ತೀರ್ಥಹಳ್ಳಿ ಗ್ಯಾರಂಟಿ ಯೋಜನೆ ಕಚೇರಿ ಉದ್ಘಾಟನೆ!
– ಶಚ್ಚಿಂದ್ರ ಹೆಗ್ಡೆ ಅಧ್ಯಕ್ಷತೆಯಲ್ಲಿ 14 ಮಂದಿ ಸದಸ್ಯರ ಪದಗ್ರಹಣ
– ಹೊಗಳುತ್ತಲೇ ಮಾತಿನಿಂದ ಗ್ಯಾರಂಟಿ ಟೀಕಿಸಿದ ಜ್ಞಾನೇಂದ್ರ
– ಗ್ಯಾರಂಟಿ ಬಡವರ ಬದುಕು ಎಂದ ಕಿಮ್ಮನೆ, ಮಂಜುನಾಥ ಗೌಡ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಗ್ರಾಮೀಣಾಭಿವೃದ್ಧಿ ಸೌಧದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕು ಮೇಲ್ವಿಚಾರಣಾ ಸಮಿತಿಯ ಕಚೇರಿ ಶುಕ್ರವಾರ ಉದ್ಘಾಟನೆಗೊಂಡಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಳಿಗೆ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ದೃಷ್ಟಿಯಿಂದ ಸಮಿತಿ ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ ನೇತೃತ್ವದಲ್ಲಿ 14 ಮಂದಿ ಸಮಿತಿ ರಚನೆ ಮಾಡಿದ್ದು, ಶುಕ್ರವಾರ ಈ ಕಚೇರಿ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
14 ಮಂದಿ ಸದಸ್ಯರ ಪದಗ್ರಹಣ
ತೀರ್ಥಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಶಚ್ಚಿಂದ್ರ ಹೆಗ್ಡೆ ಎನ್.ಜಿ, ಸದಸ್ಯರಾದ ಶಶಿಧರ್ ಈ.ಬಿ ಈಚಲಬೈಲು, ಪ್ರದೀಪ್ ಕೆ.,ವಿಕ್ರಮ್ ಕೆ.ಎಸ್ ಕಬಸೆ, ಹರೀಶ್ ಟಿ.ಎನ್ ಮಿಲ್ಕೆರಿ, ಅಶ್ವಲ್ ಹೆಚ್.ಆರ್, ಆದರ್ಶ ಕೆ., ನಾಗೇಶ್ ನಾಯಕ್, ರಾಘವೇಂದ್ರ ವಿ.ಶೆಟ್ಟಿ ಬೆಟ್ಟಮಕ್ಕಿ, ರಚನಾ, ಶೃತಿ ವೆಂಕಟೇಶ್, ಸೈಯದ್ ಯಾಸಿನ್, ಅರುಣ್ಕುಮಾರ್ ಎ., ಪಿ.ಆರ್ ದಿಲೀಪ್ ಕುಮಾರ್, ಚಿಪ್ಪಿನಕೋಡಿಗೆ ವೆಂಕಟೇಶ್ ಸಿ.ಜಿ ಹಾಗೂ ಶೈಲಾ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯತ್,ತೀರ್ಥಹಳ್ಳಿ ಇವರು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ಯೋಜನೆ ಸಿಗದವರಿಗೆ ಸಹಾಯವಾಣಿ
ಸರ್ಕಾರದ ಗ್ಯಾರಂಟಿ ಯೋಜನೆ ತಲುಪಿಸಲು ತಾಲೂಕು ಮಟ್ಟದ ಸಮಿತಿ ಪ್ರತಿ ತಾಲೂಕಲ್ಲೂ ರಚನೆ ಮಾಡಲಾಗಿದೆ. ಗ್ರಾಮ, ತಾಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗುವುದು. ಎಲ್ಲಾ ಅರ್ಹರಿಗೆ ಸೌಲಭ್ಯ ನೀಡಲು ಈ ಸಮಿತಿ ಕೆಲಸ ಮಾಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಚಂದ್ರ ಗೋಪಾಲ್ ಹೇಳಿದರು.
ನನ್ನ ಹೆಂಡ್ತಿಗೂ ಫ್ರೀ ನಿನ್ ಹೆಂಡ್ತಿಗೂ ಪ್ರೀ ಬೇಡ ಎಂದ ಆರಗ!
ಗ್ಯಾರಂಟಿ ಯೋಜನೆ ಬಗ್ಗೆ ನಮ್ಮ ಯಾವ ವಿರೋಧ ಇಲ್ಲ, ಸಹಕಾರ ಇದೆ. ಯಾರಿಗೆ ತಲುಪಬೇಕು ಅವರಿಗೆ ತಲುಪಬೇಕು. ನನ್ನ ಹೆಂಡ್ತಿಗೂ ಫ್ರೀ ನಿನ್ ಹೆಂಡ್ತಿಗೂ ಪ್ರೀ ಅಂತ ಗೊಂದಲ ಆಗಬಾರದು. ಯೋಜನೆಯಿಂದ ಸರ್ಕಾರಕ್ಕೆ ಆದಾಯ ಕಡಿಮೆ ಆಗಿದೆ. ಸರ್ಕಾರಿ ನೌಕರರಿಗೆ ಸಾವಿರಾರು ಕೋಟಿ ಹಣ ಕೊಡಬೇಕಿದೆ. ರೈತರ ಹಣ ಕಡಿತವಾಗಿದೆ. ಅಭಿವೃದ್ಧಿ ಯೋಜನೆಗಳು ಕುಂಟಿತವಾಗಿದೆ. ಸರ್ಕಾರಕ್ಕೆ ಯೋಜನೆಗಳು ಕಷ್ಟವಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಗ್ಯಾರಂಟಿ ಬಳಿಕ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬರೆ ಹಾಕಾಯಿತು. ್ಟ್ಯಾಂಪ್ ಪೇಪರ್ 25 ರೂ. ಪೇಪರ್ ಈಗ 100 ರೂ. ಆಗಿದೆ. ಪ್ರಾಪರ್ಟಿ ರಿಜಿಸ್ಟರ್ ದರ ಹೆಚ್ಚಾಗಿದೆ. ವಿದ್ಯುತ್ ಕೆಲವರಿಗೆ ಉಚಿತ ಅನೇಕರಿಗೆ ದರ ಬರೆ ಬೇರೆಯವರಿಗೆ ಬಿದ್ದಿದೆ.
ಬಸ್ ಚಾರ್ಜ್ ಅಕ್ಕ ತಂಗಿಯವರಿಗೆ ಉಚಿತ, ಗಂಡಸರಿಗೆ ದರ ಏರಿಕೆ ಆಗಿದೆ. ಪಾಣಿಗೆ ಕೂಡ ದರ ಏರಿಕೆ ಆಗಿದೆ. ಇಂತಹ ಯೋಜನೆಗಳಿಂದ ತಾಳ ಮೇಳ ಹೊಂದಾಣಿಕೆ ಕಷ್ಟ. ಒಂದೂವರೆ ವರ್ಷದಲ್ಲಿ ಅಭಿವೃದ್ಧಿಗೆ ಹಣ ಇಲ್ಲ. ರಸ್ತೆಗೆ ಜಲ್ಲಿ ಹಾಕಲು ಕೂಡ ಹಣ ಇಲ್ಲ, ಬಡವರಿಗೆ ಸೌಲಭ್ಯ ಕೊಡಬೇಕು. ಆದರೆ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ತೆಗೆದುಕೊಳ್ಳಬಾರದು ಎಂದರು.
ಗೃಹ ಲಕ್ಷ್ಮಿ 3-4 ತಿಂಗಳ ಹಣ ಬಂದಿಲ್ಲ. 80 ಸಾವಿರ ಜನರಿಗೆ ಹಣ ನಿಂತು ಹೋಗಿದೆ. ಈ ಬಗ್ಗೆ ಗಮನಿಸಿ. ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಆಸಾದಿ ಜತೆ ನಾವಿದ್ದೇವೆ. ಅಭಿವೃದ್ಧಿ ಕೆಲಸಕ್ಕಾಗಿ ನಾನು ಸಿದ್ಧ. ಬಡವರ ಕೆಲಸಕ್ಕಾಗಿ ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದರು.
