ಜಿಲ್ಲಾ ಮಟ್ಟಕ್ಕೆ ವಾಟಗಾರು ಮೊರಾರ್ಜಿ ದೇಸಾಯಿ ಶಾಲೆ ಮಕ್ಕಳು
– ಬಾಲಕಿಯರು ಕಬ್ಬಡ್ಡಿ ಹಾಗೂ ಬಾಲಕರ ಖೋ ಖೋದಲ್ಲಿ ಸಾಧನೆ
– ಹೈಜಂಪಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತೀರ್ಥಹಳ್ಳಿಯ ಸಾನಿಕ
NAMMUR EXPRESS NEWS
ತೀರ್ಥಹಳ್ಳಿ: ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾಟಗಾರು ಶಾಲೆ ಮುತ್ತೂರು ಹೋಬಳಿಯ 14 ವರ್ಷ ವಯೋ ಮಿತಿಯೊಳಗಿನ ಬಾಲಕ ಹಾಗೂ ಬಾಲಕಿಯ ಕ್ರೀಡಾಕೂಟವು ಜ್ಞಾನದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಹುಲಿಮಂಡೆಯಲ್ಲಿ ನಡೆಸಿದ್ದು. ಈ ಕ್ರೀಡಾಕೂಟದಲ್ಲಿ ನಮ್ಮ ಶಾಲೆಯ ಮಕ್ಕಳು ಬಾಲಕಿಯ ವಿಭಾಗದಿಂದ
1. ಖೋ ಖೋ – ಪ್ರಥಮ
2. ಕಬಡ್ಡಿ – ಪ್ರಥಮ
3. 4×100 ( ರಿಲೇ) – ಪ್ರಥಮ ಹಾಗೂ
ಬಾಲಕರ ವಿಭಾಗದಿಂದ
1. ಖೋ ಖೋ – ಪ್ರಥಮ
2. ವಾಲಿಬಾಲ್ – ಪ್ರಥಮ
3. ಥ್ರೋಬಾಲ್ – ದ್ವಿತೀಯ
4. 100 ಮೀಟರ್ ಓಟ – ದ್ವಿತೀಯ
5. 200 ಮೀಟರ್ ಓಟ -ತೃತೀಯ 6. 4×100 (ರಿಲೇ) – ತೃತೀಯ ಸ್ಥಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿ ಪಡೆದಿದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ತೀರ್ಥಹಳ್ಳಿ ತಾಲೂಕು ಮಟ್ಟದ ಕ್ರೀಡಾಕೂಟವು ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಗದ್ದೆ. ( ಕನ್ನಡ ಮತ್ತು ಆಂಗ್ಲ) ಮಾಧ್ಯಮ ಶಾಲೆ ಹಿರೇಗದ್ದೆಯಲ್ಲಿ ನಡೆದಿದ್ದು, ಈ ಕ್ರೀಡಾಕೂಟದಲ್ಲಿ ಬಾಲಕಿಯರು ಕಬ್ಬಡ್ಡಿ ಹಾಗೂ ಬಾಲಕರ ಖೋ ಖೋ ಪಂದ್ಯಾವಳಿಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರು ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಮುತ್ತೂರು ಹೋಬಳಿ ಎಲ್ಲ ಗ್ರಾಮಸ್ಥರಿಗೂ ಅಭಿನಂದನೆ ಸಲ್ಲಿಸುವ ಮೂಲಕ ಜಿಲ್ಲಾ ಮಟ್ಟದಲ್ಲೂ ವಿಜೇತರಾಗಿ ರಾಜ್ಯಕ್ಕೆ ಆಯ್ಕೆಯಾಗಲೆಂದು ಶುಭ ಕೋರಿರುತ್ತಾರೆ. ಹಾಗೂ ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಿಗೂ ಮತ್ತು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೂ ಅಭಿನಂದನೆ ಸಲ್ಲಿಸಿರುತ್ತಾರೆ.
ಹೈಜಂಪಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತೀರ್ಥಹಳ್ಳಿಯ ಸಾನಿಕ
ತೀರ್ಥಹಳ್ಳಿ : ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯ ಸಾನಿಕ ಎಂಆರ್ ಹೈ ಜಂಪ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾನಿಕ ಮೇಗರವಳ್ಳಿ ಸಮೀಪದ ಮುಂಡುವಳ್ಳಿಯ ನಾಟಿ ವೈದ್ಯ ಪುರಸ್ಕೃತ ರಂಗಪ್ಪ ಹೆಗಡೆಯವರ ಮೊಮ್ಮಗಳು, ಎಂಆರ್ ರಾಘವೇಂದ್ರ ಇವರ ಪುತ್ರಿಯಾಗಿದ್ದಾರೆ.








