ತೀರ್ಥಹಳ್ಳಿ ಪಟ್ಟಣದಲ್ಲಿ 2 ದಿನ ನೀರಿಲ್ಲ!
– ಹೂಳು ತೆಗೆಯುವ ಕಾಮಗಾರಿ ಕಾರ್ಯ: ನೀರು ಸರಬರಾಜು ಸ್ಥಗಿತ
– ಸಾರ್ವಜನಿಕರು ಸಹಕರಿಸಬೇಕಾಗಿ ಪಟ್ಟಣ ಪಂಚಾಯತ್ ಮನವಿ
– ಕೊಳಕು ನೀರು ತಡೆಗಟ್ಟಿ: ಹೊಸ ತಂತ್ರಜ್ಞಾನ ಅಳವಡಿಕೆಗೆ ಪಟ್ಟು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ನೀರು ಶುದ್ದೀಕರಣ
ಕಾರ್ಯಕ್ರಮದಡಿಯಲ್ಲಿ ಘಟಕದ ಜಾಕ್ವೆಲ್ನಲ್ಲಿ ಹೂಳು ತುಂಬಿದ್ದ ಕಾರಣ ಆಗಸ್ಟ್ 31 ಹಾಗೂ ಸೆಪ್ಟೆಂಬರ್ 1ರಂದು ಹೂಳು ತೆಗೆಯುವ ಕಾಮಗಾರಿ ನಡೆಯಲಿದೆ.
ಆದ್ದರಿಂದ ಸೆಪ್ಟೆಂಬರ್ 1ರ ಭಾನುವಾರ ಮತ್ತು ಸೆಪ್ಟೆಂಬರ್ 2ರ ಸೋಮವಾರ ತೀರ್ಥಹಳ್ಳಿ ಪಟ್ಟಣದಾದ್ಯಂತ ನೀರು ಸರಬರಾಜು ಸ್ಥಗಿತವಾಗಲಿದೆ. ಸಾರ್ವಜನಿಕರು ಶನಿವಾರವೇ ಅಗತ್ಯ ಪ್ರಮಾಣದ ನೀರು ಸಂಗ್ರಹಿಸಿಕೊಟ್ಟುಕೊಳ್ಳುವಂತೆ ಪ.ಪಂ.ಮುಖ್ಯಾಧಿಕಾರಿ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಚ್ಛ ನೀರು ಕೊಡಲಿ: ತಂತ್ರಜ್ಞಾನ ಅಳವಡಿಕೆ ಆಗಲಿ!
ತೀರ್ಥಹಳ್ಳಿ ಪಟ್ಟಣದ ಜನರಿಗೆ ಸ್ವಚ್ಛ ನೀರು ಸಿಗಬೇಕು ಎಂಬ ಅಗ್ರಹ ಜನರಿಂದ ಕೇಳಿ ಬಂದಿದೆ. ಇತ್ತೀಚಿಗೆ ಕಲುಷಿತ ನೀರು ಹೆಚ್ಚು ಬರುತ್ತಿದ್ದು ಜನರ ಆರೋಗ್ಯ ಏರುಪೇರಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.