ನಮ್ಮೂರ್ ಸಾಧಕರು
– ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ಕೆ.ಪಿ.ಶ್ರೀಪಾಲ್
– ಮುದ್ದು ತೀರ್ಥಹಳ್ಳಿ ಕಾದಂಬರಿ ಬಿಡುಗಡೆ ಮಾಡಿದ ಸಿಎಂ!
NAMMUR EXPRESS NEWS
ತೀರ್ಥಹಳ್ಳಿ: ಖ್ಯಾತ ವಕೀಲರೂ,ಹೋರಾಟಗಾರರೂ,ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಾಜಮುಖಿ ವ್ಯಕ್ತಿತ್ವದ ಕೆ.ಪಿ.ಶ್ರೀಪಾಲ್ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗಿದ್ದಾರೆ.
ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಕೆ.ಪಿ.ಶ್ರೀಪಾಲ್ ರನ್ನು ರಾಜ್ಯ ಸರ್ಕಾರ ನಾಮನಿರ್ದೇಶನಗೊಳಿಸಿದೆ.
ಶಿವಮೊಗ್ಗದಲ್ಲಿ ವಕೀಲರಾಗಿರುವ ಶ್ರೀಪಾಲ್ ಅವರು ಮಲೆನಾಡು ಕಂಡ ಅತ್ಯುತ್ತಮ ವಕೀಲರಲ್ಲಿ ಒಬ್ಬರು. ಜತೆಗೆ ಜನಪರ ಹೋರಾಟಗಾರರಾಗಿ ಗುರುತಿಸಿಕೊಂಡವರು. ಇದೀಗ ಅವರಿಗೆ ಮಹತ್ವದ ಹುದ್ದೆ ಸಿಕ್ಕಿದೆ.
ಮುದ್ದು ತೀರ್ಥಹಳ್ಳಿ ಕಾದಂಬರಿ ಬಿಡುಗಡೆ ಮಾಡಿದ ಸಿಎಂ!
ಖ್ಯಾತ ಬರಹಗಾರ್ತಿ, ತೀರ್ಥಹಳ್ಳಿ ಮೂಲದ ಮುದ್ದು ತೀರ್ಥಹಳ್ಳಿ ( ವಿತಾಷಾ ರಿಯಾ) ಅವರ ಇಂಗ್ಲೀಷ್ ಕಾದಂಬರಿ ‘An Introvert Who Becomes a Lawyer!’ ಅನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಬಿಡುಗಡೆ ಮಾಡಿದರು. ಈಗಾಗಲೇ ಅನೇಕ ಪುಸ್ತಕ ಬರೆದಿರುವ ಮುದ್ದು ತೀರ್ಥಹಳ್ಳಿ ಅವರ ಈ ಕಾದಂಬರಿಯು ಈ ಕೆಳಕಂಡ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು,ನವಕರ್ನಾಟಕ ಪುಸ್ತಕ ಮಳಿಗೆ, ಗಾಂಧಿನಗರ, ಬೆಂಗಳೂರು, ಎಂ.ಪಿ.ಪಿ. ಹೌಸ್, ಗಾಂಧಿನಗರ, ಬೆಂಗಳೂರು.