ಜ್ಞಾನೇಂದ್ರ ವಿರುದ್ಧ ಕಿಮ್ಮನೆ ಮಾತಿನ ಚಾಟಿ!
– ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿಗಾಗಿ ಪ್ರತಿಭಟನೆ
– ಜ್ಞಾನೇಂದ್ರರಂತಹ ಶಾಸಕರು ಕ್ಷೇತ್ರಕ್ಕಾಗಲಿ, ರಾಜ್ಯಕ್ಕಾಗಲಿ ಒಳಿತಲ್ಲ
– ರಾಜೀನಾಮೆ ಕೊಟ್ಟು ಕೂರುವುದೇ ಲೇಸು ಎಂದು ತಿವಿದ ಮಾಜಿ ಸಚಿವ
NAMMUR EXPRESS NEWS
ತೀರ್ಥಹಳ್ಳಿ: ಆರಗ ಜ್ಞಾನೇಂದ್ರ ಅವರು 25 ವರ್ಷ ರಾಜಕೀಯದಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿಯ ಪ್ರತಿಭಟನೆ ಮಾಡುತ್ತಿದ್ದಾರೆ, ಇದು ನಮ್ಮ ವಿಪರ್ಯಾಸವೇ ಸರಿ. ಆರಗ ಜ್ಞಾನೇಂದ್ರರಂತಹ ಶಾಸಕರು ಕ್ಷೇತ್ರಕ್ಕಾಗಲಿ, ರಾಜ್ಯಕ್ಕಾಗಲಿ ಒಳಿತಲ್ಲ ಈ ಶಾಸಕರು ನಮ್ಮ ಊರಿಗೆ ಶಾಸಕರಾಗಿ ಉಳಿದಿರುವುದೇ ನಮ್ಮ ದುರಂತ ಎಂದು ಮಾಜಿ ಶಾಸಕರು ಕಿಮ್ಮನೆ ರತ್ನಾಕರ್ ಅವರು ಮಾಜಿ ಗೃಹಸಚಿವರು, ಶಾಸಕರು ಆರಗ ಜ್ಞಾನೇಂದ್ರ ವಿರುದ್ಧ ಚಾಟಿ ಬೀಸಿದರು.
ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವಾರು ಕಡೆ ಮರಳು ವ್ಯಾಪಾರ ನಡೆಯುತ್ತಿದ್ದು, ಸರಿಪಡಿಸುವ ಯಾವುದೇ ಹಾದಿಯಲ್ಲಿ ನಮ್ಮ ಶಾಸಕರಿಲ್ಲ. ಸಾಕಷ್ಟು ಭಾರಿ ನಾನೇ ಖುದ್ದಾಗಿ ಸಾಕ್ಷಿ ಪತ್ತೆ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಬೇಕಿದ್ದರೆ ಬಹಿರಂಗವಾಗಿ ಚರ್ಚಿಸಲಿ ನಾನು ಸದಾ ಸಿದ್ಧ ಎಂದು ಹೇಳಿದರು.
10 ವರ್ಷ ನಾವು ಕೂಡ ಅಧಿಕಾರದಲ್ಲಿ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದೇವೆ. ಆದರೆ ಇತ್ತೀಚಿನ ಕಾಲಘಟ್ಟದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಬದಲಾಗಿ ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿ ತೆರೆಯಲು ಪ್ರತಿಭಟನೆ ಮಾಡುತ್ತಿದ್ದಾರೆ. ಇಂತಹ ಶಾಸಕರು ರಾಜೀನಾಮೆ ಕೊಟ್ಟು ಕೂರುವುದೇ ಲೇಸು. ಇತ್ತೀಚೆಗೆ ನಡೆಯುವ ಮರಳು ವ್ಯಾಪಾರಕ್ಕೂ ಬಿಜೆಪಿ ಶಾಸಕರೆ ಪ್ರಮುಖ ಕಾರಣ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕರಾದ ನಾರಾಯಣ ರಾವ್, ವಿಶ್ವನಾಥ್ ಶೆಟ್ಟಿ, ವಿಲಿಯಮ್ ಮಾರ್ಟಿಸ್,ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಸದಸ್ಯರಾದ ಗೀತಾ ರಮೇಶ್ ಸುಶೀಲ ಶೆಟ್ಟಿ, ಶಬನಮ್, ರತ್ನಾಕರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.