಕಾರ್ತಿಕ್ ಕೂಡ ಸಾಧಕರು ಪ್ರಶಸ್ತಿ ಸ್ವೀಕರಿಸಿದರು. ಶೃಂಗೇರಿ ಮೂಲದ ರಾಜ್ಯ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರು, ಕಾಂಗ್ರೆಸ್ ನಾಯಕಿ ಡಾ. ಆರತಿ ಕೃಷ್ಣ ಸಸೇರಿ ಸಮಾರಂಭದಲ್ಲಿ ಜಪಾನ್ ದೇಶದ ರಾಯಭಾರಿಗಳು, ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು
ಕನ್ನಡ ಮನಸುಗಳ ಕನ್ನಡ ಜಾಗೃತಿ
ತೀರ್ಥಹಳ್ಳಿ: ರಾಜಧಾನಿಯ ಕನ್ನಡ ಮನಸುಗಳು ಎಂಬ ತಂಡ ಕಟ್ಟಿ ರಾಜ್ಯದಲ್ಲಿ ಉದ್ದಗಲಕ್ಕೂ ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿರುವ ಸಂಘಟನೆ ಇದೀಗ ಸತತವಾಗಿ 5 ನೇ ವರ್ಷ ರಾಜಧಾನಿಯ ಬಸವನಗುಡಿ ಕಡಲೇಕಾಯಿ ಪರಿಷೆಯಲ್ಲಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ನಿಂತುಕೊಂಡು ಕನ್ನಡ ಜಾಗೃತಿ ಕಾರ್ಯಕ್ರಮ ಮಾಡಿದರು. ತೀರ್ಥಹಳ್ಳಿ ಮೂಲದ ಪವನ್ ದರೆಗುಂಡಿ ಈ ಸಂಘಟನೆಯ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.
ಮರ್ಯಾದೆ ಪ್ರಶ್ನೆ ಸಿನಿಮಾಕ್ಕೆ ವೀಕ್ಷಕರು ಫಿದಾ
ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ನಟ, ಬಿಗ್ ಬಾಸ್ ಖ್ಯಾತಿಯ ರಾಕೇಶ್ ಅಡಿಗ ನಟಿಸಿರುವ ಮರ್ಯಾದೆ ಪ್ರಶ್ನೆ ಸಿನಿಮಾ ನ.22ರಂದು ತೆರೆ ಕಂಡಿದ್ದು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಪ್ರೇಕ್ಷಕ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾನೆ.