ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬೈಕು-ಕಾರು-ಆಟೋಗಳ ಕಾಟ!
– ಆಸ್ಪತ್ರೆ ಪಾರ್ಕಿಂಗ್ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು
– ಸಾರ್ವಜನಿಕರು ದಯವಿಟ್ಟು ಪಾರ್ಕಿಂಗ್ ಜಾಗದಲ್ಲಿ ಕಾರು ಬೈಕ್ ನಿಲ್ಲಿಸಿ ಸಹಕರಿಸಿ: ಕುರುವಳ್ಳಿ ನಾಗರಾಜ್ ಮನವಿ
NAMMUR EXPRESS NEWS
ತೀರ್ಥಹಳ್ಳಿ: ಜಯಚಾಮರಾಜೇಂದ್ರ ಆಸ್ಪತ್ರೆಯ ಆವರಣದಲ್ಲಿ ಕಾರು ಮತ್ತು ಬೈಕ್ಗಳ ನಿಲುಗಡೆಗೆ ಜಾಗವನ್ನು ಸ್ವಚ್ಛಗೊಳಿಸಿ ಪಾರ್ಕಿಂಗ್ ವ್ಯವಸ್ಥೆಯನ್ನು ಆಡಳಿತ ಮಂಡಳಿಯ ಸಹಕಾರದಿಂದ ಮಾಡಲಾಗಿದೆ.,ಆದರೆ ಆಸ್ಪತ್ರೆಗೆ ಬರುವ ಸಾರ್ವಜನಿಕರು ಅಂಬುಲೆನ್ಸ್ ಮತ್ತು ಶವಗಾರಕ್ಕೆ ತೆರಳುವ ಮುಕ್ತಿ ವಾಹನಕ್ಕೆ ಹೋಗಲು ಆಗದೇ ಇರುವ ರೀತಿಯಲ್ಲಿ ಬೇಕಾಬಿಟ್ಟಿ ಬೈಕು-ಕಾರು-ಆಟೋಗಳನ್ನು ನಿಲ್ಲಿಸುವುದು ಈಗ ಅನೇಕ ರೋಗಿಗಳಿಗೆ ತೊಂದರೆ ಉಂಟು ಮಾಡಿದೆ.
ಪೊಲೀಸ್ ಇಲಾಖೆಗೆ ಮನವಿ
ಆಸ್ಪತ್ರೆಯ ಸಿಬ್ಬಂದಿಗಳು ಪಾರ್ಕಿಂಗ್ನಲ್ಲಿ ಗಾಡಿ ನಿಲ್ಲಿಸಲು ಮನವಿ ಮಾಡಿದರೂ ಅವಾಚ್ಯ ಶಬ್ದಗಳಿಂದ ಆಸ್ಪತ್ರೆ ಸಿಬ್ಬಂದಿಗಳಿಗೆ ನಿಂದಿಸಿ ಹಲ್ಲೆಗೆ ಮುಂದಾಗುತ್ತಾರೆ. ಆದುದರಿಂದ ದಯಮಾಡಿ ತಾವು ನಮ್ಮ ಆಸ್ಪತ್ರೆಯಲ್ಲಿರುವ ಪೊಲೀಸ್ ಕೊಠಡಿಗೆ ನಿಮ್ಮ ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕಾಗಿ ಆರೋಗ್ಯ ರಕ್ಷಣಾ ಸಮಿತಿಯ ಎಲ್ಲಾ ಸದಸ್ಯರ ಪರವಾಗಿ ಮನವಿ ಸಲ್ಲಿಸಲಾಗಿದೆ. ತೀರ್ಥಹಳ್ಳಿ ಡಿಎಸ್ ಪಿ ಅವರಿಗೆ ಜಯಚಾಮರಾಜೇಂದ್ರ ಆಸ್ಪತ್ರೆಯ ಪಾರ್ಕಿಂಗ್ ಸಮಸ್ಯೆಗೆ ಮನವಿ ನೀಡಿದ ತಕ್ಷಣ ಸ್ಪಂದಿಸಿ ತಕ್ಷಣ ತಮ್ಮ ಪೋಲಿಸ್ ಅಧಿಕಾರಿಗೆ ಆಸ್ಪತ್ರೆಯ ಪಾರ್ಕಿಂಗ್ ನೂತನವಾಗಿ ಸ್ವಚ್ಛಗೊಳಿಸಿರುವ ಜಾಗ ಪರಿಶೀಲನೆ ಮಾಡಿ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲು ಆದೇಶ ಮಾಡಿದ್ದಾರೆ. ಜೊತೆಗೆ ಮಹಿಳಾ ಸಿಬ್ಬಂದಿ ಮತ್ತು ದಾದಿಯರಿಗೆ ರಾತ್ರಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ನೀಡುವ ಬಗ್ಗೆ ವೈದ್ಯಾಧಿಕಾರಿಗಳಾದ ಡಾ.ಗಣೇಶ್ ಭಟ್, ಅರೋಗ್ಯ ರಕ್ಷಣಾ ಸಮಿತಿಯ ಸದಸ್ಯರಾದ ಕುರುವಳ್ಳಿ ನಾಗರಾಜ್ ಅವರೊಂದಿಗೆ ಚರ್ಚೆ ನಡೆಸಿದರು.ಈ ಸಂಧರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಸಬ್ ಇನ್ಸ್ಪೆಕ್ಟರ್ ಶಿವಣ್ಣಗೌಡ ಉಪಸ್ಥಿತರಿದ್ದರು. ಸಾರ್ವಜನಿಕರು ದಯವಿಟ್ಟು ಪಾರ್ಕಿಂಗ್ ಜಾಗದಲ್ಲಿ ಕಾರು ಬೈಕ್ ನಿಲ್ಲಿಸಿ ಸಹಕರಿಸಿ ಎಂದು ಕುರುವಳ್ಳಿ ನಾಗರಾಜ್ ಮನವಿ ಮಾಡಿದ್ದಾರೆ.