ಮಲೆನಾಡ ಇಬ್ಬನಿ ಫುಡ್ಸ್ ಸಂಸ್ಥೆಗೆ ಅವಾರ್ಡ್!
– ಆಹಾರ ಗುಣಮಟ್ಟದಲ್ಲಿ ಆಯುಷ್ ಕೇರ್ ಎಕ್ಸಲೆನ್ಸ್ ಅವಾರ್ಡ್
– ಸಂಸ್ಥೆಯ ಮಾಲೀಕ ಕುಂಟುವಳ್ಳಿ ವಿಶ್ವನಾಥ್ ಅವರಿಗೆ ಗೌರವ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪರಿಶುದ್ಧ ರುಚಿ ಇಬ್ಬನಿ ತೀರ್ಥಹಳ್ಳಿಯ ಕುಂಟುವಳ್ಳಿ ಮೇಳಿಗೆಯಲ್ಲಿ ಹೊಸ ಆವಿಷ್ಕಾರದೆಡೆಗೆ ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಮಾಡಿರುವ ಇಬ್ಬನಿ ಫುಡ್ಸ್ ಸಂಸ್ಥೆಗೆ ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಿಗ್ನೇಚರ್ ಮೀಡಿಯಾ ನಡೆಸಿದ ಕಾರ್ಯಕ್ರಮದಲ್ಲಿ ಆಯುಷ್ ಕೇರ್ ಎಕ್ಸಲೆನ್ಸ್ ಅವಾರ್ಡ್ ಸಿಕ್ಕಿದೆ.
ಕುಂಟುವಳ್ಳಿ ವಿಶ್ವನಾಥ್ ಅವರು ಮೂಲತಃ ಕೃಷಿ ಕುಟುಂಬ ವಾಗಿರುವುದರಿಂದ ಭೂಮಿ, ಗಿಡ ,ಪರಿಸರದೊಂದಿಗೆ ಇವರಿಗೆ ಒಡಾಟ ಹೆಚ್ಚು. ಅಡಿಕೆ ಸುಲಿಯುವ ಯಂತ್ರ ನಿರ್ಮಾಣ ಮಾಡುವಲ್ಲಿ ಮೊದಲಿಗರಾದ ಇವರು ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳನ್ನು ಬಳಸಿ ಜನರಿಗೆ ಆರೋಗ್ಯಕರ ಪದಾರ್ಥಗಳನ್ನು ಒದಗಿಸಬೇಕು ಎಂಬ ಆಲೋಚನೆ ಇವರಲ್ಲಿ ಮೂಡಿದಾಗ ಇದಕ್ಕೆ ಪ್ರೋತ್ಸಾಹದ ಬೆನ್ನೆಲುಬಾಗಿ ನಿಂತಿದ್ದು ಇವರ ತಾಯಿ.
ತಾಯಿಯ ಪ್ರೇರಣೆಯಿಂದಾಗಿ 2017ರಲ್ಲಿ ಶ್ರೀ ಕುಂಟುವಳ್ಳಿ ವಿಶ್ವನಾತ್ ತೀರ್ಥಹಳ್ಳಿಯ ಕುಂಟುವಳ್ಳಿ ಮೇಳಿಗೆಯಲ್ಲಿ ಇಬ್ಬನಿಯನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಮಲೆನಾಡಿನ ಪ್ರಸಿದ್ಧ ರುಚಿಯನ್ನು ದೇಶ ವಿದೇಶದೆಲ್ಲೆಡೆ ಪರಿಚಯಿಸಬೇಕು ಹಾಗೂ ಜನರಿಗೆ ಆರೋಗ್ಯಕರವಾದ ರಾಸಾಯನಿಕ ರಹಿತ ಆಹಾರ ಪದಾರ್ಥಗಳನ್ನ ನೀಡಬೇಕು ಎನ್ನುವುದು ಇವರ ದ್ಯೇಯವಾಯಿತು.
ನಮ್ಮ ಸಮಾಜವು ಪ್ರಮುಖವಾಗಿ ಕಲುಷಿತ ರಾಸಾಯನಿಕ ಆಹಾರ ಮತ್ತು ನೀರಿನ ವ್ಯವಸ್ಥೆಯಿಂದ ಬಳಲುತ್ತಾ ಇರೋದು ಕಟು ಸತ್ಯವಾಗಿದ್ದರು, ಕಿಂಚಿತ್ತಾದರು ಹೋಗಲಾಡಿಸ ಬೇಕೆನ್ನುವುದು ಇವರ ಆಸೆಯಾಗಿದೆ. ಆದ್ದರಿಂದ ಜನರಿಗೆ ಗುಣಮಟ್ಟದ ಪದಾರ್ಥ ಮತ್ತು ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳನ್ನ ತಯಾರಿಸಿ ಜನರ ಮನಸ್ಸನ್ನು ಗೆದ್ದಿರುವ ಇಬ್ಬನಿ ಸಂಸ್ಥೆಯು ಹಂತ ಹಂತವಾಗಿ ಬೆಳೆಯುತ್ತಿದೆ.
ಅತ್ಯುತ್ತಮವಾದ ಪೌಷ್ಟಿಕ ಗುಣಮಟ್ಟ ಹಾಗೂ ರುಚಿ ಉಳ್ಳ ಆಹಾರ ಪದಾರ್ಥಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಇವರ ತೋಟದಲ್ಲಿ ಬೆಳೆಯುವ ಬಾಳೆಯ ಗಿಡಗಳನ್ನು ಉಪಯೋಗಿಸಿಕೊಂಡು ವಿಶೇಷ ಉಪ್ಪಿನಕಾಯಿ ತಯಾರಿಸಿ ಗ್ರಾಹಕರಿಂದ ಒಳ್ಳೆಯ ಮೆಚ್ಚುಗೆಯನ್ನ ಗಳಿಸಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಗುಣಮಟ್ಟದ ಮೂಲಕ ಇಬ್ಬನಿ ಫುಡ್ಸ್ ಹೆಸರು ಮಾಡಿದೆ ಹೀಗೆ ಇವರ ಇಬ್ಬನಿ ಫುಡ್ಸ್ ಸಂಸ್ಥೆಯು ಉತ್ತಮ ಪೌಷ್ಟಿಕಾಂಶದ ಗುಣಮಟ್ಟತೆಗೆ ಅನೇಕ ಪ್ರಶಸ್ತಿ ಪಡೆದಿದೆ.