ಎಲೆ ಚುಕ್ಕಿ, ಹಳದಿ ರೋಗ: ರೈತರಿಗೆ ಆತಂಕ!
– ಶೃಂಗೇರಿ, ಕೊಪ್ಪ, ಹೊಸನಗರ ಭಾಗದಲ್ಲಿ ಹೆಚ್ಚು
– ತೀರ್ಥಹಳ್ಳಿ ತಾಲೂಕಲ್ಲಿ ಕೂಡ ರೋಗ
– ಸರ್ಕಾರಗಳಿಗೆ ಈ ಬಗ್ಗೆ ನೆನಪೇ ಇಲ್ಲ..!
NAMMUR EXPRESS NEWS
ಶೃಂಗೇರಿ/ತೀರ್ಥಹಳ್ಳಿ: ಎಲೆ ಚುಕ್ಕಿ, ಹಳದಿ ರೋಗ ಮಲೆನಾಡ ಭಾಗದಲ್ಲಿ ಹೆಚ್ಚಳವಾಗಿರುವುದು ಇದೀಗ ಅಡಿಕೆ ಬೆಳೆಗಾರರಿಗೆ ಆತಂಕ ಉಂಟು ಮಾಡಿದೆ. ಆದರೆ ಯಾವುದೇ ಸರ್ಕಾರಗಳು ಈ ಬಗ್ಗೆ ಗಮನ ವಹಿಸದಿರುವುದು ಇದೀಗ ಮತ್ತಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಅಡಿಕೆಗೆ ರೋಗ ಹೆಚ್ಚಾಗುತ್ತಿದೆ. ಗಿಡಗಳು ಸುಟ್ಟು ಹೋಗುತ್ತಿವೆ. ಇನ್ನು ಫಸಲು ಕೂಡ ಕಡಿಮೆ ಆಗಿದೆ. ಶೃಂಗೇರಿ, ಕೊಪ್ಪ, ಹೊಸನಗರ ಭಾಗದಲ್ಲಿ ರೋಗ ಹೆಚ್ಚಾಗಿ ಕಾಣುತ್ತಿದೆ. ಅತೀ ಹೆಚ್ಚು ಅಡಿಕೆ ಬೆಳೆಯುವ ತೀರ್ಥಹಳ್ಳಿ ತಾಲೂಕಲ್ಲಿ ಕೂಡ ರೋಗ ನಿಧಾನಕ್ಕೆ ಆಗಮಿಸುತ್ತಿದೆ.
ಸರ್ಕಾರಗಳಿಗೆ ಈ ಬಗ್ಗೆ ನೆನಪೇ ಇಲ್ಲ..!
ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಗಳ ಬಾಧೆಯ ನಿವಾರಣೆಗಾಗಿ ಸಂಕಷ್ಟದಲ್ಲಿದ್ದ ರೈತರು ಕಳೆದ ವರ್ಷ ಶೃಂಗೇರಿ ಜಗದ್ಗುರುಗಳವರಲ್ಲಿ ತಮ್ಮ ಅಳಲನ್ನು ನಿವೇದಿಸಿಕೊಂಡಿದ್ದರು. ಶೃಂಗೇರಿಯಲ್ಲಿ ವಿಶೇಷ ಪೂಜೆ ಕೂಡ ಮಾಡಲಾಗಿತ್ತು. ಆದರೆ ಸರ್ಕಾರಗಳು, ಜನ ನಾಯಕರಿಗೆ ಮಾತ್ರ ಈ ಬಗ್ಗೆ ಗಮನ ಇಲ್ಲ.
ರೋಗ ಸಂಶೋಧನೆ ನೆಪ ಮಾತ್ರಕ್ಕೆ!
ಅಡಿಕೆಗೆ ರೋಗ ಸಂಶೋಧನೆಗೆ ಈಗಾಗಲೇ ಅನೇಕ ಪ್ರಯತ್ನ ನಡೆದಿದೆ. ಆದರೆ ಯಾವುದೂ ಫಲ ನೀಡಿಲ್ಲ. ಅಲ್ಲದೆ ಸಂಶೋಧನೆ ಮಾಡದಿದ್ರೆ ಇಡೀ ಮಲೆನಾಡ ಬದುಕು ಸಂಕಷ್ಟಕ್ಕೆ ಬೀಳಲಿದೆ.