ಬಡವರ ಬದುಕಿಗಾಗಿ ಗ್ಯಾರಂಟಿ ಕೊಟ್ಟಿದ್ದೇವೆ…!: ಕಿಮ್ಮನೆ
ಭಾರತ ದೇಶದಲ್ಲಿ ಎಷ್ಟು ಜನ ಶ್ರೀಮಂತರಿದ್ದಾರೆ ಎಂಬುದು ಮುಖ್ಯ ಅಲ್ಲ. ಎಷ್ಟು ಜನರು ಬಡವರಿದ್ದಾರೆ ಎಂಬುದು ಮುಖ್ಯ. ಬಡತನ, ನಿರುದ್ಯೋಗದಲ್ಲಿ ಅತೀ ಹೆಚ್ಚು ತೊಂದರೆಯಲ್ಲಿರುವ 2ನೇ ದೇಶ ಭಾರತವಾಗಿದೆ. ಮೋದಿ ಅವರು ಬಡವರ ಬದುಕು ಸುಧಾರಣೆ ಮಾಡಲಿಲ್ಲ. ಸಿದ್ದರಾಮಯ್ಯ ಬಡವರ ಬದುಕಿನ ಮಟ್ಟ ಏರಿಸಲು ಈ ಯೋಜನೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಪೆಟ್ರೋಲ್, ಡಿಸೇಲ್ 40 ರೂ ಜಾಸ್ತಿ ಮಾಡಿದ್ದು ಮುಖ್ಯಮಂತ್ರಿನಾ? ಬೇರೆ ಕಡೆ 35 ರೂಗೆ ಸಿಕ್ತಿದೆ ಇಲ್ಲಿ ಮಾತ್ರ 100 ಗಡಿ ದಾಟಿದೆ. ನರೇಗಾ ಯೋಜನೆ ಮೂಲಕ ದೇಶದಲ್ಲೇ ಅತೀ ಹೆಚ್ಚು ಹಣವನ್ನು ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ ನೀಡಿದ್ದರು. ಕೇಂದ್ರ ಸರ್ಕಾರ ಈಗ ಆ ಹಣ ಕಡಿತ ಮಾಡಿದೆ. ಬಿಜೆಪಿ ಗಾಂಧಿಯನ್ನೇ ವಿಲನ್ ಾಡಿದ. ಆರಗ ಜ್ಞಾನೇಂದ್ರ ಅವರ ಸರ್ಕಾರ ಇದ್ದಾಗ ಅಭಿವೃದ್ಧಿ ಯೋಜನೆ ಅಂತ ಹಾಕಿಸಿಕೊಂಡು ಬಂದು ಯಾವುದಕ್ಕೂ ದುಡ್ಡು ಕೊಟ್ಟಿಲ್ಲ. ಎಷ್ಟು ಹಣ ಬಂದಿದೆ ಅದೆಲ್ಲ ಸುಳ್ಳು. ಈಗಿನ ಸರ್ಕಾರ ಆ ಹಣ ತೀರಿಸುತ್ತಿದೆ. ಗ್ಯಾರಂಟಿ ಯೋಜನೆ ಪ್ರತಿ ಮನೆಗೆ ತಲುಪಿಸಲು ಬದ್ಧ ಎಂದರು.
5 ಗ್ಯಾರಂಟಿ ನಿಲ್ಲುವ ಪ್ರಶ್ನೆಯೇ ಇಲ್ಲ: ಮಂಜುನಾಥ ಗೌಡ
ಬಡವರ ಪಾಲಿನ ಕಾರ್ಯಕ್ರಮ ಇದಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಬಡವರ ಕಾಳಜಿ ಅನೇಕರಿಗೆ ಬದುಕು ನೀಡಿದೆ. ಪರ ವಿರೋಧ ಚರ್ಚೆ ಸಹಜ. 2014ರಲ್ಲಿ ಚುನಾವಣೆ ಮುನ್ನ ನೀಡಿದ ಭರವಸೆಯಂತೆ ಏನು ಹೇಳಿದರೂ ಅದನ್ನು ಮೋದಿ ಕೊಟ್ಟಿಲ್ಲ. ಆದರೆ ರಾಜ್ಯ ಸರ್ಕಾರ ಕೊಟ್ಟಿದೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ನೀಡುವ ಯೋಜನೆ ಇದಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್. ಎಂ.ಮಂಜುನಾಥ ಗೌಡ ಹೇಳಿದ್ದಾರೆ.
ಸಮಿತಿ ಜನಪರವಾಗಿ ಕೆಲಸ ಮಾಡಲಿದೆ. 5 ಗ್ಯಾರಂಟಿ ನಿಲ್ಲುವ ಪ್ರಶ್ನೆಯೇ ಇಲ್ಲ. ಗೌರಿ ಹಬ್ಬದ ದಿನ ಒಳ್ಳೆಯ ಕೆಲಸ ಮಾಡಿದ್ದೇವೆ.
ಸಂಕಷ್ಟದ ನಡುವೆ ಸರ್ಕಾರಿ ನೌಕರರಿಗೆ ಸಂಬಳ ಹೆಚ್ಚಳ ಮಾಡಲಾಗಿದೆ.
ಫಲಾನುಭವಿಗಳು ಕೂಡ ದಾಖಲೆ ಸರಿಪಡಿಸಿ ಕೊಳ್ಳಬೇಕು. ಸ್ವಾತಂತ್ರ್ಯ ಭಾರತದ ಬಳಿಕ ಇದೊಂದು ದೇಶದ ದೊಡ್ಡ ಯೋಜನೆ. ಸಿದ್ದರಾಮಯ್ಯ ಅವರ ಬಡವರ ಕಾಳಜಿ ಯೋಜನೆ ಎಂದರು.
ದೊಡ್ಡ ಜವಾಬ್ದಾರಿ, ಜನರ ಕೆಲಸ ಮಾಡುವೆ: ಶಚ್ಚಿಂದ್ರ ಹೆಗ್ಡೆ
ಜನರ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ ಗೌಡ ಅವರು ನನಗೆ ಮತ್ತು ನಮ್ಮ ಸಮಿತಿಗೆ ಜವಾಬ್ದಾರಿ ನೀಡಿದ್ದಾರೆ. ತಾಲೂಕಿನಲ್ಲಿ ಗೃಹ ಲಕ್ಷ್ಮಿ ಹಣ 352 ಜನರಿಗೆ ಮಾತ್ರ ಸಿಕ್ಕಿಲ್ಲ, ಐಟಿ, ಜಿಎಸ್ಟಿ ಸಮಸ್ಯೆ ಇದೆ. ಪ್ರಾಮಾಣಿಕ ಸೇವೆ ಮಾಡಿದ್ದೇವೆ. ಮುಂದುವರಿಸುತ್ತೇವೆ ಎಂದು ಸಮಿತಿ ಅಧ್ಯಕ್ಷರಾದ ಶಚ್ಚಿಂದ್ರ ಹೆಗ್ಡೆ ಹೇಳಿದ್ದಾರೆ.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಚಂದ್ರ ಗೋಪಾಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಪ್ರಸನ್ನ ಕುಮಾರ್, ಜಿಲ್ಲಾ ಪಾಯತ್ ಮಾಜಿ ಅಧ್ಯಕ್ಷರು ಕಲಗೋಡು ರತ್ನಾಕರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ
ಜಿಲ್ಲಾ ಸದಸ್ಯರಾದ ಬಸವಾನಿ ಉದಯಕುಮಾರ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಆಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್ ಸೇರಿದಂತೆ ಹಲವರು ಇದ್ದರು.